/newsfirstlive-kannada/media/post_attachments/wp-content/uploads/2025/07/CKM_BNG_YOUTH.jpg)
ಚಿಕ್ಕಮಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಇದಕ್ಕೆ ನಿರ್ದಿಷ್ಟವಾದ ಕಾರಣ ಏನು ಎಂಬುದು ನಿಗೂಢವಾಗಿದೆ. ಹಾಸನ, ಶಿವಮೊಗ್ಗ, ವಿಜಯಪುರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಾರ್ಟ್ ಅಟ್ಯಾಕ್ ಸಂಬಂಧಿಸಿದ ಘಟನೆಗಳು ಸಂಭವಿಸುತ್ತಿವೆ. ಇದೀಗ ಬೆಂಗಳೂರಿನ ಯುವಕ ಚಿಕ್ಕಮಗಳೂರಿನಲ್ಲಿ ಉಸಿರು ಚೆಲ್ಲಿದ್ದಾನೆ.
ಬೆಂಗಳೂರಿನ ಯುವಕ ರಾಹುಲ್ (30) ಹಾರ್ಟ್ ಅಟ್ಯಾಕ್ನಿಂದ ನಿಧನರಾದವರು. ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಎಂದು ಯುವಕ ಸಿಲಿಕಾನ್ ಸಿಟಿಯಿಂದ ಬಂದಿದ್ದನು. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಬಂದು ತಾಲೂಕಿನ ನಲ್ಲೂರು ಗ್ರಾಮದ ಖಾಸಗಿ ಹೋಂ ಸ್ಟೇಯಲ್ಲಿ ಯುವಕ ತಂಗಿದ್ದ.
ಇದನ್ನೂ ಓದಿ:ಹೃದಯಾಘಾತದಿಂದ ಕುಷ್ಟಗಿ ಶಾಸಕರ ಪಿಎ ಚಂದ್ರಕಾಂತ ವಡ್ಡಿಗೇರಿ ನಿಧನ
ಯುವಕ ಮೂರ್ಛೆ ರೋಗದಿಂದ ಮುಂಜಾನೆಯಿಂದ ರೂಮಿನಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಎದೆನೋವು ಕಾಣಿಸಿಕೊಂಡು ಹೃದಯಘಾತದಿಂದ ಯುವಕ ನಿಧನ ಹೊಂದಿದ್ದಾನೆ. ಸದ್ಯ ಯುವಕನ ಮೃತದೇಹ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿನತ್ತ ಯುವಕನ ಕುಟುಂಬಸ್ಥರು ತೆರಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ