/newsfirstlive-kannada/media/post_attachments/wp-content/uploads/2025/07/Jwala_Gutta.jpg)
ತಮಿಳು ನಟ ವಿಷ್ಣು ವಿಶಾಲ್ ಮತ್ತು ಅವರ ಪತ್ನಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಮ್ಮ ಮಗಳ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜ್ವಾಲಾ ಗುಟ್ಟಾ ಮಗಳಿಗೆ ಹೆಸರಿಡಲು ಬಾಲಿವುಡ್ ನಟ ಅಮೀರ್ ಖಾನ್ ಮುಂಬೈನಿಂದ ಹೈದರಾಬಾದ್‌ಗೆ ಆಗಮಿಸಿದ್ದು ವಿಶೇಷ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮೀರ್ ಖಾನ್, ಜ್ವಾಲಾ ಗುಟ್ಟಾ- ವಿಷ್ಣು ವಿಶಾಲ್ ಅವರ ಹೆಣ್ಣು ಮಗುವಿಗೆ ಮೀರಾ ಎಂದು ಹೆಸರಿಟ್ಟರು. ಈ ಭಾವನಾತ್ಮಕ ಕ್ಷಣಗಳು ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ ಕುಟುಂಬ ಸಾಕ್ಷಿಯಾಯಿತು.
ತಮ್ಮ ಮಗಳ ನಾಮಕರಣ ಸಮಾರಂಭದ ಚಿತ್ರಗಳನ್ನು ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜ್ವಾಲಾ ಗುಟ್ಟಾ ಅಮೀರ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜ್ವಾಲಾ ಗುಟ್ಟಾ ಇನ್​​ಸ್ಟಾದಲ್ಲಿ ಈ ಬಗ್ಗೆ ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ನಮ್ಮ ಮೀರಾ, ಇನ್ನೇನನ್ನೂ ಕೇಳಲು ಸಾಧ್ಯವಾಗಲಿಲ್ಲ!! ನೀವು ಇಲ್ಲದೇ ಈ ಪ್ರಯಾಣ ಅಸಾಧ್ಯವಾಗುತ್ತಿತ್ತು ಆಮೀರ್!! ನಾವು ನಿಮ್ಮನ್ನು ಪ್ರೀತಿಸುತ್ತೇವೆ. ವಿಶೇಷ ಸೂಚನೆ- ಸುಂದರ ಮತ್ತು ಚಿಂತನಶೀಲ ಹೆಸರಿಗೆ ಧನ್ಯವಾದಗಳು!!!! ಎಂದು ಜ್ವಾಲಾ ಗುಟ್ಟಾ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಿಳು ನಟ ವಿಷ್ಣು ವಿಶಾಲ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ 2021ರ ಏಪ್ರಿಲ್​ನಲ್ಲಿ ವಿವಾಹವಾಗಿದ್ದರು. ವಿವಾಹಕ್ಕೂ ಮುನ್ನ 2 ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅಮೀರ್ ಖಾನ್ ಅವರ ಈ ಕಾರ್ಯಕ್ಕೆ ವಿಷ್ಣು ವಿಶಾಲ್ ಇನ್​​ಸ್ಟಾದಲ್ಲಿ ಧನ್ಯವಾದ ತಿಳಿಸಿದ್ದಾರೆ. ವಿಷ್ಣು ವಿಶಾಲ್ ಅವರ ಇನ್​​ಸ್ಟಾದಲ್ಲಿ ನಮ್ಮ ಮಗುವಿಗೆ ಹೆಸರಿಡಲು ಹೈದರಾಬಾದ್​ಗೆ ಬಂದಿದ್ದಕ್ಕಾಗಿ #AamirKhan ಸರ್ ಅವರಿಗೆ ನಮ್ಮ MIRAA ದೊಡ್ಡ ಅಪ್ಪುಗೆಯನ್ನು ಪರಿಚಯ ಆಗಿದೆ. MIRA ಬೇಷರತ್ತಾದ ಪ್ರೀತಿ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ ಎಂದು ಬರೆದಿದ್ದಾರೆ.
ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ ತಮ್ಮ ವೈಯಕ್ತಿಕ ಜೀವನದ ಅಪರೂಪದ ಕ್ಷಣಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನಟನೆಯ ಕ್ಷೇತ್ರದಲ್ಲಿ ಪ್ರಸಿದ್ಧಿ ಆಗಿರುವ ವಿಷ್ಣು ವಿಶಾಲ್, ಬ್ಯಾಡ್ಮಿಂಟನ್ ಕ್ಷೇತ್ರದ ಮಿನುಗು ತಾರೆ ಜ್ವಾಲಾ ಗುಟ್ಟಾ ಇಬ್ಬರು ಸೋಷಿಯಲ್ ಮೀಡಿಯಾ ಮೂಲಕ ಜನರು, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ ಕೇಸ್.. ಏರ್​ ಇಂಡಿಯಾ ಪ್ಲೇನ್ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗ!
2023ರ ಚೆನ್ನೈ ಪ್ರವಾಹದ ಸಮಯದಲ್ಲಿ ಅಮೀರ್ ಖಾನ್ ಮತ್ತು ವಿಷ್ಣು ವಿಶಾಲ್ ಅವರನ್ನು ದೋಣಿಯ ಮೂಲಕ ರಕ್ಷಿಸಲಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್ ಹಾಗೂ ವಿಷ್ಣು ವಿಶಾಲ್ ಇಬ್ಬರು ಒಂದೇ ಪ್ರದೇಶದಲ್ಲಿ ಉಳಿದು ಪರಸ್ಪರ ಸ್ನೇಹಿತರಾದರು. ಜನವರಿ 2024ರಲ್ಲಿ ಖಾನ್ ಅವರ ಮಗಳು ಇರಾ ಖಾನ್ ಅವರ ಮದುವೆಗೆ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಅವರನ್ನು ಆಹ್ವಾನಿಸಲಾಗಿತ್ತು. ಆಮೀರ್ ಖಾನ್ ಮತ್ತು ವಿಷ್ಣು ವಿಶಾಲ್ ಕಳೆದ 2 ವರ್ಷಗಳಿಂದ ಸ್ನೇಹಿತರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ