/newsfirstlive-kannada/media/post_attachments/wp-content/uploads/2024/07/aanvi.jpg)
ಜೀವನ ಅನ್ನೋದು ತುಂಬಾ ಕ್ಷಣಿಕ. ಯಾವಾಗ ಏನ್ ಆಗುತ್ತೆ ಅಂತ ಹೇಳೋದಕ್ಕೆ ಆಗೋದೆ ಇಲ್ಲ. ಯಾಕಂದ್ರೆ ನಮ್ಮ ಜೀವಕ್ಕೆ ಗ್ಯಾರಂಟಿ ಅನ್ನೋದೆ ಇಲ್ಲ. ಮಾಡಿದ ತಪ್ಪನ್ನು ಮತ್ತೆ ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳುವ ಕೆಲಸ ಮಾಡ್ತಾನೇ ಇದ್ದಾರೆ ಈಗಿನ ಜನರು. ಸೋಷಿಯಲ್ ಮೀಡಿಯಾ, ಫೋಟೋಶೂಟ್, ರೀಲ್ಸ್ ಹುಚ್ಚು ಅದೆಷ್ಟು ಜನರ ಪ್ರಾಣವನ್ನು ಬಲಿ ಪಡೆದಿದೆ. ಆದ್ರೂ ನಮ್ಮ ಯಂಗ್ ಜನರೇಷನ್ನವರಿಗೆ ಏನಾಗುತ್ತಿದೆ ಗೊತ್ತಿಲ್ಲ. ಅದೇ ತಪ್ಪನ್ನ ಮತ್ತೆ ಮಾಡಿ ಜೀವನಕ್ಕೆ ಕಂಟಕ ತಂದುಕೊಳ್ಳುವ ಕೆಲಸ ಮಾಡ್ತಾನೆ ಇದಾರೆ. ಇದೀಗ ರೀಲ್ಸ್ ಹುಚ್ಚಿಗಾಗಿ ಇಲ್ಲೊಬ್ಬ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 300 ಅಡಿ ಜಲಪಾತಕ್ಕೆ ಬಿದ್ದು ದುರ್ಮರಣ ಹೊಂದಿದ್ದಾಳೆ.
ಇದನ್ನೂ ಓದಿ: ಪುಣೆಯಲ್ಲಿ ಶರದ್ ಪವಾರ್ ಪಕ್ಷದ ನಾಯಕನ ಮಗನಿಂದ ಭೀಕರ ಕಾರು ಅಪಘಾತ; ಈ ಪಟ್ಟಣಕ್ಕೆ ಏನಾಗ್ತಿದೆ..?
27 ವರ್ಷದ ಯುವತಿ ಆನ್ವಿ ಕಾಮದಾರ್ ಜಗತ್ತಿನ ಹತ್ತಾರು ದೇಶಗಳನ್ನ ಸುತ್ತಿದ್ದಾಳೆ. ಕೇವಲ ದೇಶಗಳನ್ನ ಸುತ್ತೋದು ಮಾತ್ರವಲ್ಲ ಆ ದೇಶಗಳಿಗೆ ಹೋದಾಗ ಹೇಗಿರಬೇಕು? ಎಲ್ಲಿ ಇರಬೇಕು ಅನ್ನೋ ಮಾಹಿತಿ ಕೊಡ್ತಾ ಇದ್ಳು. ಅಂದ್ರೆ ಟ್ರಾವೆಲ್ ಇನ್ಪುಲೆನ್ಸರ್ ಆಗಿ ಕೆಲಸ ಮಾಡ್ತಿದ್ದಳು. ಇನ್ಸ್ಟಾದಲ್ಲಿ ಟ್ರಾವೆಲ್ ವ್ಲಾಗ್ ಮಾಡ್ಕೊಂಡು ಜೀವನವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದ ಹುಡುಗಿ. ಆದ್ರೀಗ ರೀಲ್ಸ್ ಹುಚ್ಚಿಗಾಗಿ ತನ್ನ ಜೀವವನ್ನೆ ಕಳ್ಕೊಂಡಿದ್ದಾಳೆ. ಈಗ ಮಳೆಗಾಲ ಆರಂಭವಾಗಿದೆ. ಜಲಪಾತಗಳು ತುಂಬಿ ಹರಿಯುತ್ತಿವೆ. ಪ್ರಕೃತಿ ಸೌಂದರ್ಯ ಅದ್ಭುತವಾಗಿ ಕಾಣೋದಕ್ಕೆ ಶುರುವಾಗಿದೆ. ಹೀಗಾಗಿ ಇಂಥಾ ಪ್ರಕೃತಿ ಸೌಂದರ್ಯವನ್ನ ಕಣ್ತುಂಬಿಕೊಳ್ಬೇಕು ಅಂತ ಆನ್ವಿ ಜಲಪಾತದ ತುತ್ತ ತುದಿಗೆ ಹೋಗಿ ರೀಲ್ಸ್ ಮಾಡೋದಕ್ಕೆ ಮುಂದಾಗಿದ್ಳು.
ಆದ್ರೆ ನಡೆಯಬಾರದ ದುರಂತವೊಂದು ನಡೆದು ಹೋಗಿತ್ತು. ತುತ್ತ ತುದಿಯಲ್ಲಿ ನಿಂತಾಗ ಆನ್ವಿ ಕಾಲು ಜಾರಿದೆ. ಪರಿಣಾಮ ಬರೋಬ್ಬರಿ 300 ಅಡಿಯ ಪ್ರಪಾತಕ್ಕೆ ಬಿದ್ದುಬಿಟ್ಟಿದ್ದಾಳೆ. ಆನ್ವಿ ಕಾಮಾದರ್ ಚಾರ್ಟೆಟ್ ಅಕೌಂಟೆಡ್ ಆಗಿ ಕೆಲಸ ಮಾಡ್ತಿದ್ಳ. ಮನೆಯಲ್ಲಿ ಯಾವುದಕ್ಕೂ ಕೊರೆತೆಯಿಲ್ಲ. ಮುಂಬೈನ ಮಮಂಡ್ನಲ್ಲಿ ನ್ವಿ ಅಪ್ಪ ಅಮ್ಮನ ಜೊತೆ ವಾಸವಾಗಿದ್ದಳು. ಸೋಷಿಯಲ್ ಮೀಡಿಯಾದಲ್ಲೂ ಆನ್ವಿ ಸುಮಾರು 2 ಲಕ್ಷಕ್ಕೂ ಅಧಿಕ ಜನ ಫಾಲೋವ್ ಮಾಡ್ತಾರೆ. ಹೊಸ ಹೊಸ ಟೂರಿಸಂ ಪ್ಲೇಸ್ಗಳನ್ನ ಜನರಿಗೆ ಪರಿಚಯ ಮಾಡಿಸೋದು. ಲೈಫ್ಸ್ಟೈಲ್ ಸಂಬಂಧಪಟ್ಟ ಮಾಹಿತಿಯನ್ನ ನೀಡೋದು ಮಾಡ್ತಿದ್ಲು. ಈಕೆ ವಿಡಿಯೋಗಳು ಮಿಲಿಯನ್ ಗಟ್ಟಲೇ ವೀವ್ಸ್ ಪಡೆದುಕೊಳ್ತಿದ್ವು.
ಕುಂಬೆ ಜಲಪಾತ ಎಕ್ಸಪ್ಲೋರ್ ಮಾಡಲು ಹೋಗಿ ಪ್ರಾಣ ಕಳ್ಕೊಂಡ ಆನ್ವಿ!
ಹೀಗಿರುವ ಮಳೆಗಾಲದಲ್ಲಿ ಎಕ್ಸಪ್ಲೋರ್ ಮಾಡೋಕೆ ಅಂತ ಆನ್ವಿ ಮಹಾರಾಷ್ಟ್ರದ ಕುಂಬೆ ಜಲಪಾತಕ್ಕೆ ಹೋಗಿದ್ದಾಳೆ. 8 ಜನ ಸ್ನೇಹಿತರ ಜೊತೆಗೂಡಿ ಜುಲೈ 16ಕ್ಕೆ ಕುಂಬೆ ಜಲಪಾತಕ್ಕೆ ಆನ್ವಿ ಹೋಗಿದ್ಳು. ಜಲಪಾತದ ತುತ್ತ ತುದಿಯಲ್ಲಿ ಹೋದಾಗ ಆನ್ವಿ ಕಾಲು ಜಾರಿಬಿಟ್ಟಿದೆ. ಸೀದಾ 300 ಅಡಿ ಆಳಕ್ಕೆ ಹೋಗಿ ಆನ್ವಿ ಬಿದ್ದಿದ್ದಾಳೆ. 300 ಅಡಿ ಆಳ ಅಂದ್ರೆ ಸಾಮಾನ್ಯದ ಮಾತಲ್ಲ. ತಕ್ಷಣಕ್ಕೆ ರಕ್ಷಣೆ ಮಾಡೋದಕ್ಕೆ ಸಾಧ್ಯವಿಲ್ಲ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿತ್ತು. ಆದರೆ, ಬಂದ ರಕ್ಷಣ ತಂಡಕ್ಕೆ ಮಳೆ ಅಡ್ಡಿಯಾಗಿದೆ. ಆದ್ರೂ ರೆಸ್ಕ್ಯೂ ತಂಡ ಮಳೆಯಲ್ಲಿ ಜಲಪಾತದ ಕೆಳಗೆ ಇಳದಿದೆ. ಸುಮಾರು ಆರು ಗಂಟೆ ಕಾರ್ಯಾಚರಣೆ ನಡೆದಿದೆ. ಕೊನೆಗೂ ಆನ್ವಿಯನ್ನ ರಕ್ಷಣ ತಂಡ ಆಕೆಯನ್ನು ಪತ್ತೆ ಹಚ್ಚಿದೆ. ಆಗ ಆನ್ವಿ ಜೀವಂತವಾಗಿದ್ಳು. ತಕ್ಷಣವೇ ಆನ್ವಿಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ದುರಂತ ಏನಂದ್ರೆ ತಲೆ ಸೇರಿ ದೇಹದ ತುಂಬೆಲ್ಲಾ ಗಂಭೀರ ಗಾಯವಾದ ಪರಿಣಾಮ ಆನ್ವಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾಳೆ.
ಇದನ್ನೂ ಓದಿ:ರೀಲ್ಸ್ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್ನಿಂದ ಬಿದ್ದು ಇನ್ಸ್ಟಾ ತಾರೆ ಸಾವು
ಜಸ್ಟ್ 27 ವರ್ಷಕ್ಕೆ ಆನ್ವಿ ಜಗತ್ತಿನ ಅದೆಷ್ಟು ದೇಶಗಳನ್ನ ಸುತ್ತಿದ್ಳು. ಚಿಕ್ಕ ವಯಸ್ಸಿನಲ್ಲೇ ಜಗತ್ತು ತಿರುಗಿ ಭಿನ್ನ ವಿಭಿನ್ನ ದೇಶಗಳನ್ನ ಪರ್ಯಟನೆ ಮಾಡಿದ್ಳು. ಆದ್ರೆ ಕುಂಬೆ ಜಲಪಾತದ ಬಳಿಕ ಹೋದಾಗ ವಿಧಿ ಆಕೆ ಹಣೆ ಬರಹದಲ್ಲಿ ಬೇರೆಯದ್ದೇ ಬರೆದಿದ್ದ. ಕುಂಬೆ ಜಲಪಾತ ಮಹಾರಾಷ್ಟ್ರದ ಅತ್ಯಂತ ಡೇಂಜರ್ಸ್ ಜಲಪಾತ. ಈ ಜಲಪಾತಕ್ಕೆ ಹೋಗಲು ಎರಡು ದಾರಿಗಳಿವೆ. ಸಾಮಾನ್ಯವಾಗಿ ಎಲ್ಲೂ ಇದೇ ದಾರಿ ಮೂಲಕವೇ ಕುಂಬೆ ಜಲಪಾತಕ್ಕೆ ಹೋಗ್ತಾರೆ. ಆದ್ರೆ ಆನ್ವಿ ಗೆಳೆಯರೆಲ್ಲ ಬೇಡ ಬೇಡ ಅಂದ್ರೂ ಜಲಪಾತದ ಇನ್ನೊಂದು ದಾರಿ ಮೂಲಕ ಕುಂಬೆ ಜಲಪಾತದ ತುತ್ತ ತುದಿಗೆ ಹೋಗಿದ್ಲು. ಅಲ್ಲಿ ಹೋಗಿ ಫೋಟೋಗೆ ಪೋಸ್ ಕೊಟ್ಟು ರೀಲ್ಸ್ ಮಾಡೋದಕ್ಕೆ ಮುಂದಾಗಿದ್ಳು.
View this post on Instagram
ಆದ್ರೆ ಕಾಲು ಜಾರಿ 300 ಅಡಿಯ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಹಾಗಂತ ಇದೇ ಮೊದಲು ಈ ತರಹದ ಪ್ರಕರಣಗಳಾಗಿಲ್ಲ. ಈಗಿನ ಯೂತ್ಸ್ ಹುಡುಗು ರೀಲ್ಸ್ ಹುಚ್ಚಿಗಾಗಿ ಇಲ್ಲ ಸಲ್ಲದ ಹುಡುಗಾಟ ಮಾಡ್ತಾನೆ ಇರ್ತಾರೆ. ಕೆಲ ದಿನಗಳ ಹಿಂದಷ್ಟೆ ಇದೇ ಫೋಟೋ ಹುಚ್ಚಿಗಾಗಿ ಬೂಷಿ ಡ್ಯಾಮ್ ದುರಂತ. ಜೂನ್ 3ರಂದು ಈ ದುರ್ಘಟನೆ ನಡೆದಿತ್ತು. ಫೋಟೋಗಾಗಿ ಇಡೀ ಕುಟುಂಬದ ಐದು ಜನ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ರು. ಐದು ಜನರ ಪ್ರಾಣ ಕಳೆದಕೊಂಡಿದ್ರು. ಅಷ್ಟೆಲ್ಲಾ ಯಾಕೆ ರೈಲಿನ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳಲು ಹೋಗಿ ದಂಪತಿಯೊಂದು ಆ ಸೇತುವೆಯಿಂದ ಜಂಪ್ ಮಾಡಿಬಿಟ್ಟಿದ್ರು. ಅದೃಷ್ಟವಶಾತ್ ಮೂಳೆಯಷ್ಟೆ ಮುರಿದು ದಂಪತಿ ಬದುಕುಳಿದಿತ್ತು. ಆದ್ರೀಗ ಆನ್ವಿ ಕಾಮಾದಾರ್ ಕೂಡ ಇಂಥಾದ್ದೆ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡಿದ್ದು ನಿಜಕ್ಕು ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ