/newsfirstlive-kannada/media/post_attachments/wp-content/uploads/2024/11/JOBS_POST_JOB.jpg)
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ನೇಮಕಾತಿ 2025ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇದೊಂದು ಸರ್ಕಾರಿ ಸಂಸ್ಥೆ ಆಗಿದ್ದರಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮಿನಿ ರತ್ನ ವರ್ಗ-1 ಸ್ಥಾನಮಾನ ನೀಡಲಾಗಿದೆ.
ಈ ನೇಮಕಾತಿಯು ಒಟ್ಟು 20 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶ ಹೊಂದಿದೆ. ಆಯ್ಕೆ ಆದವರಿಗೆ ಸಂಬಳವನ್ನು ಪಾವತಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನು ಅರ್ಜಿಗೆ ಸಂಬಂಧಿಸಿದಂತೆ ಕೊನೆ ದಿನಾಂಕ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಎಷ್ಟು ಹುದ್ದೆಗಳು ಎನ್ನುವ ಮಾಹಿತಿ ಇಲ್ಲಿವೆ.
ಹುದ್ದೆಯ ಹೆಸರು- ಸಲಹೆಗಾರ ಹುದ್ದೆ (Consultant)
ಎಷ್ಟು ಹುದ್ದೆಗಳು ಇವೆ- 20
ಆಯ್ಕೆ ಆದವರಿಗೆ ಪ್ರತಿ ತಿಂಗಳ ಸಂಬಳ- 75,000 ರೂಪಾಯಿ
/newsfirstlive-kannada/media/post_attachments/wp-content/uploads/2024/12/JOBS_BANK-4.jpg)
ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಏನೇನು?
- ಉದ್ಯೋಗ ಆಕಾಂಕ್ಷಿಗೆ 65 ವರ್ಷಗಳ ಒಳಗೆ ಇರಬೇಕು
- ರಾಜ್ಯ ಅಥವಾ ಕೇಂದ್ರ ಸರ್ಕಾದಡಿ ಕೆಲಸ ಮಾಡಿದ ಅನುಭವ ಇರಬೇಕು ಅಥವಾ
- ರಕ್ಷಣಾ ಇಲಾಖೆಯಲ್ಲಿ 10 ವರ್ಷಗಳ ಸೇವೆ ಸಲ್ಲಿಸಿರುವವರಿಗೆ ಅವಕಾಶ
- ಉದ್ಯೋಗದಿಂದ ನಿವೃತ್ತಿ ಪಡೆದು ಕನಿಷ್ಠ ಒಂದು ತಿಂಗಳ ಆಗಿದ್ರೆ ಸಾಕು
- AAIನಲ್ಲಿ 5 ವರ್ಷಕ್ಕಿಂತ ಹೆಚ್ಚು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವವರು ಅನರ್ಹರು ಆಗಿರ್ತಾರೆ
ಆಯ್ಕೆ ಪ್ರಕ್ರಿಯೆ
- ದಾಖಲೆ ಪರಿಶೀಲಿಸಿ ಹೆಸರುಗಳ ಶಾರ್ಟ್‌ಲಿಸ್ಟ್
- ವೈಯಕ್ತಿಕ ಸಂದರ್ಶನ
- ಸಂದರ್ಶನದ ಕಾರ್ಯಕ್ಷಮತೆ ಗಣನೆಗೆ ಎಗೆದುಕೊಳ್ಳಲಾಗುತ್ತದೆ
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಎಲ್ಲಾ ಅಗತ್ಯ ಪೋಷಕ ದಾಖಲೆಗಳ ಸ್ವಯಂ ದೃಢೀಕರಿಸಿ ಕಳುಹಿಸಬಹುದು.
ಇಮೇಲ್: [email protected] ಇತರೆ ಮಾಹಿತಿಗಾಗಿ ಎಎಐ ವೆಬ್​ಸೈಟ್​ಗೆ ಭೇಟಿ ನೀಡಬಹುದು.
ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 19 ಮಾರ್ಚ್ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 02 ಏಪ್ರಿಲ್ 2025
ಸಂದರ್ಶನ ಮಾಡುವ ದಿನಾಂಕವನ್ನು ಘೋಷಣೆ ಮಾಡಲಾಗುವುದು
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us