/newsfirstlive-kannada/media/post_attachments/wp-content/uploads/2024/06/kopal.jpg)
ಕೊಪ್ಪಳ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗವಿಮಠದಲ್ಲಿ ನಡೆದಿದೆ. ನನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಅಂತ ಯುವಕನೊಬ್ಬ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಇದನ್ನೂ ಓದಿ:Breaking: ಮಂಡ್ಯದಲ್ಲಿ ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್.. ಪ್ರಯಾಣಿಕರಿಗೆ ಗಂಭೀರ ಗಾಯ
ಇನ್ನು, ಪ್ರಕಾಶ್ ಎಂಬಾತ ನನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಅಂತ ಟ್ಯಾಂಕ್ ಏರಿ ಕುಳಿತುಕೊಂಡಿದ್ದ. ಆದರೆ ಇದೇ ವೇಳೆ ಆತನನ್ನು ರಕ್ಷಿಸಲು ಹೋಗಿದ್ದ ಇಬ್ಬರನ್ನು ತಳ್ಳಿ ಪ್ರಕಾಶ್ ಏಕಾಏಕಿ ಮೇಲಿಂದ ಕೆಳಗಡೆ ಹಾರಿದ್ದಾನೆ. ಮೇಲಿಂದ ಕೆಳಗೆ ಬಿದ್ದಿದ್ದ ಪ್ರಕಾಶ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕೂಡಲೇ ಆತನನ್ನು ಪೊಲೀಸ್ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನ ಬಳಿ ಹೋಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ