Advertisment

ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ! ಅಷ್ಟಕ್ಕೂ ಸಾಯೋ ನಿರ್ಧಾರ ಮಾಡಿದ್ಯಾಕೆ?

author-image
AS Harshith
Updated On
ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ! ಅಷ್ಟಕ್ಕೂ ಸಾಯೋ ನಿರ್ಧಾರ ಮಾಡಿದ್ಯಾಕೆ?
Advertisment
  • ಅತ್ಮಹತ್ಯೆಗೆ ಯತ್ನಿಸಿರುವ ಯುವಕ 34 ವರ್ಷದ ಯುವಕ
  • ಇಂಜಿನಿಯರಿಂಗ್ ಪದವಿ ಅರ್ಧಕ್ಕೆ ಮೊಟಕುಗೊಳಿಸಿದ್ದ
  • ಮನೆಯಲ್ಲಿ ಮೊಬೈಲ್, ಪರ್ಸ್ ಎಲ್ಲವನ್ನ ಬಿಟ್ಟು ಬಂದಿದ್ದ

ಬೆಂಗಳೂರು: ಅದೇನ್​​ ಕೇಡುಗಾಲೋ ಏನೋ? ನಮ್ಮ ಮೆಟ್ರೋ ಮೇಲೆ ಅದ್ಯಾವ ಮಾರಿ ಕಣ್ಣು ಬಿತ್ತೋ? ಅಲ್ಲರೀ ಇತ್ತೀಚೆಗೆ ಸಾಯೋದಕ್ಕೆ ಕೆಲವರಿಗೆ ಮೆಟ್ರೋನೆ ಫೆವರಿಟಾಗಿ ಬಿಡ್ತಾ?. ಮೆಟ್ರೋ ಪ್ರಯಾಣಿಕರಿಗೆ ಮಾತ್ರ ಇಂಥದ್ದೊಂದು ಪ್ರಶ್ನೆ ಮಾತ್ರ ಕಾಡ್ತಿದೆ. ಅಂದ್ಹಾಗೆ ಈಗ್ಯಾಕೆ ಈ ಸುದ್ದಿ ಅಂತೀರಾ? ನಿನ್ನೆ ವ್ಯಕ್ತಿಯೊಬ್ಬ ಮೆಟ್ರೋ ಟ್ರ್ಯಾಕ್​​ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Advertisment

ಡಿಪ್ರೇಷನ್​ನಿಂದ ಅತ್ಮಹತ್ಯೆಗೆ ಯತ್ನಿಸಿದ ಯುವಕ‌!

ರಾತ್ರಿ ಸುಮಾರು 8:50ರ ಸಮಯ. ಎಂದಿನಂತೆ ಮೆಟ್ರೋ ಸಂಚಾರವಿತ್ತು. ಇನ್ನೇನು ಮೆಟ್ರೋ ಟ್ರೈನ್ ಬರುತ್ತಿದ್ದಂತೆ ಯುವಕನೊಬ್ಬ ಹಳಿ ಕಡೆಗೆ ಹಾರಿ ಬಿಟ್ಟಿದ್ದ. ಇದನ್ನ ಗಮನಿಸಿದ ಸಿಬ್ಬಂದಿ ತಕ್ಷಣ ಪವರ್ ಆಫ್ ಮಾಡಿದ್ದಾರೆ. ಮೆಟ್ರೋ ಟ್ರೈನ್ ತಕ್ಷಣ ಅದೇ ಸ್ಥಳದಲ್ಲಿ ನಿಂತಿದೆ. ಪ್ರಯಾಣಿಕರಿಗೆಲ್ಲ ಅತಂಕ. ಏನಾಗಿದೆ ಅನ್ನೋದು ಗೊತ್ತಾಗ್ತಿಲ್ಲ. ಇನ್ನೂ ಕೂಡ ನಿಲ್ದಾಣ ಬಾರದೇ ಟ್ರೈನ್ ಯಾಕೆ ನಿಲ್ತು ಅನ್ನೋದು ಗೊತ್ತಾಗ್ತಿಲ್ಲ. ತಕ್ಷಣ ಹಳಿಗೆ ಇಳಿದ ಸಿಬ್ಬಂದಿ ಯುವಕನನ್ನ ಮೇಲಕ್ಕೆತ್ತಿದ್ದಾರೆ.

publive-image

ನಿನ್ನೆ ರಾತ್ರಿ ಆತ್ಮಹತ್ಯೆಗೆ ಯತ್ನ

ಹೌದು. ಇಷ್ಟೆಲ್ಲಾ ಘಟನೆ ನಡೆದಿದ್ದು ವಿಜಯನಗರದ ಹೊಸಳ್ಳಿ ಮೆಟ್ರೋ ನಿಲ್ದಾಣದಲ್ಲಿ. ಅತ್ಮಹತ್ಯೆಗೆ ಯತ್ನಿಸಿದ ಯುವಕನ ಹೆಸರು ಸಾಗರ್.. ಸುಮಾರು 34 ವರ್ಷ. ಇಂಜಿನಿಯರಿಂಗ್ ಪದವಿಯನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದ. ಆದ್ರೆ ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದ. ಖಿನ್ನತೆಯಿಂದ ಹೊರಬರಲು ಫುಟ್​ಬಾಲ್ ಆಡುತ್ತಿದ್ದ. ಅದ್ರೆ ನಿನ್ನೆ ರಾತ್ರಿ ಅದೇನಾಗಿತ್ತೋ ಗೊತ್ತಿಲ್ಲ. ಮನೆಯಲ್ಲೇ ಮೊಬೈಲ್, ಪರ್ಸ್ ಎಲ್ಲವನ್ನೂ ಬಿಟ್ಟು ಅತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ತಲೆಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆಯಿಂದ 40 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. 9:30ರ ನಂತರ ಮೆಟ್ರೋ ಸಂಚಾರಕ್ಕೆ ಅನುವು ಮಾಡಿಕೊಟ್ರು. ಒಟ್ಟಾರೆ, ಇತ್ತೀಚೆಗೆ ಮೆಟ್ರೋ ಹಳಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸ್ತಿರುವ ಕೇಸ್​​ಗಳು ಹೆಚ್ಚಾಗ್ತಿವೆ. BMRCL ಸ್ವಲ್ಪ ಎಚ್ಚರಿಕೆ ವಹಿಸೋದು ಒಳಿತು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment