/newsfirstlive-kannada/media/post_attachments/wp-content/uploads/2024/11/Dr-A-Mumtaj.jpg)
ಎಂ.ಎಸ್ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಕ್ವಾಲಿಟಿ ಅಸ್ಸುರೇನ್ಸ್‌ನ ಡೈರೆಕ್ಟರ್ ಮತ್ತು NAAC ಮಾಜಿ ಹಿರಿಯ ಅಕಾಡೆಮಿಕ್ ಕನ್ಸಲ್ಟೆಂಟ್ ಡಾ. ಎ ಮುಮ್ತಾಜ್ ಅವರಿಗೆ ಅದ್ವಿಕ (AADHVIKA) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಡಾ. ಎ ಮುಮ್ತಾಜ್ ಅವರಿಗೆ ಅದ್ವಿಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಬಂದರು ಹಾಗೂ ಪ್ರವಾಸೋದ್ಯಮದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯಕ್ ಅವರು ಡಾ.ಎ ಮುಮ್ತಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಇದನ್ನೂ ಓದಿ: ಸಪ್ತ ಸಾಗರದಾಚೆಯಲ್ಲೂ ಕನ್ನಡತಿ ಹವಾ.. ಅಮೆರಿಕಾದಲ್ಲಿ ಮೋಡಿ ಮಾಡಿದ ನಯನಾ ವಿಶ್ವ? ಯಾರಿವರು?
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಅಧ್ಯಕ್ಷರಾದ ಡಾ.ಎಂ.ಬಿ ಜಯರಾಂ ಅವರು ಹಾಜರಿದ್ದರು.
ಡಾ. ಮುಮ್ತಾಜ್ ಅವರು ಗ್ರಾಮೀಣ ಮಕ್ಕಳ ಆರೋಗ್ಯದ ಉನ್ನತಿ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಭಾರತದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣದ ಕುರಿತಾಗಿ ಪ್ರಚಾರಪಡಿಸಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಅದ್ವಿಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ