ಅನ್ನ, ನೀರು, ಉದ್ಯೋಗ ಕೊಟ್ಟ ಬೆಂಗಳೂರಿಗೆ ಅಪಮಾನ ಉತ್ತರ!
ಉತ್ತರ ಭಾರತಕ್ಕೆ ಗೋ ಬ್ಯಾಕ್ ಎಂದು ರೊಚ್ಚಿಗೆದ್ದ ಕನ್ನಡಿಗರು
ಬೆಂಗಳೂರಿಗರ ಬಗ್ಗೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ ಯುವತಿ
ಸಿಲಿಕಾನ್ ಸಿಟಿ ಬೆಂಗಳೂರು ಕೋಟ್ಯಾಂತರ ಜನರಿಗೆ ಅನ್ನ, ನೀರು, ಉದ್ಯೋಗ ಕೊಟ್ಟ ಮಾಯಾನಗರಿ. ಇಲ್ಲಿ ಭಾಷೆ, ಧರ್ಮ, ಗಡಿಗಳನ್ನು ಮೀರಿದ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರ ಅತಿರೇಕದ ವರ್ತನೆಯಿಂದ ಬೆಂಗಳೂರಿಗರು ಹಾಗೂ ಕನ್ನಡಿಗರನ್ನು ಕೆಣಕುವ ಕೆಲಸಗಳಾಗುತ್ತಿವೆ.
ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಯುವಕ-ಯುವತಿಯರು ಸಿಲಿಕಾನ್ ಸಿಟಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾರ್ಥ್ ಇಂಡಿಯಾ ಯುವತಿಯ ವಿಡಿಯೋ ಫುಲ್ ವೈರಲ್ ಆಗಿದ್ದು, ಬೆಂಗಳೂರಿನ ಅಭಿಮಾನಿಗಳು ಹಾಗೂ ಕನ್ನಡಿಗರು ಕೆಂಡಕಾರುತ್ತಿದ್ದಾರೆ.
ಇದನ್ನೂ ಓದಿ: ನಾವು ಇಲ್ಲ ಅಂದ್ರೆ PG, ಕ್ಲಬ್‌ಗಳು ಖಾಲಿ ಕಣ್ರೋ.. ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಮತ್ತೊಬ್ಬ ಯುವತಿ!
ಉತ್ತರ ಭಾರತ ಮೂಲದ ಈ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರು ರೊಚ್ಚಿಗೇಳುವಂತೆ ಮಾಡಿದೆ. ಸುಗಂಧ್ ಶರ್ಮಾ ಇನ್ಸ್ಟಾ ಖಾತೆಯಲ್ಲಿ ಈ ಯುವತಿ ಬೆಂಗಳೂರು ಹಾಗೂ ಕನ್ನಡಿಗರ ವಿರೋಧ ರೀಲ್ಸ್ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಉತ್ತರ ಭಾರತದವರಾದ ನಾವು ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್ ಖಾಲಿ ಆಗುತ್ತೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್ ಖಾಲಿ ಆಗುತ್ತೆ. ಕೋರಮಂಗಲ ಕ್ಲಬ್‌ಗಳು ಖಾಲಿಯಾಗುತ್ತೆ ಕಣ್ರೋ. ಕ್ಲಬ್ಗಳಲ್ಲಿ ಡ್ಯಾನ್ಸ್ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತಾಡಿ ಅಂತ ಹೇಳಿದ್ದರು.
ಇದನ್ನೂ ಓದಿ: ‘ಬೆಂಗಳೂರು ನಡಿಯುತ್ತಿರೋದೇ ನಮ್ಮಿಂದ..’ ಕನ್ನಡಿಗರ ಕೆಣಕಿದ ಹೊರ ರಾಜ್ಯದ ಯುವತಿ, ಭುಗಿಲೆದ್ದ ಆಕ್ರೋಶ
ಈ ಯುವತಿ ಶೇರ್ ಮಾಡಿಕೊಂಡ ವಿಡಿಯೋಗೆ ಕನ್ನಡಿಗರು ಕಾಮೆಂಟ್ಸ್ ಬಾಕ್ಸ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ವಿರೋಧದ ಮಧ್ಯೆ ಉತ್ತರ ಭಾರತದ ಈ ಯುವತಿ ಸುಗಂಧ್ ಶರ್ಮಾ ಅಕೌಂಟ್‌ನಲ್ಲಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
View this post on Instagram
ಗೋ ಬ್ಯಾಕ್ ಟು ಯುವರ್ ಸಿಟಿ. ಯು ಬೆಗ್ಗರ್ ಗೋ ಬ್ಯಾಕ್. ಗೋ ಬ್ಯಾಕ್ ಟು ನಾರ್ಥ್ ಇಂಡಿಯಾ ಅಂತ ಜನರೆಲ್ಲಾ ಕಮೆಂಟ್ ಮಾಡುತ್ತಾ ಇದ್ದೀರಿ. ನಾವು ಎಲ್ಲಿ ವಾಸ ಮಾಡಬೇಕು ಅಂತ ಯಾರು ಡಿಸೈಡ್ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ನಾವು ಇದ್ದೇವೆ. ನನ್ನ ರೀಲ್ಸ್‌ಗಳಿಗೆ ಗೋ ಬ್ಯಾಕ್ ಎಂದು ಕಮೆಂಟ್ ಮಾಡುತ್ತಿದ್ದೀರಿ. ನಾನು ಬೆಂಗಳೂರು ಬಿಟ್ಟು ಹೋಗೋದಿಲ್ಲ. ನಾನು ಇಲ್ಲೇ ಇರುತ್ತೇನೆ. ನಾನು ಈ ದೇಶದ ನಾಗರಿಕಳಾಗಿದ್ದೇನೆ. ಏನು ಬೇಕಾದ್ರೂ ಮಾತನಾಡುತ್ತೇನೆ. ಮಾತನಾಡುವುದು ನನ್ನ ಹಕ್ಕು. ನಾನು ಕೆಟ್ಟ ಕಮೆಂಟ್‌ಗಳನ್ನು ಮಾಡುವುದಿಲ್ಲ . ನೀವು ಬೇಕಾದ್ರೆ ಉತ್ತರ ಭಾರತದ ದಿಲ್ಲಿ, ಪಂಜಾಬ್‌ಗೆ ಬನ್ನಿ ಎಂದು ಉತ್ತರ ಭಾರತದ ಈ ಯುವತಿ ಕನ್ನಡಿಗರ ಆಕ್ರೋಶಕ್ಕೆ ಸವಾಲು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ