ಕುದುರೆ ಸವಾರಿ ಮಾಡುವಾಗ ಯಾದವರಾಜ ವಂಶಸ್ಥ ದಾರುಣ ಸಾವು; ಕೊನೇ ಕ್ಷಣದ ವಿಡಿಯೋ ವೈರಲ್‌!

author-image
admin
Updated On
ಕುದುರೆ ಸವಾರಿಯಲ್ಲಿ ಸಾವು.. ಈ ರಾಜವಂಶಸ್ಥನ ದುರಂತ ಎಂಥವರಿಗೂ ಕಣ್ಣೀರು ತರಿಸುತ್ತೆ; ಆಗಿದ್ದೇನು?
Advertisment
  • ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ರಾಜವಂಶಸ್ಥನ ದುರಂತ
  • ದಸರಾ ಹಬ್ಬದ ವೇಳೆ ಯಾದವರಾಜ ವಂಶದಲ್ಲಿ ಕುದುರೆ ಸವಾರಿ
  • ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥನ ದಾರುಣ ಸಾವು

ಕರ್ನೂಲ್‌: ಕುದುರೆ ಸವಾರಿ ಅಂದ್ರೆ ರಾಜರ ಕಾಲದ ಯುದ್ಧಗಳು ನೆನಪಿಗೆ ಬರುತ್ತೆ. ಈಗಂತೂ ಕುದುರೆ ಸವಾರಿ ಮಾಡೋದು, ಕಲಿಯೋದು ಬಹಳ ಅಪರೂಪ. ಆದರೆ ರಾಜವಂಶಸ್ಥರೊಬ್ಬರು ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಸಲ್ಲು ಭಾಯ್​ ಬಾಡಿಗಾರ್ಡ್​ಗೆ ಕೋಟಿ ಕೋಟಿ ರೂಪಾಯಿ ಸ್ಯಾಲರಿ..! ಇವರಿಗೆ ಏನೆಂದು ಕರೆಯುತ್ತಾರೆ ಗೊತ್ತಾ..? 

ಕರ್ನೂಲ್ ಜಿಲ್ಲೆಯ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡಲಾಗುತ್ತೆ. ದಸರಾ ಹಬ್ಬದ ವೇಳೆ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡುವುದು ದೀರ್ಘಕಾಲದ ಪರಂಪರೆ. ಆ ಪರಂಪರೆಯ ಭಾಗವಾಗಿ ಯಾದವರಾಜ ವಂಶಸ್ಥರು ಕುದುರೆ ಸವಾರಿ ಮಾಡುತ್ತಾರೆ.

publive-image

ಇದನ್ನೂ ಓದಿ: ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​ 

ತಲತಲಾಂತರದ ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥ ಪೃಥ್ವಿರಾಜ್‌ ರಾಯುಡು ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ. ಕುದುರೆ ಸವಾರಿ ಮಾಡುವಾಗ ಕಂಟ್ರೋಲ್ ತಪ್ಪಿ ಕೆಳಗೆ ಬಿದ್ದ ಪೃಥ್ವಿರಾಜ್ ರಾಯುಡು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ತೀವ್ರ ಗಾಯಗೊಂಡ ಪೃಥ್ವಿರಾಜ್ ರಾಯುಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


">July 29, 2024

ಕುದುರೆ ಸವಾರಿ ವೇಳೆ ಪೃಥ್ವಿರಾಜ್ ರಾಯುಡು ಆಕಸ್ಮಿಕವಾಗಿ ಕೆಳಗೆ ಬಿದ್ದಿರೋ ವಿಡಿಯೋ ಸೆರೆ ಹಿಡಿಯಲಾಗಿದೆ. ಕೆಳಗೆ ಬಿದ್ದ ಪೃಥ್ವಿರಾಜ್ ಬದುಕುತ್ತಾನೆ ಎಂದು ನಿರೀಕ್ಷೆಯಲ್ಲಿದ್ದ ರಾಜವಂಶಸ್ಥರು ದಿಗ್ಭ್ರಾಂತರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment