newsfirstkannada.com

ಪ್ಯಾನ್​ ಕಾರ್ಡ್​ಗೆ ಇನ್ನೂ ಆಧಾರ್ ಲಿಂಕ್ ಮಾಡಿಲ್ವಾ? ಹಾಗಿದ್ರೆ ಜೇಬಿಗೆ ಕತ್ತರಿ ಪಕ್ಕಾ..!

Share :

Published May 29, 2024 at 1:35pm

Update May 29, 2024 at 2:22pm

    ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡೋದು ಹೇಗೆ..?

    ಆದಾಯ ತೆರಿಗೆ ಇಲಾಖೆ ನೀಡಿರುವ ಕೊನೆಯ ಡೇಟ್ ಯಾವಾಗ?

    ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ ಕೊಟ್ಟ ಎಚ್ಚರಿಕೆ ಏನು?

ಬೆಂಗಳೂರು: ಪ್ಯಾನ್​​ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮೇ 31 ಡೆಡ್​​ಲೈನ್ ಆಗಿದೆ. ಈ ಅವಧಿಯೊಳಗೆ ನೀವು ಲಿಂಕ್ ಮಾಡಿಕೊಳ್ಳದಿದ್ರೆ ಭಾರೀ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಹುಷಾರ್​​.

ಆಧಾರ್​ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೇವಲ 2 ದಿನ ಮಾತ್ರ ಬಾಕಿ ಇದೆ. ಒಂದು ವೇಳೆ ನೀವು ಈ ಗಡುವನ್ನು ತಪ್ಪಿಸಿಕೊಂಡ್ರೆ ದುಪ್ಪಟ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತೆರಿಗೆದಾರರಿಗೆ, ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಇದೇ 31 ರೊಳಗೆ ಆಧಾರ್ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.

ಈ ಹಿನ್ನೆಲೆ 31ರೊಳಗೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಅವಶ್ಯಕವಾಗಿದೆ. ಒಂದು ವೇಳೆ ಲಿಂಕ್ ಮಾಡದಿದ್ರೆ ಡಬಲ್ ಟಿಡಿಎಸ್ (Tax Deducted at Source) ಪಾವತಿಸಬೇಕಾಗುತ್ತದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ (CBDT) ಸುತ್ತೋಲೆ ಹೊರಡಿಸಿದೆ. ನೀವು ಹೆಚ್ಚುವರಿ ತೆರಿಗೆಯನ್ನು ತಪ್ಪಿಸಿಕೊಳ್ಳಬೇಕು ಅಂದರೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮನೆಯಲ್ಲೇ ಕುಳಿತು ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಬಹುದು.

ಪ್ಯಾನ್​ಗೆ ಆಧಾರ್‌ ಲಿಂಕ್ ಮಾಡೋದು ಹೇಗೆ..?

  • ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ https://www.incometax.gov.in/iec/foportal/ ಗೆ ಹೋಗಬೇಕು.
  • Adhar Links ಮೇಲೆ ಕ್ಲಿಕ್ ಮಾಡಿ ಮತ್ತು ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಿ
  • ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ, ವ್ಯಾಲಿಡೇಟ್ ಕ್ಲಿಕ್ ಮಾಡಿ
  • ಆಧಾರ್ ಕಾರ್ಡ್‌ನಲ್ಲಿ ಬರೆದಿರುವ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಭರ್ತಿ ಮಾಡಿ ಮತ್ತು Validate ಮೇಲೆ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾನ್​ ಕಾರ್ಡ್​ಗೆ ಇನ್ನೂ ಆಧಾರ್ ಲಿಂಕ್ ಮಾಡಿಲ್ವಾ? ಹಾಗಿದ್ರೆ ಜೇಬಿಗೆ ಕತ್ತರಿ ಪಕ್ಕಾ..!

https://newsfirstlive.com/wp-content/uploads/2024/05/ADHAR-AND-PAN.jpg

Load More