Advertisment

ಹೇಳಿದ್ದು ₹1 ಲಕ್ಷ, ಬಿಲ್ ಮಾಡಿದ್ದು ₹30 ಲಕ್ಷ; ಬೆಂಗಳೂರಲ್ಲಿ ವೈದ್ಯರ ಹಣದಾಹಕ್ಕೆ ಬಾಣಂತಿ ಬಲಿ? ಕರುಣಾಜನಕ ಸ್ಟೋರಿ!

author-image
admin
Updated On
ಅವಳಿ ಮಕ್ಕಳಿಗೆ ಜನ್ಮ ನೀಡಿ ಕಣ್ಮುಚ್ಚಿದ ಜನನಿ.. ಲಕ್ಷ ಲಕ್ಷ ಬಿಲ್ ಮಾಡಿದ್ದ ಆಸ್ಪತ್ರೆ ಏನು ಮಾಡ್ತು ಗೊತ್ತಾ?
Advertisment
  • ಅವಧಿಗೂ ಮುನ್ನವೇ ಅಂದ್ರೆ 2 ತಿಂಗಳ‌ ಮೊದಲೇ ವೈದ್ಯರಿಂದ ಡೆಲಿವರಿ
  • ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಆರೋಪ
  • ಅವಳಿ ಮಕ್ಕಳಿಗೆ ಜನ್ಮ ನೀಡಿದ ಜನನಿ ಮಹಿಳೆಯ ಸ್ಥಿತಿ ಚಿಂತಾಜನಕ

ಬೆಂಗಳೂರು: ವೈದ್ಯರ ನಿರ್ಲಕ್ಷ್ಯ ಮತ್ತು ಖಾಸಗಿ ಆಸ್ಪತ್ರೆಯ ಹಣದಾಹಕ್ಕೆ ಬಾಣಂತಿ ಪ್ರಾಣ ಕಳೆದುಕೊಂಡಿರುವ ಆರೋಪ ಕೇಳಿ ಬಂದಿದೆ. ಓಲ್ಡ್ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಮಹಿಳೆಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisment

ಕ್ಲೌಡ್ ನೈನ್‌ ಆಸ್ಪತ್ರೆಯ ವೈದ್ಯರು ಜನನಿ ಎಂಬ ಮಹಿಳೆಗೆ ಅವಧಿಗೆ ಮುಂಚೆ ಅಂದ್ರೆ 65 ದಿನಗಳ ಮುನ್ನವೇ ಆಪರೇಷನ್ ಮಾಡಿಸಿದ್ದಾರಂತೆ. ಗರ್ಭಿಣಿಯಾಗಿದ್ದ ಜನನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದಾದ ಮೇಲೆ ನಡೆದಿದ್ದು ನಿಜಕ್ಕೂ ಘನಘೋರ ದುರಂತ. ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 20 ದಿನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಜನನಿ ಸಾವನ್ನಪ್ಪಿದ್ದಾರೆ. ಇದೀಗ ಬಾಣಂತಿಯ ಮೃತದೇಹ ಕೊಡಲು ಮತ್ತೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಲಾಗಿದೆ.

publive-image

ಅಸಲಿಗೆ ಆಗಿದ್ದೇನು?
ಗರ್ಭಿಣಿಯಾಗಿದ್ದ ಜನನಿಗೆ ಜುಲೈ-5ಕ್ಕೆ ಡೆಲಿವರಿ ಡೇಟ್ ನೀಡಲಾಗಿತ್ತು. ಆದರೆ ಮೇ 2ಕ್ಕೆ ಕ್ಲೌವ್ಡ್ ನೈನ್ ಆಸ್ಪತ್ರೆಯಲ್ಲಿ ಅವಧಿಗೂ ಮುನ್ನವೇ ಅಂದ್ರೆ ಎರಡು ತಿಂಗಳ‌ ಮೊದಲೇ ವೈದ್ಯರು ಡೆಲಿವರಿ ಮಾಡಿದ್ರಂತೆ. ಈ ವೇಳೆ ಇಂಟರ್ನೆಲ್ ಬ್ಲೀಡಿಂಗ್ ಆಗಿ ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಜನನಿ ಗಂಡನಿಗೂ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲವಂತೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಹೋಗುವವರೇ ಹುಷಾರ್​.. ನೀವು ಓದಲೇಬೇಕಾದ ಸ್ಟೋರಿ ಇದು..!

Advertisment

ತಾಯಿ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಕ್ಲೌವ್ಡ್‌ ನೈನ್ ಆಸ್ಪತ್ರೆ ವೈದ್ಯರು ಮತ್ತೊಂದು ಯಡವಟ್ಟು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬಾಣಂತಿಯನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ‌ಮಾಡಿದ್ದಾರೆ ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಜನನಿ 20 ದಿನ ಹೋರಾಡಿ ಕೊನೆಯುಸಿರೆಳೆದಿದ್ದಾರೆ.

publive-image

ಮೃತದೇಹಕ್ಕೆ ₹10 ಲಕ್ಷ ಬೇಡಿಕೆ
ಗಂಭೀರ ಸ್ಥಿತಿಯಲ್ಲಿದ್ದ ಜನನಿ ಮಣಿಪಾಲ್ ಆಸ್ಪತ್ರೆಯಲ್ಲಿ ನಿನ್ನೆ‌ ಕೊನೆಯುಸಿರೆಳೆದಿದ್ದಾರೆ. ಬಾಣಂತಿಯ ಮೃತದೇಹ‌ ಕೊಡಲು ಮಣಿಪಾಲ್ ಆಸ್ಪತ್ರೆಯವರು ಹಿಂದೇಟು ಹಾಕಿದ್ದರಂತೆ. 10 ಲಕ್ಷ ರೂಪಾಯಿ ಕೊಟ್ಟು ಮೃತದೇಹ ತಗೆದುಕೊಂಡು ಹೋಗಿ ಅಂತ ಮಣಿಪಾಲ್ ಆಸ್ಪತ್ರೆಯವರು ಹೇಳಿದ್ದಾರಂತೆ

ಮಣಿಪಾಲ್ ಆಸ್ಪತ್ರೆಗೆ ನಾವು ಶಿಫ್ಟ್ ಮಾಡಿಲ್ಲ. ನಾವ್ಯಾಕೆ ದುಡ್ಡು ಕೊಡ್ಬೇಕು? ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು ಕ್ಲೌವ್ಡ್ ನೈನ್‌ ಆಸ್ಪತ್ರೆಯವರು. ನೀವು ಅವರ ಹತ್ರನೇ ದುಡ್ಡು ಕೇಳಿ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

Advertisment

ಇದನ್ನೂ ಓದಿ:ಮೈಸೂರಲ್ಲಿ ಒಂದೇ ಕುಟುಂಬದ ನಾಲ್ವರ ಸಾವು.. ಕಾರಣವೇನು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ! 

ಕುಟುಂಬಸ್ಥರು ಹೇಳೋದೇನು?
ಜನನಿಯನ್ನು ಕ್ಲೌವ್ಡ್‌ ನೈನ್ ಆಸ್ಪತ್ರೆಗೆ ಸೇರಿಸುವಾಗಲೇ 1 ಲಕ್ಷ 30 ಸಾವಿರ ರೂಪಾಯಿ ಬಿಲ್ ಆಗಬಹುದು ಅಂದಿದ್ರು. ತಾಯಿ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಲ್ಲ. ಆದರೆ ಒಂದು ಲಕ್ಷದ ಮೂವತ್ತು ಸಾವಿರ ಬಿಲ್ ಅಂತ ಹೇಳಿದ್ದಾರೆ. ಆದ್ರೆ ಆಮೇಲೆ ಮಹಿಳೆ ಕುಟುಂಬಸ್ಥರಿಂದ ಬರೋಬ್ಬರಿ ₹30 ಲಕ್ಷ ರೂಪಾಯಿ ಖರ್ಚು ಮಾಡಿಸಲಾಗಿದೆ ಅಂತೆ.

ಇರೋದನ್ನೆಲ್ಲಾ ಮಾರಾಟ ಮಾಡಿ ದುಡ್ಡು ಹೊಂದಿಸಿದ್ದೇವೆ. ಇನ್ನು ನಮ್ ಕೈಯಲ್ಲಿ ಏನಿಲ್ಲ ಖರ್ಚು ಮಾಡೋಕೆ. ಇಷ್ಟು ಖರ್ಚು ಮಾಡಿದ್ರೂ ನನ್ನ ಹೆಂಡತಿಯನ್ನು ಉಳಿಸಿಕೊಳ್ಳೋಕೆ ಆಗಿಲ್ಲ ಎಂದು ಗಂಡ ಕಣ್ಣೀರು ಹಾಕುತ್ತಿದ್ದಾರೆ. ಮಗಳನ್ನ ಉಳಿಸಿಕೊಳ್ಳೋಕಾಗಿಲ್ಲವೆಂದು ಜನನಿ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ.

Advertisment

ಇಷ್ಟೆಲ್ಲಾ ಆದ್ರೂ ಇನ್ನೂ ಕುಟುಂಬಸ್ಥರಿಗೆ ಬಾಣಂತಿಯ ಮೃತದೇಹ ಹಸ್ತಾಂತರ ಆಗಿಲ್ಲ. ಸದ್ಯ ಜನನಿ ಮೃತದೇಹ ಮಣಿಪಾಲ್ ಆಸ್ಪತ್ರೆಯಲ್ಲಿದೆ. ಮೃತದೇಹ ಕೊಡದಿದ್ರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment