ಆಧಾರ್ ಕಾರ್ಡ್​​ ಬಳಕೆದಾರರಿಗೆ ಬಿಗ್​ ರಿಲೀಫ್; UIDAIನಿಂದ ಮಹತ್ವದ ಮಾಹಿತಿ

author-image
Ganesh
Updated On
Aadhaar ಬಳಕೆದಾರರಿಗೆ ಗುಡ್ ನ್ಯೂಸ್.. ಕೇಂದ್ರದಿಂದ ಪ್ರಮುಖ ನಿರ್ಧಾರ, ಹೊಸ ಅಪ್ಡೇಟ್!
Advertisment
  • ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಆಧಾರ್
  • ನಿಮ್ಮ ಆಧಾರ್ ಕಾರ್ಡ್​ನಲ್ಲಿ ಹೆಸರು ಬದಲಾವಣೆ ಬಯಸಿದ್ದೀರಾ?
  • 10 ವರ್ಷಗಳಿಂದ ಉಚಿತವಾಗಿ ನವೀಕರಿಸುವ ಸೌಲಭ್ಯ

ಆಧಾರ್ ಕಾರ್ಡ್​ ಅಪ್​ಡೇಟ್ಸ್​ ಇರೋರಿಗೆ ಬಿಗ್ ಅಪ್​ಡೇಟ್ಸ್​ ಸಿಕ್ಕಿದೆ. ಯುಐಡಿಎಐ (Unique Identification Authority of India) ಉಚಿತ ಆಧಾರ್ ಕಾರ್ಡ್​ ನವೀಕರಣದ ಗಡುವನ್ನು ವಿಸ್ತರಿಸಿದೆ. ಡಿಸೆಂಬರ್ 2024ರವರೆಗೆ ಉಚಿತವಾಗಿ ಮಾಡಬಹುದು.

ಆ ಗುಡುವು ಇಂದು ಮುಕ್ತಾಯವಾಗುತ್ತಿತ್ತು, ಇದೀಗ ಮೂರು ತಿಂಗಳವರೆಗೆ ವಿಸ್ತರಿಸಲು ಪ್ರಾಧಿಕಾರ ನಿರ್ಧರಿಸಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, 10 ವರ್ಷಗಳಿಂದ ಉಚಿತವಾಗಿ ನವೀಕರಿಸುವ ಸೌಲಭ್ಯವನ್ನು ಒದಗಿದೆ. ಅದರ ಗಡುವು ಇಂದು ಕೊನೆಗೊಳ್ಳಲಿತ್ತು.

ಮೊದಲು ಮಾರ್ಚ್​ 14 ರಿಂದ ಜೂನ್ 14ರವರೆಗೆ ವಿಸ್ತರಣೆ ಮಾಡಿತ್ತು. ನಂತರ ಸೆಪ್ಟೆಂಬರ್ 14ವರೆಗೆ ವಿಸ್ತರಿಸಿತ್ತು. ಇದೀಗ ಡಿಸೆಂಬರ್ 14ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಯುಐಡಿಎಐ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ನಿಗಧಿತ ಗಡುವಿನ ನಂತರ ನೀವು ಕಾರ್ಡ್​ ನವೀಕರಣಕ್ಕೆ 50 ರೂಪಾಯಿ ಹಣವನ್ನ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್​; ಗಗನಯಾತ್ರಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment