Advertisment

90 ಲಕ್ಷ ರೂಪಾಯಿ ಕದ್ದ ಯುವತಿ 1 ಲಕ್ಷ ದೇವರ ಹುಂಡಿಗೆ ಹಾಕಿ ಸಿಕ್ಕಿಬಿದ್ದಳು; ಇವಳ ಕಥೆ ಕೇಳಿದ ಪೊಲೀಸ್ರೇ ಶಾಕ್‌!

author-image
admin
Updated On
90 ಲಕ್ಷ ರೂಪಾಯಿ ಕದ್ದ ಯುವತಿ 1 ಲಕ್ಷ ದೇವರ ಹುಂಡಿಗೆ ಹಾಕಿ ಸಿಕ್ಕಿಬಿದ್ದಳು; ಇವಳ ಕಥೆ ಕೇಳಿದ ಪೊಲೀಸ್ರೇ ಶಾಕ್‌!
Advertisment
  • ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಕದ್ದಿದ್ದು ಮೊಮ್ಮಗಳೇ!
  • ಸ್ನೇಹಿತರ ಸಹಾಯದಿಂದ ಕದ್ದ ಹಣ ಮಾಡಿದ್ದೇನು ಗೊತ್ತಾ?
  • 90 ಲಕ್ಷ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದ ಅಜ್ಜ

ಜೈಪುರ: ಮನೆಯಲ್ಲಿದ್ದ ಬೆಲೆ ಬಾಳುವ ಚಿನ್ನ, ಕಂತೆ, ಕಂತೆ ಹಣವನ್ನು ಯಾರಾದ್ರು ಕದ್ದುಕೊಂಡು ಹೋದ್ರೆ ಅದು ಕಳ್ಳತನ. ಅದೇ ಮನೆಯವ್ರೇ ಯಾಮಾರಿಸಿ ಲಪಟಾಯಿಸಿದ್ರೆ ಅದನ್ನ ಕನ್ನ ಅಂತಾನೇ ಹೇಳಬೇಕು. ಅಜ್ಜನ ಮನೆಯಲ್ಲಿ ಮೊಮ್ಮಗಳೇ 90 ಲಕ್ಷ ರೂಪಾಯಿ ಕದ್ದು ಪರಾರಿಯಾಗಿರೋ ಅಚ್ಚರಿಯ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

Advertisment

ರಾಜಸ್ಥಾನದ ಭಿಲ್ವಾಡ ಜಿಲ್ಲೆಯಲ್ಲಿ ಈ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಬೇಧಿಸಿದ ಪೊಲೀಸರು ನಿಜಕ್ಕೂ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಕದ್ದಿದ್ದು ಬೇರೆ ಯಾರು ಅಲ್ಲ. ಆ ವ್ಯಕ್ತಿಯ ಮೊಮ್ಮಗಳೇ ಖತರ್ನಾಕ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ದಳು.

ಇದನ್ನೂ ಓದಿ: ಕದ್ದ ಚಿನ್ನದ ಆಭರಣ ಖರೀದಿ ಮಾಡಿ ಸಿಕ್ಕಿಬಿದ್ದ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ; ಅಸಲಿಗೆ ಆಗಿದ್ದೇನು? 

ಅಜ್ಜನ ತಿಜೋರಿಯಲ್ಲಿದ್ದ ಹಣ ಮಾಯ!
ಬಕ್ಸೂ ಜಾಟ್ ಎಂಬುವರಿಗೆ ಜಮೀನು ಮಾರಾಟ ಮಾಡಿ 90 ಲಕ್ಷ ರೂಪಾಯಿ ಆದಾಯ ಬಂದಿತ್ತು. ಇದೇ ಸಂದರ್ಭದಲ್ಲಿ ಅಜ್ಜನ ಮನೆಗೆ ಮೊಮ್ಮಗಳು ಪೂಜಾ ಚೌಧರಿ ಬಂದಿದ್ದಾಳೆ. ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಇರುವಾಗ ಪೂಜಾ ತನ್ನ ಸ್ನೇಹಿತರ ಸಹಾಯದಿಂದ ಹಣ ಕದ್ದು ಪರಾರಿಯಾಗಿದ್ದಳು.

Advertisment

90 ಲಕ್ಷದಲ್ಲಿ 1 ಲಕ್ಷ ದೇವರ ಹುಂಡಿಗೆ
ಮನೆಯಲ್ಲಿ ಅಜ್ಜ ಮಲಗಿದ್ದಾಗ ತಿಜೋರಿ ಕೀ ತೆಗೆದುಕೊಂಡ ಮೊಮ್ಮಗಳು ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕದ್ದಿದ್ದಾಳೆ. ಕದ್ದ 90 ಲಕ್ಷದಲ್ಲಿ 1 ಲಕ್ಷ ರೂಪಾಯಿಯನ್ನು ಖಾಟೂ ಶ್ಯಾಮ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ನಂತರ ಒಂದೂವರೆ ಲಕ್ಷ ರೂಪಾಯಿ ಒಂದು ಕಾರು ಕೊಂಡುಕೊಂಡಿದ್ದಾರೆ. ಉಳಿದ ಹಣದಲ್ಲಿ ಮಜಾ ಮಾಡಲು ಹೋಗಿದ್ದಾಳೆ.

90 ಲಕ್ಷ ರೂಪಾಯಿ ಕಳೆದುಕೊಂಡ ಅಜ್ಜ ಬಕ್ಸೂ ಜಾಟ್‌ ಪೊಲೀಸ್ ಠಾಣೆೆಗೆ ದೂರು ನೀಡಿದ್ದರು. ಪೊಲೀಸರಿಗೆ ನಾಪತ್ತೆಯಾಗಿದ್ದ ಮೊಮ್ಮಗಳ ಮೇಲೆ ಅನುಮಾನ ಬಂದು ಹುಡುಕಿದಾಗ ಸತ್ಯ ಹೊರ ಬಿದ್ದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಪೂಜಾ ಅಸಲಿ ಪೂರಾಣ ಬಯಲಾಗಿದ್ದು, ಮೊಮ್ಮಗಳ ಬಳಿ ಉಳಿದಿದ್ದ 82 ಲಕ್ಷ ರೂಪಾಯಿ ನಗದನ್ನು ಅಜ್ಜನಿಗೆ ವಾಪಸ್ ಕೊಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment