newsfirstkannada.com

ಬೆಳಗಿನಜಾವ ಮನೆ ಮುಂದಿನ ರಸ್ತೆಯಲ್ಲಿ ಬರ್ಬರ ಹತ್ಯೆಯಾದ ಯುವಕ..

Share :

Published February 25, 2024 at 12:14pm

  7 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಯುವಕ

  ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿಜಯ್ ಕುಮಾರ್

  ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ

ಬೆಂಗಳೂರು: ನಡು ರಸ್ತೆಯಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಭೀಕರ ಕೊಲೆ ಮಾಡಿರುವ ಪ್ರಕರಣ ಆನೇಕಲ್​​ನ ಮರಸೂರು ಬಳಿ ನಡೆದಿದೆ. ಹಳೇ ವೈಷ್ಯಮ್ಯದ ಹಿನ್ನೆಲೆ ನಡು ರಸ್ತೆಯಲ್ಲಿ ಯುವಕನ ಮರ್ಡರ್ ಆಗಿದೆ.

ವಿಜಯ್ ಕುಮಾರ್(27) ಕೊಲೆಯಾದ ಯುವಕ. ಮನೋಜ್ ಅಲಿಯಾಸ್ ಬಬ್ಲು ಕೊಲೆ ಪ್ರಕರಣದಲ್ಲಿ ವಿಜಯ್ ಕುಮಾರ್ ಬಂಧನಕ್ಕೆ ಒಳಗಾಗಿ 2017ರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಏಳು ತಿಂಗಳ ಹಿಂದೆ ವಿಜಯ್ ಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದ. ಇಂದು ಬೆಳಗ್ಗೆ 4 ಗಂಟೆಗೆ ವಿಜಯ್ ಕುಮಾರ್​​ನನ್ನು ಮನೆಯಿಂದ ಹೊರಗೆ ಕರೆದು ಕೊಲೆ ಮಾಡಲಾಗಿದೆ.

ವಿಜಯ್ ಕುಮಾರ್ ಮನೆಯ ಎದುರಿನ ರಸ್ತೆಯಲ್ಲೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಹಿಂದೆ ಕೊಲೆ ಆಗಿದ್ದ ಮನೋಜ್ ಕಡೆಯವರು ಕೊಲೆ ಮಾಡಿರುವ ಶಂಕೆ ಇದೆ. ಮನೋಜ್ ಕುಮಾರ್ ಸಹೋದರ ಅರ್ಜುನ್ ಕೊಲೆ ಮಾಡಿದ್ದಾನೆಂದು ವಿಜಯ್ ಪೋಷಕರ ಆರೋಪಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಭೇಟಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗಿನಜಾವ ಮನೆ ಮುಂದಿನ ರಸ್ತೆಯಲ್ಲಿ ಬರ್ಬರ ಹತ್ಯೆಯಾದ ಯುವಕ..

https://newsfirstlive.com/wp-content/uploads/2024/02/BNG-ANEKAL.jpg

Load More