newsfirstkannada.com

ನಡುರಸ್ತೆಯಲ್ಲಿ ಪ್ರೇಮಿಗಳ ಕಿರಿಕ್.. ಯುವತಿಗೆ ಚಾಕುವಿನಿಂದ ಇರಿದ ಪ್ರೀತಿಸಿದ ಯುವಕ; ಆಮೇಲೆ ಏನಾಯ್ತು?

Share :

Published January 16, 2024 at 6:45pm

  ಒಂದೇ ಊರಿನ ಯುವಕ ಹಾಗೂ ಯುವತಿ ನಡುವೆ ಗಲಾಟೆ

  ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸಾರ್ವಜನಿಕರು

  ಧರ್ಮದೇಟು ತಿಂದ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಯುವಕ ಯುವತಿಗೆ ಚಾಕುವಿನಿಂದ ಇರಿದ ಘಟನೆ ಶಿವಪ್ಪ ನಾಯಕ ವೃತ್ತದಲ್ಲಿ ನಡೆದಿದೆ. ಯುವತಿ ಅಂಬಿಕಾ (22) ಚಾಕು ಇರಿತಕ್ಕೊಳಗಾದ ಯುವತಿ. ಚಾಕು ಇರಿದ ಯುವಕ ಚೇತನ್(28).

ಚಾಕು ಇರಿತಕ್ಕೊಳಗಾದ ಯುವತಿಯು ಶಿವಮೊಗ್ಗ ಜಿಲ್ಲೆಯ ಆಡೋನಹಳ್ಳಿ ಗ್ರಾಮದ ನಿವಾಸಿ. ಅದೇ ಊರಿನ ಚೇತನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗೆ ಈ ಇಬ್ಬರು ಮಾತಾಡುತ್ತಿದ್ದಾಗ ಜಗಳ ಮಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಕೋಪಗೊಂಡ ಯುವಕ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಕೂಡಲೇ ಇದನ್ನು ಗಮನಿಸಿ ಸಾರ್ವಜನಿಕರು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಾಕು ಇರಿದ ಯುವಕನಿಗೆ ಧರ್ಮದೇಟು ನೀಡಿದ್ದಾರೆ. ಧರ್ಮದೇಟು ತಿಂದ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಡುರಸ್ತೆಯಲ್ಲಿ ಪ್ರೇಮಿಗಳ ಕಿರಿಕ್.. ಯುವತಿಗೆ ಚಾಕುವಿನಿಂದ ಇರಿದ ಪ್ರೀತಿಸಿದ ಯುವಕ; ಆಮೇಲೆ ಏನಾಯ್ತು?

https://newsfirstlive.com/wp-content/uploads/2024/01/lovers-1.jpg

Load More