newsfirstkannada.com

ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್‌; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ

Share :

Published April 19, 2024 at 1:25pm

  ಹೊರಮಾವಿನಲ್ಲಿ 28 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

  ದೊಮ್ಮಲೂರು ಬಿಡಿಎ ಪಾರ್ಕ್ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮರ್ಡರ್

  ಸಾರಕ್ಕಿ ಮಾರ್ಕೆಟ್ ಬಳಿಯ ಡಬಲ್ ಮರ್ಡರ್ ಮಾಸುವ ಮುನ್ನವೇ ಬರ್ಬರ ಹತ್ಯೆ

ಬೆಂಗಳೂರು: ಕಳೆದ ಎರಡು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ನೆತ್ತರೇ ಹರಿದಿದ್ದು, ಸಾಲು, ಸಾಲು ಕೊಲೆಗಳು ನಡೆದಿವೆ. ನಿನ್ನೆಯಷ್ಟೇ ಸಾರಕ್ಕಿಯ ಮಾರ್ಕೆಟ್ ಬಳಿಯ ಡಬಲ್ ಮರ್ಡರ್ ನಡೆದಿತ್ತು. ಅನುಷಾ ಮತ್ತು ಸುರೇಶ್ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಈ ಡಬಲ್ ಮರ್ಡರ್ ಪ್ರಕರಣ ಮಾಸುವ ಮುನ್ನವೇ ಮತ್ತೆ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಹೊರಮಾವಿನಲ್ಲಿ ಮಾರಕಾಸ್ತ್ರಗಳಿಂದ 28 ವರ್ಷದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಯುವಕನನ್ನು ಕೀರ್ತಿ ಎಂದು ಗುರುತಿಸಲಾಗಿದೆ. ಕೌಟುಂಬಿಕ‌ ಕಲಹದಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಹೆಣ್ಣೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಹೊರಮಾವಿನಲ್ಲಿ ಕೊಲೆಯಾದ 28 ವರ್ಷದ ಯುವಕ ಕೀರ್ತಿ

ಮತ್ತೊಂದೆಡೆ ನಿನ್ನೆ ರಾತ್ರಿ ದೊಮ್ಮಲೂರು ಬಿಡಿಎ ಪಾರ್ಕ್ ಬಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಶಿವಾಜಿನಗರ ನಿವಾಸಿ ಸತೀಶ್ (32), ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ: ಬೆಂಗಳೂರು: ಸ್ನೇಹಿತನ ಭೇಟಿಗೆ ಹೋಗಿದ್ದ ಯುವಕ ರೈಲಿಗೆ ಸಿಲುಕಿ ಸಾವು 

ಶಿವಾಜಿನಗರ ನಿವಾಸಿ ಸತೀಶ್ (32) ಕೊಲೆಯಾದ ವ್ಯಕ್ತಿ

ಬೆಂಗಳೂರಲ್ಲಿ ಕೊರಿಯರ್ ಕೆಲಸ ಮಾಡ್ತಿದ್ದ ಸತೀಶ್, ಶಿವಾಜಿನಗರದಲ್ಲಿ ಕುಟುಂಬ ಸಮೇತ ವಾಸವಿದ್ದ. ರಾತ್ರಿ ಪಲ್ಲಕ್ಕಿ ಉತ್ಸವ ನೋಡಲು ದೊಮ್ಮಲೂರಿಗೆ ಬಂದಿದ್ದ. ಪಲ್ಲಕ್ಕಿ ಉತ್ಸವ ಮುಗಿಸಿ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ. ಪಾರ್ಟಿಯಲ್ಲಿ ಗಲಾಟೆಯಾಗಿ ಸ್ನೇಹಿತರಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್‌; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ

https://newsfirstlive.com/wp-content/uploads/2024/04/Murder-1.jpg

Load More