/newsfirstlive-kannada/media/post_attachments/wp-content/uploads/2024/11/AADHAR.jpg)
ದೇಶದಲ್ಲಿರುವ ಅತ್ಯಂತ ಗುರುತಿನ, ಮಹತ್ವದ ಡಾಕ್ಯುಮೆಂಟ್ ಅಂದ್ರೆ ಆಧಾರ್ ಕಾರ್ಡ್. ಸ್ಕೂಲ್ ಅಡ್ಮಿಷನ್ನಿಂದ ಹಿಡಿದು, ಉದ್ಯೋಗಕ್ಕೆ ಸೇರುವುದರಿಂದ ಹಿಡಿದು ಎಲ್ಲೆಲ್ಲೂ ಆಧಾರ್ ಬೇಕು. ನಮ್ಮ ಅಸ್ತಿತ್ವದ ಗುರುತಿನ ಚೀಟಿ ಅಂದರೆ ಅದುವೇ ಆಧಾರ್!
ಈ ಕಾರ್ಡ್ನಲ್ಲಿರುವ ಯುನಿಕ್ ಐಡಿ ನಂಬರ್ (Unique ID number) ನಿಮ್ಮ ಗುರುತಿನೊಂದಿಗೆ ಭದ್ರತಾ ಕೆಲಸವನ್ನು ಮಾಡುತ್ತದೆ. ಇದೇ ಕಾರ್ಡ್ ಅನ್ನು ಐಡಿ ಪ್ರೂಫ್ಗಾಗಿ ಎಲ್ಲಾ ಕಡೆ ಬಳಸುತ್ತೇವೆ. ಆಧಾರ್ ಕಾರ್ಡ್ ಇಲ್ಲದೇ ಸರ್ಕಾರದ ಯಾವುದೇ ಸ್ಕೀಮ್ ಪಡೆಯಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಆಧಾರ್ ಕಾರ್ಡ್ ಮಹತ್ವ ಹೊಂದಿದೆ.
ಇದನ್ನೂ ಓದಿ:ಬದುಕಿನ ನಯನ ಚೆನ್ನಾಗಿದ್ದರೆ ಮಾತ್ರ ಜೀವನ.. ಈ ಅಭ್ಯಾಸ ನಿಮಗೆ ಇದೆಯಾ?
ಹೋಟೆಲ್ನಂಥ ಸ್ಥಳಗಳಲ್ಲಿ ರೂಮ್ಸ್ ಬುಕ್ ಮಾಡುವಾಗ ಗುರುತಿನ ಐಡಿಯಾಗಿ ಆಧಾರ್ ನೀಡ್ತೀರಿ. ಇದೇ ನಿಮಗೆ ಮುಳುವಾದರೂ ಅಚ್ಚರಿ ಇಲ್ಲ. ಅನಧಿಕೃತ ಸ್ಥಳಗಳಲ್ಲಿ ಗುರುತಿನ ಚೀಟಿ ಎಂದು ಆಧಾರ್ ಕಾರ್ಡ್ ನೀಡೋದು ತುಂಬಾನೇ ಡೇಂಜರ್. ಆಧಾರ್ನಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಇರುತ್ತವೆ. ಅದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕಾರ್ಡ್ನಲ್ಲಿರುವ ಮಾಹಿತಿ ಮೂಲಕ ಸುಲಭವಾಗಿ ನಿಮ್ಮ ಬ್ಯಾಂಕ್ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಯಾವತ್ತೂ ಕೂಡ ನಿಮ್ಮ ಒರಿಜಿನಲ್ (Original) ಆಧಾರ್
ಅಪರಿಚಿತರಿಗೆ ನೀಡಬೇಡಿ!
ಒಂದು ವೇಳೆ ಅಪರಿಚಿತರಿಗೆ ಒರಿಜಿನಲ್ ಆಧಾರ್ ಕಾರ್ಡ್ ನೀಡಿದರೆ ನಿಮ್ಮಿಂದ ದೊಡ್ಡ ತಪ್ಪು ಆಗಿದೆ ಎಂದರ್ಥ. ಹೋಟೆಲ್, ಕ್ಲಬ್, ಫ್ಲೈಟ್, ಟ್ರೈನ್ ಸೇರಿದಂತೆ ವಿವಿಧ ಕಡೆ ಒರಿಜಿನಲ್ ಆಧಾರ್ ನೀಡೋದನ್ನು ತಪ್ಪಿಸಿಕೊಳ್ಳಿ. ಒಂದು ವೇಳೆ ಒರಿಜಿನಲ್ ಕಾರ್ಡ್ ನೀಡುವ ಪ್ರಮಯ ಬಂದರೆ ಮಾಸ್ಕ್ಡ್ ಆಧಾರ್ ನೀಡಿ..
ಇದನ್ನೂ ಓದಿ:ಬದುಕಿನ ನಯನ ಚೆನ್ನಾಗಿದ್ದರೆ ಮಾತ್ರ ಜೀವನ.. ಈ ಅಭ್ಯಾಸ ನಿಮಗೆ ಇದೆಯಾ?
ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೇನು?
Masked Aadhar Card ಕಾನ್ಸೆಪ್ಟ್ ಬಹುತೇಕರಿಗೆ ಗೊತ್ತಿಲ್ಲ. ಇದು ಕೂಡ ನಿಮ್ಮ ಒರಿಜಿನಲ್ ಆಧಾರ್ ಕಾಪಿಯಾಗಿದ್ದು, UIDAIನಿಂದ ಗುರುತಿಸಲ್ಪಟ್ಟಿರುತ್ತದೆ. ಅದನ್ನು ನೀವು ಸುಲಭವಾಗಿ ಐಡಿ ಪ್ರೂಫ್ ಆಗಿ ಬಳಸಬಹುದು. ಈ ಕಾರ್ಡ್ನಲ್ಲಿ ಆಧಾರ್ನ ಮೊದಲ 8 ನಂಬರ್ಸ್ ಬ್ಲರ್ ಆಗಿರುತ್ತವೆ. ಇದರಿಂದ ಯಾರೂ ಮಿಸ್ ಯ್ಯೂಸ್ ಮಾಡಲು ಸಾಧ್ಯವಿಲ್ಲ. ಆನ್ಲೈನ್ ವಂಚಕರಿಂದಲೂ ನೀವು ಮೋಸ ಹೋಗೋದನ್ನು ತಪ್ಪಿಸುತ್ತದೆ.
ಮಾಸ್ಕ್ಡ್ ಆಧಾರ್ ಡೌನ್ಲೋಡ್ ಹೇಗೆ?
- ಆನ್ಲೈನ್ನಲ್ಲಿ ನೀವು UIDAI ವೆಬ್ಸೈಟ್ https://uidai.gov.in/.ಗೆ ಹೋಗಬೇಕು
- ವೆಬ್ಸೈಟ್ನಲ್ಲಿರುವ My Aadhaar ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ.. ತೋರಿಸುವ captcha ಫಿಲ್ ಮಾಡಿ
- ನಂತರ ರಿಜಿಸ್ಟರ್ ಮೊಬೈಲ್ಗೆ OTP ಬರುತ್ತದೆ
- ಒಟಿಪಿ ವೆರಿಫಿಕೇಷನ್ ನಂತರ ಡೌನ್ಲೋಡ್ ಆಪ್ಷನ್ ತೆರೆದುಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನೀವು Checkbox ಪಡೆಯುತ್ತೀರಿ, ನಂತರ ಮಾಸ್ಕ್ಡ್ ಆಧಾರ್ ಕಾರ್ಡ್ ಬೇಕೇ ಎಂದು ಕೇಳಲಾಗುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ:ಈ ಹತ್ತು ಆಹಾರಗಳ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ? ಆರೋಗ್ಯಕ್ಕೆ ತುಂಬಾ ಅಪಾಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ