newsfirstkannada.com

ಎಗ್​ರೈಸ್​ ಹೋಟೆಲ್​ನಲ್ಲಿ ಕುಕ್​ ಆಗಿದ್ದ ಯುವಕನ ಭೀಕರ ಹತ್ಯೆ.. ಕಾರಣ ನಿಗೂಢ

Share :

Published February 7, 2024 at 9:08am

Update February 7, 2024 at 9:13am

  ಒಂದೇ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು

  ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

  ಹತ್ಯೆ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು

ಧಾರವಾಡ: ಎಗ್​​ ರೈಸ್​ ಹೋಟೆಲ್​ವೊಂದರಲ್ಲಿ ಕುಕ್ ಆಗಿದ್ದ ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ಭೋವಿಗಲ್ಲಿಯಲ್ಲಿ ತಡರಾತ್ರಿ ನಡೆದಿದೆ.

ಫಕಿರೇಶ್ ಪ್ಯಾಟಿ ಹತ್ಯೆಯಾದ ದುರ್ದೈವಿ. ಸದ್ಯ ಕೊಲೆ ಮಾಡಿರುವ ಆರೋಪಿ ದಾಂಡೇಲಿ ಮೂಲದ ಕನ್ಯಯ್ಯನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಇಬ್ಬರು ನಗರದಲ್ಲಿರುವ ವಿಮಲ್ ಎಗ್ ರೈಸ್ ಹೋಟೆಲ್​​​​ನಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಯಾದ ಯುವಕ ಕುಕ್ ಆಗಿದ್ದನು. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.

ಗಲಾಟೆ ತಾರಕಕ್ಕೇರುತ್ತಿದ್ದಂತೆ ಆರೋಪಿಯು, ಯುವಕ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ನೆಲಕ್ಕೆ ಬಿದ್ದು ತಲೆಯಲ್ಲಿ ರಕ್ತ ಸುರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಈ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಗ್​ರೈಸ್​ ಹೋಟೆಲ್​ನಲ್ಲಿ ಕುಕ್​ ಆಗಿದ್ದ ಯುವಕನ ಭೀಕರ ಹತ್ಯೆ.. ಕಾರಣ ನಿಗೂಢ

https://newsfirstlive.com/wp-content/uploads/2024/02/DWD_EGG_RICE_MURDER.jpg

Load More