newsfirstkannada.com

ಚಿಕಿತ್ಸೆಗಾಗಿ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಯುವಕ.. ಈತನ ಗುಂಡಿಗೆ ನೋಡಿ ತಬ್ಬಿಬ್ಬಾದ ಸಿಬ್ಬಂದಿ

Share :

Published May 28, 2024 at 9:06am

Update May 28, 2024 at 9:57am

    ಮನೆಯ ಬಳಿ ಬಂದಿದ್ದ ಹಾವನ್ನ ಹಿಡಿದಿದ್ದ ಯುವಕ

    ಬೆಟ್ಟದ ಮೇಲೆ ಕೊಂಡೊಯ್ದು ಬಿಡುವಾಗ ಕಚ್ಚಿದ ಹಾವು

    ಡಬ್ಬಿಯಲ್ಲಿ ಹಾವನ್ನ ಹಾಕಿಕೊಂಡು ಬಿಮ್ಸ್ ಆಸ್ಪತ್ರೆಗೆ ಬಂದ ಯುವಕ

ಬೆಳಗಾವಿ: ಯುವಕನೋರ್ವ ಚಿಕಿತ್ಸೆ ಪಡೆಯಲು ಕಚ್ಚಿದ ಹಾವನ್ನು ಜೊತೆಗೆ ತಂದ ಘಟನೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಯುವಕ ಡಬ್ಬಿಯಲ್ಲಿ ಹಾವನ್ನ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ.

ಬೆಳಗಾವಿ ತಾಲೂಕಿನ ಹುಂಚ್ಯಾನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಯುವಕ ಶಾಹಿದ್(21) ಎಂಬಾತನಿಗೆ ಹಾವು ಕಚ್ಚಿತ್ತು. ಬಳಿಕ ಸ್ನೇಹಿತರ ಜೊತೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಯುವಕ ಹಾವನ್ನು ಜೊತೆಗೆ ತಂದಿದ್ದಾನೆ. ಡಬ್ಬಿಯಲ್ಲಿ ಹಾವನ್ನ ಹಾಕಿಕೊಂಡು ಬಿಮ್ಸ್ ಆಸ್ಪತ್ರೆಗೆ ಬಂದಿದ್ದಾನೆ.

ಹಾವು ಕಚ್ಚಿದ್ದೇಗೆ?

ಮನೆಯ ಬಳಿ ಬಂದಿದ್ದ ಹಾವನ್ನ ಶಾಹಿದ್ ಹಿಡಿದಿದ್ದಾನೆ. ಬಳಿಕ ಬೆಟ್ಟದ ಮೇಲೆ ಹಾವು ಬಿಡಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಹಾವು ಆತನಿಗೆ ಕಚ್ಚಿದೆ.

ಇದನ್ನೂ ಓದಿ: ತಾಳಿ ಕಟ್ಟಿದ ಹೆಂಡತಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಗಂಡ.. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?

ಹಾವು ಯಾವುದು ಎಂದು ಗೊತ್ತಾದ್ರೆ ಚಿಕಿತ್ಸೆ ಸುಲಭ ಎಂದು ಭಾವಿಸಿ. ಡಬ್ಬಿಯಲ್ಲಿ ಮುಚ್ಚಿಕೊಂಡು ಜೀವಂತ ಹಾವನ್ನೇ ಶಾಹಿದ್ ಆಸ್ಪತ್ರೆಗೆ ತಂದಿದ್ದಾನೆ. ಇನ್ನು ಡಬ್ಬಿಯಲ್ಲಿ ಇರೋ ಜೀವಂತ ಹಾವು ನೋಡಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ತಬ್ಬಿಬ್ಬಾಗಿದ್ದಾರೆ. ನಂತರ ಚಿಕಿತ್ಸೆ ಪಡೆದು ಸ್ನೇಹಿತರ ಬೈಕ್ ನಲ್ಲಿ ಶಾಹಿದ್​ ವಾಪಾಸ್ ಮನೆಗೆ ತೆರಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕಿತ್ಸೆಗಾಗಿ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಯುವಕ.. ಈತನ ಗುಂಡಿಗೆ ನೋಡಿ ತಬ್ಬಿಬ್ಬಾದ ಸಿಬ್ಬಂದಿ

https://newsfirstlive.com/wp-content/uploads/2024/05/Prajawal-Revanna.jpg

Load More