/newsfirstlive-kannada/media/post_attachments/wp-content/uploads/2025/02/AADHAR.jpg)
ನಮ್ಮ ಅಸ್ತಿತ್ವದ ಪ್ರಮುಖ ಗುರುತಿನ ಚೀಟಿ ಅಂದರೆ ಅದು ಆಧಾರ್ ಕಾರ್ಡ್. ಆಧಾರ್ ಪ್ರಾಧಿಕಾರವು ದೇಶದ ಪ್ರತಿಯೊಬ್ಬ ನಾಗರಿಕರಿಗೂ 12 ಅಂಕಿಗಳ ಆಧಾರ್ ಕಾರ್ಡ್ ನೀಡುತ್ತದೆ. 12-ಅಂಕಿಯ ಸಂಖ್ಯೆಯ ಹೊರತಾಗಿ ಅದರಲ್ಲಿ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬೆರಳಚ್ಚು ಸೇರಿದಂತೆ ಕೆಲವು ವೈಯಕ್ತಿಕ ಮಾಹಿತಿ ಕೂಡ ಒಳಗೊಂಡಿರುತ್ತದೆ.
Aadhaar ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆ ಘೋಷಿಸಿದೆ. ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳು ಕೂಡ ಜನರ ಆಧಾರ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ.. iPhone 16 ಮೇಲೆ ಭಾರೀ ಆಫರ್..!
ಆಧಾರ್‌ನಲ್ಲಿ ಬದಲಾವಣೆಗಳು!
ಸರ್ಕಾರಿ ಸಚಿವಾಲಯ ಅಥವಾ ಇಲಾಖೆ ಹೊರತುಪಡಿಸಿ ಯಾವುದೇ ಸಂಸ್ಥೆಯು ಆಧಾರ್ ದೃಢೀಕರಣ ಬಳಸಲು ಬಯಸಿದರೆ ಸಮರ್ಪಕ ಕಾರಣ ನೀಡಬೇಕು. UIDAIಗೆ ಸ್ಪಷ್ಟ ಕಾರಣ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನಿರ್ದಿಷ್ಟ ಉದ್ದೇಶದ ಪ್ರಸ್ತಾವನೆಗೆ ಪ್ರಮಾಣೀಕರಣ ಏಕೆ ಅಗತ್ಯವಿದೆ? ಅದರಿಂದ ಜನರಿಗೆ ಹೇಗೆ ಪ್ರಯೋಜನ ಆಗಲಿದೆ ಅಂತಾ ಖಾಸಗಿ ಕಂಪನಿಗಳು ವಿವರಿಸಬೇಕಾಗುತ್ತದೆ. ಉದ್ದೇಶಗಳು ಸರಿಯಾಗಿದ್ದರೆ ಸರ್ಕಾರ ಅಪ್ರೂವ್ ನೀಡಲಿದೆ.
ಖಾಸಗಿ ಸಂಸ್ಥೆಗಳು ಆಧಾರ್ ಪ್ರವೇಶಕ್ಕೆ ಕೇಂದ್ರ ಷರತ್ತು ವಿಧಿಸಿದೆ. ಯಾವ ಉದ್ದೇಶಕ್ಕೆ ಅಂತಾ ಯುಐಡಿಎಐಗೆ ವಿವರಿಸಬೇಕು. ಅಲ್ಲದೆ, ಆ ಎಲ್ಲಾ ವಿವರಗಳು ಜನರಿಗೆ ಸ್ವೀಕಾರಾರ್ಹವಾಗಿರಬೇಕು. ಕೇಂದ್ರ ವಿಧಿಸಿರುವ ನಿಯಮಗಳನ್ನು ಪಾಲಿಸಬೇಕು. ಯಾರಾದರೂ ವಿರೋಧಿಸಿದರೆ ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲ್ಲ.
ಇದನ್ನೂ ಓದಿ: ಗಗನಯಾನ, ಚಂದ್ರಯಾನ-4 ಅಷ್ಟೇ ಅಲ್ಲ.. ಭಾರತೀಯ ವಿಜ್ಞಾನಿಗಳಿಂದ ಈಗ ಜಲಯಾನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ