Advertisment

ಸ್ನಾನ ಮಾಡಿಸಲು ಹೋಗಿ ಯುವಕ ನೀರು ಪಾಲು; ಪವಾಡ ರೀತಿಯಲ್ಲಿ ಮನೆ ಸೇರಿದ ಕುದುರೆ!

author-image
admin
Updated On
ಸ್ನಾನ ಮಾಡಿಸಲು ಹೋಗಿ ಯುವಕ ನೀರು ಪಾಲು; ಪವಾಡ ರೀತಿಯಲ್ಲಿ ಮನೆ ಸೇರಿದ ಕುದುರೆ!
Advertisment
  • ಕುದುರೆ ಮೇಲೆ ಕುಳಿತುಕೊಂಡು ಕೆರೆಯಲ್ಲಿ ಇಳಿದ ಯುವಕ
  • SDRF ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಾಚರಣೆ
  • ಮುಳುಗಿದ್ದ ಕುದುರೆ ಕೆರೆಯಿಂದ ಆಚೆ ಬಂದು ಸೀದಾ ಮನೆ ಸೇರಿದೆ

ರಾಯಚೂರು: ನೀರು, ಜೀವ ಜಲ. ಯಾಮಾರಿದ್ರೆ ಜೀವವನ್ನೇ ತೆಗೆಯುತ್ತೆ. ರಾಯಚೂರಿನ ಕೆರೆಯಲ್ಲಿ ಕುದುರೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವಿನ ಮನೆ ಕದ ತಟ್ಟಿದ್ದಾನೆ. ಈ ದೃಶ್ಯ ನೋಡಿದ್ರೆ ಆತಂಕ ಮೂಡಿಸುತ್ತೆ. ಕೆರೆಗೆ ಇಳಿಯೋದು, ಅದು ಕೂಡ ಕುದುರೆ ಮೇಲೆ ಕುಳಿತುಕೊಂಡು ಕೆರೆಯಲ್ಲಿ ಇಳಿದು ಯುವಕನೊಬ್ಬ ಸಂಕಷ್ಟ ತಂದುಕೊಂಡಿದ್ದಾನೆ.

Advertisment

ಇದನ್ನೂ ಓದಿ: ಒಂದು ದಿನ ಅಲ್ಲ ಒಂದು ವರ್ಷ.. ಈ 6 ಪ್ರಾಣಿಗಳು ಹನಿ ನೀರು ಕೂಡ ಕುಡಿಯದೇ ಬದುಕಬಲ್ಲವು! ಯಾವುವು ಗೊತ್ತಾ? 

ಕುದುರೆಗೆ ಸ್ನಾನ ಮಾಡಿಸಲು ಹೋಗಿ ಸಾವಿನ ಮನೆ ಸೇರಿದ ಯುವಕ
ರಾಯಚೂರು ನಗರದ ಸಿದ್ರಾಂಪುರ ಕೆರೆಯಲ್ಲಿ ಕುದುರೆಗೆ ಸ್ನಾನ ಮಾಡಿಸಲು ಹೋಗಿ ಯುವಕ ನಾಪತ್ತೆಯಾಗಿದ್ದ. ಜಹಿರಾಬಾದ್ ನಿವಾಸಿ ಅಜೀಮ್​ ಕುದುರೆ ಸಮೇತ ಮುಳುಗಿದ್ದ. ಸಾಕಿದ ಕುದುರೆಗೆ ಸ್ನಾನ ಮಾಡಿಸಲು ಹೋಗಿದ್ದಾಗ ಅದು ಕೆಸರಲ್ಲಿ ಸಿಲುಕಿತ್ತು. ನಂತರ ಅಜೀಮ್ ಕೂಡ ಕೆಸರಲ್ಲಿ ಸಿಲುಕಿದ್ದ. SDRF ಹಾಗೂ ಅಗ್ನಿಶಾಮಕ ದಳ ಯುವಕನಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿತ್ತು.

publive-image

ಪವಾಡ ಎಂಬಂತೆ ಕೆರೆಯಿಂದ ಬಂದು ಮನೆ ಸೇರಿದ ಕುದುರೆ!
ಪವಾಡ ಎಂಬಂತೆ ನೀರಿನಲ್ಲಿ ಮುಳುಗಿದ್ದ ಕುದುರೆ ಬದುಕುಳಿದಿದೆ. ಕೆರೆಯಿಂದ ಆಚೆ ಬಂದು ಸೀದಾ ಮನೆ ಸೇರಿದೆ. ಆದರೆ ಯುವಕನಿಗಾಗಿ ಇಂದು ಕೂಡ ರಕ್ಷಣಾ ಕಾರ್ಯ ಮುಂದುವರೆದಾಗ ಅಜೀಮ್ ಶವವಾಗಿ ಪತ್ತೆಯಾಗಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment