newsfirstkannada.com

Plzz​.. ಚಪ್ಪಲಿ ಹುಡುಕಿ ಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟ ಬೆಂಗಳೂರಿನ ಯುವಕ!

Share :

Published July 18, 2023 at 11:23am

Update July 18, 2023 at 11:24am

  ಕಾನ್ಪುರದಲ್ಲಿ ನಡೆದಂತೆ ಬೆಂಗಳೂರಿನಲ್ಲೊಂದು ಬೆಳಕಿಗೆ ಬಂದ ಘಟನೆ

  ಪೊಲೀಸರಿಗೆ ಚಪ್ಪಲಿ ಕಾಣೆಯಾಗಿದೆ ಹುಡುಕಿ ಕೊಡಿ ಎಂದ ಯುವಕ

  ಪೊಲೀಸ್​​ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದ ಯುವಕ

ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ಯುವಕನೊಬ್ಬ ತನ್ನ ಚಪ್ಪಲಿ ಕಾಣೆಯಾಗಿದೆ ಹುಡುಕಿ ಕೊಡಿ ಎಂದು ಪೊಲೀಸ್​ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ.

ಭಾನುವಾರದಂದು ರಾತ್ರಿ ವೇಳೆ ಯುವಕ ಹೈಗ್ರೌಂಡ್​​ ಪೊಲೀಸ್​​ ಠಾಣೆ ವ್ಯಾಪ್ತಿಯ ಕಾರ್​​ ಸ್ಟ್ರೀಟ್​​ನಲ್ಲಿರುವ ಸಭಾ ಭವನವೊಂದಕ್ಕೆ ಬಂದಿದ್ದಾನೆ. ಕಾರ್ಯಕ್ರಮದ ನಿಮಿತ್ತ ಯುವಕ ಚಪ್ಪಲಿಯನ್ನು ಹೊರಕ್ಕೆ ಬಿಟ್ಟು ಕಾರ್ಯಕ್ರಮಕ್ಕೆ ತೆರಳಿದ್ದಾನೆ. ಆದರೆ ಕಾರ್ಯಕ್ರಮ ಮುಗಿದು ಬಂದು ನೋಡಿದಾಗ ಅಲ್ಲಿ ಚಪ್ಪಲಿ ಇಲ್ಲದಿರುವುದು ಗೊತ್ತಾಗಿದೆ. ಸುತ್ತಾಮುತ್ತಾ ಹುಡುಕಾಡಿದರು ಚಪ್ಪಲಿ ಸಿಗದೇ ಇರುವುದರಿಂದ ಬೇಸರಕ್ಕೆ ಒಳಗಾಗಿದ್ದಾನೆ.

112ಗೆ ಕರೆ ಮಾಡಿದ ಯುವಕ

ಕೊನೆಗೆ ಚಪ್ಪಲಿಗಾಗಿ ಎಷ್ಟೇ ಹುಡುಕಾಡಿದರು ಸಿಗದೆ ಬೆಸರಗೊಂಡ ಯುವಕ ಪೊಲೀಸ್​​ ನಿಯಂತ್ರಣ ಕೊಠಡಿ 112ಗೆ ಕರೆ ಮಾಡಿದ್ದಾನೆ. ಚಪ್ಪಲಿ ಕಾಣೆಯಾಗಿದೆ ಹುಡುಕಿಕೊಡಿ ಎಂದು ಅವರ ಬಳಿ ಕೇಳಿಕೊಂಡಿದ್ದಾನೆ.

ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ

ಯುವಕನ ಕರೆ ಸ್ವೀಕರಿಸಿದ ಹೊಯ್ಸಳ ಸಿಬ್ಬಂದಿ ಕೂಡಲೇ ಯುವಕನಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸಭಾಭವನದ ಸುತ್ತಾಮುತ್ತಾ ಹುಡುಕಾಡಿದ್ದಾರೆ. ಆದರೆ ಚಪ್ಪಲಿ ಮಾತ್ರ ಸಿಗಲಿಲ್ಲ. ಕೊನೆಗೆ ಪೊಲೀಸರು ಯುವಕನಿಗೆ ಠಾಣೆಗೆ ಬಂದು ದೂರು ಕೊಡಿ ಎಂದು ಹೇಳಿದ್ದಾರೆ.

ಕಾನ್ಪುರದಲ್ಲಿ ಚಪ್ಪಲಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ವ್ಯಕ್ತಿ

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Plzz​.. ಚಪ್ಪಲಿ ಹುಡುಕಿ ಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟ ಬೆಂಗಳೂರಿನ ಯುವಕ!

https://newsfirstlive.com/wp-content/uploads/2023/07/Police-2.jpg

Load More