60ರ ಹರೆಯದಲ್ಲಿ 3ನೇ ಬಾರಿ ಪ್ರೀತಿಯಲ್ಲಿ ಬಿದ್ದ ಮಿಸ್ಟರ್ ಪರ್ಫೆಕ್ಟ್​.. ಬರ್ತ್​ಡೇ ಪಾರ್ಟಿಯಲ್ಲಿ ಗೆಳತಿಯನ್ನು ಪರಿಚಯಿಸಿದ ಅಮೀರ್ ಖಾನ್

author-image
Gopal Kulkarni
Updated On
60ರ ಹರೆಯದಲ್ಲಿ 3ನೇ ಬಾರಿ ಪ್ರೀತಿಯಲ್ಲಿ ಬಿದ್ದ ಮಿಸ್ಟರ್ ಪರ್ಫೆಕ್ಟ್​.. ಬರ್ತ್​ಡೇ ಪಾರ್ಟಿಯಲ್ಲಿ ಗೆಳತಿಯನ್ನು ಪರಿಚಯಿಸಿದ ಅಮೀರ್ ಖಾನ್
Advertisment
  • ಮಿಸ್ಟರ್​ ಪರ್ಫೆಕ್ಟ್​ 3ನೇ ಲವ್ ಸೀಕ್ರೆಟ್ ಕೊನೆಗೂ​ ರಿವೀಲ್​ ​
  • 60ನೇ ವರ್ಷಕ್ಕೆ 3ನೇ ಬಾರಿ ಪ್ರೀತಿಗೆ ಬಿದ್ದ ಅಮೀರ್​ ಖಾನ್​
  • ಬೆಂಗಳೂರಿನ ಗೌರಿ ಸಪ್ರೋಟ್ ಜೊತೆ ಅಮೀರ್​​​ ಡೇಟಿಂಗ್​

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಎಂತಲೇ ಖ್ಯಾತಿ ಪಡೆದಿರುವ ಅಮಿರ್ ಖಾನ್ ತಮ್ಮ 60ನೇ ಹರೆಯದಲ್ಲಿ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ತಮ್ಮ ಮೂರನೇ ಲವ್ ಸೀಕ್ರೆಟ್​ನ್ನು ತಮ್ಮ ಹುಟ್ಟುಹಬ್ಬದ ದಿನದಂದಲೇ ರಿವೀಲ್ ಮಾಡಿದ್ದಾರೆ ಅಮೀರ್​ಖಾನ್​​. ಬೆಂಗಳೂರಿನ ಗೌರಿ ಸಪ್ರೋಟ್​ ಜೊತೆ ಅಮೀರ್​ ಖಾನ್ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡ್ತಿರೋದಾಗಿ ಹೇಳಿದ್ದಾರೆ, ಬರ್ತಡೇ ಪಾರ್ಟಿಯಂದು ಗೌರಿಯನ್ನು ಪರಿಚಯಿಸಿದರು.

ಇದು ಅಮಿರ್​ಖಾನ್ ಬಾಳಿನಲ್ಲಿ 3ನೇ ಬಾರಿ ಪ್ರೀತಿಯಾಗಿಗೆ. ನಿನ್ನೆ 60ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​​ ನಟ ಗ್ರ್ಯಾಂಡ್ ಬರ್ತ್​ಡೇ ಪಾರ್ಟಿಯನ್ನು ಆಯೋಜಿಸಿದ್ದರು.ಈ ಬರ್ತ್​ಡೇ ಪಾರ್ಟಿಗೆ ಶಾರುಖ್​ ಖಾನ್​ರನ್ನು ಕೂಡ ಆಹ್ವಾನಿಸಿದ್ದರು.  ಬರ್ತ್​ಡೇ ಪಾರ್ಟಿಯಲ್ಲಿ ಗೌರಿಯನ್ನು ಪರಿಚಯಿಸಿದ ಅಮೀರ್​. ಗೌರಿ ಜೊತೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಗೌರಿ ಸಪ್ರೋಟ್​, ಅಮೀರ್​ಖಾನ್​ಗೆ 25 ವರ್ಷದಿಂದ ಪರಿಚಯ ಅಮೀರ್ ಸಿನಿಮಾ ಹೌಸ್​ನಲ್ಲಿ ಗೌರಿ ಕೆಲಸ ಮಾಡುತ್ತಿದ್ದರು. ಗೌರಿ ಮೂಲತಃ ಬೆಂಗಳೂರಿನವರು. ತಂದೆ ತಾಯಿ ತಮಿಳು ಹಾಗೂ ಐರಿಷ್​ ಮೂಲದವರು. ಬೆಂಗಳೂರಿನ ಗೌರಿ ಸಪ್ರೋಟ್​ಗೆ ಈಗಾಗಲೇ 6 ವರ್ಷದ ಮಗನಿದ್ದಾನೆ.

ಇದನ್ನೂ ಓದಿ:ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮ

ಇನ್ನು ಅಮೀರ್ ಖಾನ್ ಈ ಹಿಂದೆ ಎರಡು ಮದುವೆಯಾಗಿ ಇಬ್ಬರಿಂದಲೂ ವಿಚ್ಛೇದನ ಪಡೆದು ದೂರಾಗಿದ್ದರು. 2021ರಲ್ಲಿ ಎರಡನೇ ಪತ್ನಿ ಕಿರಣ್ ರಾವ್​ಗೆ ಅಮೀರ್ ಡಿವೋರ್ಸ್​ ನೀಡಿದ್ದರು. ಇದಾದ ಬಳಿಕ ಈಗ ಮೂರನೇ ಮದುವೆಗೆ ಸಜ್ಜಾಗಿದ್ದಾರೆ ಅಮೀರ್​ಖಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment