Advertisment

ದರ್ಶನ್​ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ.. ಬಡವರ ಮಕ್ಕಳ ಗತಿ ಏನು? A7 ಆರೋಪಿ ಅನುಕುಮಾರ್ ತಾಯಿ ಆಕ್ರೋಶ

author-image
Veena Gangani
Updated On
ದರ್ಶನ್​ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ.. ಬಡವರ ಮಕ್ಕಳ ಗತಿ ಏನು? A7 ಆರೋಪಿ ಅನುಕುಮಾರ್ ತಾಯಿ ಆಕ್ರೋಶ
Advertisment
  • ದರ್ಶನ್ ಕರುಣೆ ಇಟ್ಟು ನಮ್ಮ ಮಕ್ಕಳನ್ನು ಬಿಡಿಸಬೇಕು ಎಂದ ತಾಯಿ
  • ಮನೆಯಲ್ಲಿ ದುಡಿದು ತಿನ್ನೋ ಮಕ್ಕಳು ಜೈಲಿಗೆ ಹೋಗಿ ಕೂತಿದಾರೆ
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A7 ಆರೋಪಿಯಾಗಿದ್ದ ಅನು

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೋಗಳು, ವಿಡಿಯೋ ಕಾಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಕೈದಿಯೊಬ್ಬ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿ, ದರ್ಶನ್ ಅವರಿಂದ ಹಾಯ್ ಹೇಳಿಸಿದ್ದಾನೆ. ಆ ವಿಡಿಯೋ ಈಗ ವೈರಲ್ ಆಗಿದೆ.

Advertisment

ಇದನ್ನೂ ಓದಿ: ದರ್ಶನ್‌ಗೆ ವಿಡಿಯೋ ಕಾಲ್‌ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!

publive-image

ಇನ್ನು, ಜೈಲಲ್ಲಿ ದರ್ಶನ್​ಗೆ ರಾಜಾತಿಥ್ಯ ಫೋಟೋ ವೈರಲ್‌ ಬೆನ್ನಲ್ಲೇ ಜೈಲು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತವಾಗಿದೆ. ಇದೇ ವಿಚಾರವಾಗಿ A7 ಆರೋಪಿ ಅನು@ ಅನುಕುಮಾರ್ ತಾಯಿ ಜಯಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರನ್ನು ಹೊಗಳಿದ್ರೆ ನಮಗೆ ಬರೋದು ಏನಿದೆ. ದರ್ಶನ್ ಕರುಣೆ ಇಟ್ಟು ನಮ್ಮ ಮಕ್ಕಳನ್ನು ಬಿಡಿಸಬೇಕು. ನಾನು ಜೈಲಿಗೆ ಹೋಗಿಲ್ಲ, ಮಗನನ್ನು ಭೇಟಿ ಮಾಡಿಲ್ಲ. ನಮ್ಮ ಮಗನನ್ನು ಬಿಡಿಸಿಕೊಂಡು ಬರೋಕೆ ನಮ್ಮ ಕೈಯ್ಯಲ್ಲಿ ಶಕ್ತಿಯಿಲ್ಲ. ದರ್ಶನ್ ಜೊತೆ ಹೋಗಿದಾನೆ. ಹಾಗಾಗಿ ಅವರೇ ಸಹಾಯ ಮಾಡಬೇಕು. ನಮ್ಮ ಹತ್ರ ಹಣ ಕೊಟ್ಟು ಬಿಡಿಸಿಕೊಂಡು ಬರುವಷ್ಟು ಶಕ್ತಿ ಇದ್ಯಾ? ನಮ್ಮ ಪರಿಸ್ಥಿತಿ ಹೀಗಿದೆ. ಒಳಗಿಂದು ಯಾರು ಕಂಡೋರು. ಸೊಸೈಟಿ ರಾಗಿ, ಅಕ್ಕಿ ತಿಂದು ಜೀವನ ಮಾಡ್ತೀವಿ. ಇರೋ ಒಬ್ಬ ಮಗಳಿಗೆ ಕಾಯಿ, ಹಣ ಕೊಡೋ ಶಕ್ತಿಯಿಲ್ಲ. ದರ್ಶನ್​ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ. ಬಡವರ ಮಕ್ಕಳ ಗತಿ ಏನು? ದುಡಿದು ತಿನ್ನೋ ಮಕ್ಕಳು ಜೈಲಿಗೆ ಹೋಗಿ ಕೂತಿದ್ದಾರೆ. ನಮಗೇನು ಜಮೀನು ಇದೆಯಾ, ಇರೋದೊಂದು ಗುಡಿಸಲು. ನಮ್ಮ ಹುಡುಗರು ಜೈಲಿಗೆ ಹೋಗಿ ನೋಡ್ಕೊಂಡು ಬಂದಿದ್ದಾರೆ. ದುಡಿಯೋ ಮಕ್ಕಳನ್ನು ತಂದು ಕೂಡಿ ಹಾಕಿದೀನಿ ಅನ್ನೋದು ಅವರಿಗೂ ಇರಬೇಕು ಎಂದು ಬೇಸರ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment