newsfirstkannada.com

ದಂಗಲ್ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಸುಹಾನಿ ಭಟ್ನಾಗರ್ ದಿಢೀರ್ ಸಾವು.. 19 ವರ್ಷಕ್ಕೆ ಏನಾಯ್ತು?

Share :

Published February 17, 2024 at 3:35pm

Update February 17, 2024 at 3:41pm

  ನಟಿ ಸುಹಾನಿ ಭಟ್ನಾಗರ್ ದಿಢೀರ್​ ಸಾವನ್ನಪ್ಪಿದ್ದು ಹೇಗೆ?

  ಸುಹಾನಿ ಅಪಘಾತದಲ್ಲಿ ಕಾಲಿನ ಮೂಳೆ ಮುರಿದಿತ್ತಾ?

  ದಂಗಲ್ ಚಿತ್ರದಲ್ಲಿ ನಟನ ಕಿರಿ ಮಗಳು ಪಾತ್ರದಲ್ಲಿ ನಟನೆ

ಬಾಲಿವುಡ್​ ಖ್ಯಾತ ನಟ ಅಮೀರ್ ಖಾನ್ ನಟನೆಯ ದಂಗಲ್ ಚಿತ್ರದಲ್ಲಿ ಅಭಿನಯಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್ (19) ಮೃತಪಟ್ಟಿದ್ದಾರೆ. 2016ರಲ್ಲಿ ತೆರೆ ಕಂಡಿದ್ದ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿತ್ತು. ಇದೇ ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್‌ ನಿಧನರಾಗಿದ್ದಾರೆ.

ಇದನ್ನು ಓದಿ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ; 9 ಮಂದಿ ಸಾವು

ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರದಲ್ಲಿ ಆಮೀರ್‌ ಕಿರಿ ಮಗಳು ಬಬಿತಾ ಪಾತ್ರದಲ್ಲಿ ನಟಿ ಸುಹಾನಿ ಭಟ್ನಾಗರ್ ಅಭಿನಯಿಸಿದ್ದರು. ನಟನೆಯ ಜತೆಗೆ ಫ್ಯಾಷನ್‌ ಕಡೆಗೂ ಒಲವು ಬೆಳೆಸಿಕೊಂಡಿದ್ದಳು. ನೂರಾರು ಕನಸು ಕಟ್ಟಿಕೊಂಡಿದ್ದ ಮಗಳನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

View this post on Instagram

A post shared by Suhani Bhatnagar (@bhatnagarsuhani)

ನಟಿ ಸುಹಾನಿ ಭಟ್ನಾಗರ್‌ ಸಾವಿಗೆ ಕಾರಣವೇನು?

ಇತ್ತೀಚೆಗಷ್ಟೇ ಸುಹಾನಿ ಭಟ್ನಾಗರ್​ ಅಪಘಾತದಿಂದ ಅವರ ಕಾಲಿನ ಮೂಳೆ ಮುರಿದಿತ್ತು. ಹೀಗಾಗಿ ಅವರನ್ನು ಕಳೆದ ಕೆಲ ತಿಂಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಔಷಧಿ ಮಾತ್ರೆಗಳ ಸೈಡ್‌ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗಿದೆ. ನಟಿಯ ದಿಢೀರ್​ ಸಾವಿಗೆ ಇಡೀ ಬಾಲಿವುಡ್​ ಮಂದಿ ಶಾಕ್​ ಆಗಿದ್ದಾರೆ. ಇಂದು ಸುಹಾನಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ಫರಿದಾಬಾದ್‌ನ ಸೆಕ್ಟರ್ -15ರಲ್ಲಿನ ಅಜ್ರೌಂಡಾದಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಂಗಲ್ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಸುಹಾನಿ ಭಟ್ನಾಗರ್ ದಿಢೀರ್ ಸಾವು.. 19 ವರ್ಷಕ್ಕೆ ಏನಾಯ್ತು?

https://newsfirstlive.com/wp-content/uploads/2024/02/dangal-girl.jpg

Load More