/newsfirstlive-kannada/media/post_attachments/wp-content/uploads/2025/04/BED-BECOME-CAR.jpg)
ಇದು ಸೋಷಿಯಲ್ ಮೀಡಿಯಾದ ಜಮಾನಾ! ಯಾವ ಸಮಯದಲ್ಲಿ ಯಾವ ಗಲ್ಲಿಯಲ್ಲಿ ಏನು ನಡೆಯುತ್ತೋ? ಅದು ಹೇಗೆ ಸೋಷಿಯಲ್ ಮೀಡಿಯಾಗಳ ಜನ ಕೈಗೆ ಸಿಗುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ನಿತ್ಯ ಒಂದಲ್ಲ ಒಂದು ವಿಚಿತ್ರ, ವಿಶೇಷ, ವಿಸ್ಮಯವಾದ ವಿಷಯಗಳು ನೋಡಲು ಇಲ್ಲವೇ ಓದಲು ಸಿಗುತ್ತವೆ. ನಿತ್ಯವೂ ಒಂದಲ್ಲ ಒಂದು ವಿಡಿಯೋ ವೈರಲ್ ಆಗುವ ಮೂಲಕ ಜಗತ್ತಿನ ಗಮನವನ್ನು ಸೆಳೆಯುತ್ತವೆ. ನೀವು ನಿತ್ಯವೂ ಸೋಷಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಇದ್ದರೆ ಇಂತಹ ವಿಡಿಯೋಗಳು ನಿಮಗೂ ಕೂಡ ದರ್ಶನ ಕೊಟ್ಟಿರುತ್ತವೆ.ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಲ್ಚಲ್ ಎಬ್ಬಿಸಿರುವ ಒಂದು ವಿಡಿಯೋ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಸ್ಥಳೀಯರೇ ಹೋಗಲು ಭಯಪಡುವ ಈ ಜಾಗಕ್ಕೆ ಹೊರಟಿದ್ದ ಅಮೆರಿಕದ ಧೈರ್ಯವಂತ; ಪೊಲೀಸರಿಂದ ಬಂಧನ!
ಪ್ರತಿಯೊಬ್ಬರ ಮನೆಯಲ್ಲಿ ವಿವಿಧ ಬಗೆಯ ಮಂಚಗಳು ಇರುತ್ತವೆ. ನಮಗೆ ರಸ್ತೆಯಲ್ಲಿ ವಿವಿಧ ಕಂಪನಿಗಳ ವಿವಿಧ ಡಿಸೈನ್ನ ಕಾರುಗಳು ನೋಡಲು ಸಿಗುತ್ತವೆ. ಆದರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಮನೆಯಲ್ಲಿರುವ ಮಂಚವೇ ಕಾರಿನ ರೂಪ ಪಡೆದು ರೋಡಿಗೆ ಇಳಿಯುತ್ತದೆ ಅಂತ. ಅಂತಹ ಅಸಾಧ್ಯ ಕಾರ್ಯವನ್ನೊಂದು ಸಾಧ್ಯವಾಗಿಸಿ ತೋರಿಸಿದ್ದಾನೆ ವ್ಯಕ್ತಿಯೊಬ್ಬ. ಮನೆಯ ಮಂಚವನ್ನೇ ಕಾರು ಮಾಡಿಕೊಂಡು ರಸ್ತೆಯ ತುಂಬಾ ಓಡಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ. ಪಲ್ಲಂಗದ ಒಳಗೆಯೇ ಒಂದು ಸ್ಟೇರಿಂಗ್ ಸೃಷ್ಟಿಸಿ ಅದರ ಎದುರು ಕುಳಿತುಕೊಳ್ಳಲು ಒಂದು ಆರಾಮಾದಾಯಕ ಸೀಟ್ ರೆಡಿ ಮಾಡಿ, ನಾಲ್ಕು ಮೂಲೆಗಳಿಗೆ ಚಕ್ರಗಳನ್ನು ಅಳವಡಿಸಿ ಸೇಮ್ ಕಾರಿನ ರೀತಿಯೇ ಪಲ್ಲಂಗವನ್ನು ರೆಡಿ ಮಾಡಿ ರಸ್ತೆಯ ತುಂಬಾ ಈ ಹೊಸ ಮಾದರಿಯ ಕಾರನ್ನು ಓಡಾಡಿಸಿದ್ದಾನೆ ಒಬ್ಬ ಭೂಪ
View this post on Instagram
ನೀವು ನಿಮ್ಮ ಜೀವನದಲ್ಲಿಯೇ ಇಂತಹದೊಂದು ದೃಶ್ಯವನ್ನು ನೋಡಲಿಕ್ಕೆ ಸಾಧ್ಯವೇ ಇರಲಿಕ್ಕಿಲ್ಲ. noyabsk53 ಎಂಬ ಒಂದು ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಈ ಒಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಒಂದು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈಗಾಗಲೇ 4 ಲಕ್ಷ 27 ಸಾವಿರ ಜನರು ನೋಡಿದ್ದಾರೆ ಮತ್ತು ಲೈಕ್ ಕೂಡ ಮಾಡಿದ್ದಾರೆ. ಇಂತಹ ಒಂದು ಕಾರು ಓಡಾಡಿದ್ದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ. ಹಲವು ಜನರು ಇದನ್ನು ಕ್ರಿಯಾಶೀಲತೆ ಎಂದು ಕರೆದರೆ. ಟ್ರಾಫಿಕ್ ಅಧಿಕಾರಿಗಳು ಇದು ನಿಜಕ್ಕೂ ಅಸುರಕ್ಷಿತ ಮತ್ತು ಅಪಾಯವನ್ನು ತಂದೊಡ್ಡುವ ಕೆಲಸ ಎಂದು ಯುವಕನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ