newsfirstkannada.com

ಬರ್ತ್​​ಡೇ ದಿನವೇ ಎತ್ತಿನಗಾಡಿ ಪಲ್ಟಿಯಾಗಿ ಯುವಕ ದಾರುಣ ಸಾವು.. ಕುಟುಂಬಸ್ಥರು ಕಣ್ಣೀರು

Share :

Published January 31, 2024 at 10:42am

  ಕೆಳಗೆ ಬಿದ್ದ ಯುವಕನ ಮೇಲೆ ಸೌದೆ ಸಮೇತ ಬಿದ್ದ ಎತ್ತಿನಗಾಡಿ

  ಹುಟ್ಟುಹಬ್ಬ ಆಚರಣೆಗೆ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು

  ಸೌದೆ ತೆಗೆದುಕೊಂಡು ವಾಪಸ್ ಬರುವಾಗ ನಡೆದ ದುರ್ಘಟನೆ

ಚಿಕ್ಕಮಗಳೂರು: ಹುಟ್ಟುಹಬ್ಬದ ದಿನದಂದೇ ಎತ್ತಿನ ಗಾಡಿ ಪಲ್ಟಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಮಾಚೇನಹಳ್ಳಿಯಲ್ಲಿ ನಡೆದಿದೆ.

ಮಾಚೇನಹಳ್ಳಿ ಗ್ರಾಮದ ಗೋಪಿ (18) ಮೃತಪಟ್ಟ ಯುವಕ. ತನ್ನ ಬರ್ತ್​​ಡೇ ದಿನವೇ ಸೌದೆ ತರಲೆಂದು ಎತ್ತಿನ ಗಾಡಿಯಲ್ಲಿ ಯುವಕ ಹೋಗಿದ್ದನು. ಸೌದೆ ತೆಗೆದುಕೊಂಡು ರಾತ್ರಿ ವಾಪಸ್ ಬರುವಾಗ ಎತ್ತಿನ ಗಾಡಿ ಪಲ್ಟಿಯಾಗಿದೆ. ಇದರಿಂದ ಕೆಳಗೆ ಬಿದ್ದ ಯುವಕನ ಮೇಲೆ ಸೌದೆಗಳ ಸಮೇತ ಎತ್ತಿನ ಗಾಡಿ ಬಿದ್ದಿದೆ.

ಇದರಿಂದ ಎತ್ತಿನ ಗಾಡಿ ಹಾಗೂ ಸೌದೆಯಡಿ ಸಿಲುಕಿದ್ದ ಯುವಕನನ್ನು ಗ್ರಾಮಸ್ಥರು ಕೂಡಲೇ ರಕ್ಷಣೆ ಮಾಡಿ, ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಜೀವ ಬಿಟ್ಟಿದ್ದಾನೆ. ಮಗನ ಹುಟ್ಟುಹಬ್ಬದ ಆಚರಣೆಗೆ ಕುಟುಂಬಸ್ಥರು ಪೂರ್ವ ತಯಾರಿ ಮಾಡಿಕೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ವಿಧಿಯಾಟವೇ ಬೇರೆಯಾಗಿದ್ದರಿಂದ ಬರ್ತ್​​ಡೇ ದಿನವೇ ಯುವಕ ಸಾವನ್ನಪ್ಪಿದ್ದಾನೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ತ್​​ಡೇ ದಿನವೇ ಎತ್ತಿನಗಾಡಿ ಪಲ್ಟಿಯಾಗಿ ಯುವಕ ದಾರುಣ ಸಾವು.. ಕುಟುಂಬಸ್ಥರು ಕಣ್ಣೀರು

https://newsfirstlive.com/wp-content/uploads/2024/01/CKM_YOUTH_DEAD.jpg

Load More