newsfirstkannada.com

ಅನ್ಯ ಕೋಮಿನ ಯುವತಿಯನ್ನು ಚುಡಾಯಿಸಿ ಚಪ್ಪಲಿಯಿಂದ ಥಳಿಸಿದ ಯುವಕ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Share :

Published February 13, 2024 at 12:26pm

Update February 13, 2024 at 1:55pm

  ಯುವತಿಗೆ ಚುಡಾಯಿಸುತ್ತಾ ಬಂದಿದ್ದ ಯುವಕ

  ಯುವಕನ ವರ್ತನೆ ಕಂಡು ಚಪ್ಪಲಿ ತೋರಿಸಿದ ಯುವತಿ

  ಚಪ್ಪಲಿ ತೋರಿಸಿದ್ದಕ್ಕೆ ತನ್ನ ಚಪ್ಪಲಿಯಿಂದ ಯುವತಿ ಮೇಲೆ ಹಲ್ಲೆ

ವಿಜಯಪುರ: ಯುವಕನೋರ್ವ ಯುವತಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ವಿಜಯಪುರ ತಾಲೂಕಿನ ನಾಗಠಾಣಾ ಗ್ರಾಮದಲ್ಲಿ ನಡೆದಿದೆ. ಶ್ರೀಶೈಲ‌‌‌ ಮಸಳಿ ಎಂಬ ಯುವಕ ಈ ಕೃತ್ಯವೆಸಗಿದ್ದಾನೆ.

ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಮೊದಲಿಗೆ ಶ್ರೀಶೈಲ‌‌‌ ಯುವತಿಗೆ ಚುಡಾಯಿಸಿದ್ದಾನೆ. ಈ ವೇಳೆ ಯುವತಿ ಆತನ ವರ್ತನೆ ಕಂಡು ಚಪ್ಪಲಿ ತೋರಿಸಿದ್ದಾಳೆ. ಚಪ್ಪಲಿ ತೋರಿಸಿದ್ದಕ್ಕೆ ಕೋಪಗೊಂಡು ಯುವತಿಗೆ ಶ್ರೀಶೈಲ‌‌‌ ಚಪ್ಪಲಿಯೇಟು‌ ಕೊಟ್ಟಿದ್ದಾನೆ.‌

ನಾಗಠಾಣಾ ಗ್ರಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಅನ್ಯ ಕೋಮಿನ ಯುವತಿ ಕೆಲಸ ಮಾಡುತ್ತಿದ್ದಳು. ಶ್ರೀಶೈಲ ಆ ಯುವತಿಗೆ ಕೆಲ ದಿನಗಳಿಂದ ಚುಡಾಯಿಸುತ್ತಾ ಬಂದಿದ್ದ. ನಿನ್ನೆ ಯುವತಿ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ತೆರಳುವಾಗ ಮತ್ತೇ ಚುಡಾಯಿಸಿದ್ದಾನೆ. ಆಗ ಆತನಿಗೆ ಯುವತಿ ಚಪ್ಪಲಿ ತೋರಿಸಿದ್ದಾಳೆ. ಕೋಪಗೊಂಡ ಶ್ರೀಶೈಲ
ಕಂಪ್ಯೂಟರ್ ತರಬೇತಿ ಕೇಂದ್ರದ ಒಳ ಹೋಗಿ ಯುವತಿಯನ್ನು ಹೊರ ತಂದು ಚಪ್ಪಲಿಯಿಂದ ಥಳಿಸಿದ್ದಾನೆ.

ಯುವತಿ ಮೇಲೆ ಚಪ್ಪಲಿಯಿಂದ ಹೊಡೆದ ದೃಶ್ಯ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಈ ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ‌ನೀಡಿದ್ದಾಳೆ. ಅತ್ತ ದೂರು‌‌ ನೀಡುತ್ತಿದ್ದಂತೆ ಯುವಕ ಶ್ರೀಶೈಲ‌ ಪರಾರಿಯಾಗಿದ್ದಾನೆ. ಇತ್ತ ನ್ಯಾಯಕ್ಕಾಗಿ ಯುವತಿ ಹಾಗೂ ಪೋಷಕರು ಒತ್ತಾಯಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ಯ ಕೋಮಿನ ಯುವತಿಯನ್ನು ಚುಡಾಯಿಸಿ ಚಪ್ಪಲಿಯಿಂದ ಥಳಿಸಿದ ಯುವಕ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

https://newsfirstlive.com/wp-content/uploads/2024/02/Vijayapura-1.jpg

Load More