/newsfirstlive-kannada/media/post_attachments/wp-content/uploads/2024/11/AADHAR.jpg)
ಆಧಾರ್ ಕಾರ್ಡ್ ಇರೋರು ಜನ್ಮ ದಿನಾಂಕ, ಬಯೋಮೆಟ್ರಿಕ್ಸ್, ಅಡ್ರೆಸ್ ಮತ್ತು ಇತರೆ ನವೀಕರಣಗಳನ್ನು ನಿರ್ದಿಷ್ಟಪಡಿಸಿದ ಗಡುವಿನವರೆಗೆ ಉಚಿತವಾಗಿ ನವೀಕರಿಸಬಹುದು. ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿಗಧಿಪಡಿಸಿದ ಅವಧಿ ಮುಕ್ತಾಯಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ.
ನೀವು ಏನಾದರೂ ಆಧಾರ್ ಕಾರ್ಡ್‌ನಲ್ಲಿ ಮಿಸ್ಟೇಕ್ಸ್ಗಳನ್ನು ಸರಿಪಡಿಸಿಕೊಳ್ಳುವುದಿದ್ದರೆ ನಾಳೆಯೊಳಗೆ ಮಾಡಿಕೊಳ್ಳಿ. UIDAI ನೀಡಿದ ಗಡುವು ನಾಳೆಗೆ ಮುಗಿಯುತ್ತಿದೆ. ನಾಡಿದ್ದು ಏನಾದರೂ ಅಪ್ಡೇಟ್ಸ್ ಮಾಡಲು ಮುಂದಾದರೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಬಯೋಮೆಟ್ರಿಕ್ಸ್, ಜನ್ಮ ದಿನಾಂಕ, ಉಚಿತ ಅಪ್‌ಡೇಟ್ ಅನ್ನು ಮನೆಯಲ್ಲಿಯೇ ಕೂತು ಮಾಡಬಹುದು. UIDAI ಪ್ರಕಾರ.. ಆಧಾರ್ ಹೊಂದಿರೋರು ಡಿಸೆಂಬರ್ 14 ರ ಮಧ್ಯರಾತ್ರಿ 12 ಗಂಟೆಯವರೆಗೆ MyAadhaar ಪೋರ್ಟಲ್ ಮೂಲಕ ತಮ್ಮ ಕಾರ್ಡ್ ಉಚಿತವಾಗಿ ನವೀಕರಿಸಬಹುದು. ಅಲ್ಲದೇ ಆಧಾರ್ ಸೆಂಟರ್ಗಳಿಗೆ ಹೋಗಿ ಅಪ್ಡೇಟ್ಸ್ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿ:ವಿರಾಟ್ ಕೊಹ್ಲಿ, ಸಚಿನ್, MS ಧೋನಿ.. ಇವರಲ್ಲಿ ಯಾರಿಗೆ ಜಾಹೀರಾತುಗಳಲ್ಲಿ ಹೆಚ್ಚು ಡಿಮ್ಯಾಂಡ್..?
ಆನ್‌ಲೈನ್‌ನಲ್ಲಿ ಆಧಾರ್ ನವೀಕರಿಸಲು ಕ್ರಮಗಳು:
- UIDAI myaadhaar.uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಆಧಾರ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ
- ‘ಆಧಾರ್ ಅಪ್ಡೇಟ್ಸ್ ಆಯ್ಕೆಯನ್ನು ಆರಿಸಿ
- ನವೀಕರಣಕ್ಕಾಗಿ ಅಗತ್ಯ ಇರೋ ಮಾಹಿತಿಯನ್ನು ನಮೂದಿಸಿ
- ನವೀಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಮೇಲಿನ ವಿವರಗಳು ಸರಿಯಾಗಿವೆ ಎಂದು ಪ್ರಮಾಣೀಕರಿಸುತ್ತೇನೆ ಮತ್ತು ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡುವ ಮೂಲಕ ಸಲ್ಲಿಸಿ
- ಕೆಲಸ ಮುಗಿದ ನಂತರ ನೀವು 14 ಅಂಕಿಗಳ ರಶೀದಿ ಸಂಖ್ಯೆಯನ್ನು ಪಡೆಯುತ್ತೀರಿ
- ಈ ಸಂಖ್ಯೆಯಿಂದ ಅಪ್ಡೇಟ್ಸ್ನ ಪ್ರೊಸೆಸ್ ತಿಳಿದುಕೊಳ್ಳಬಹುದು
ಇದನ್ನೂ ಓದಿ:ಮಳೆ ಬರುವ ಹಾಗಿದೆ.. ಬೆಂಗಳೂರಲ್ಲಿ ಇನ್ನೂ ಎಷ್ಟು ದಿನ ಈ ವಾತಾವರಣ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ