ರೀಲ್ಸ್​ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು

author-image
Veena Gangani
Updated On
ಜಸ್ಟ್ 27 ವರ್ಷಕ್ಕೆ ದುರಂತ ಅಂತ್ಯ ಕಂಡ ರೀಲ್ಸ್ ಸ್ಟಾರ್; ಆನ್ವಿ ಕೊನೆಯ ಕ್ಷಣ ಹೇಗಿತ್ತು? ಇಂಚಿಂಚು ಮಾಹಿತಿ ಇಲ್ಲಿದೆ
Advertisment
  • ಇನ್​ಸ್ಟಾಗ್ರಾಮ್​ ಸ್ಟಾರ್​ ಅನ್ವಿ ಕಾಮ್ದಾರ್​ ಸಾವಿಗೆ ಸಂತಾಪ ಸೂಚಿಸಿದ ಅಭಿಮಾನಿಗಳು
  • ಜುಲೈ 16ರಂದು ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸಕ್ಕೆ ಹೋಗಿದ್ದ ಯುವತಿ
  • ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್​ ಆಗಿದ್ದ ಮೃತ ಯುವತಿ ಅನ್ವಿ ಕಾಮ್ದಾರ್

ರಾಯಗಡ: ಇನ್‌ಸ್ಟಾಗ್ರಾಮ್​ಗಳಲ್ಲಿ ಸಖತ್​ ಫೇಮಸ್ ಆಗಿದ್ದ ಯುವತಿ ಸಾವನ್ನಪ್ಪಿರೋ ಘಟನೆ ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ನಡೆದಿದೆ. ಅನ್ವಿ ಕಾಮ್ದಾರ್ (26) ಮೃತ ಯುವತಿ.  ಮೃತ ಅನ್ವಿ ಕಾಮ್ದಾರ್ ಮುಂಬೈ ನಿವಾಸಿ. ಯುವತಿಯೂ ರೀಲ್ಸ್​ ಮಾಡುವಾಗ ಆಯಾ ತಪ್ಪಿ ಬರೋಬ್ಬರಿ 300 ಅಡಿ ಆಳಕ್ಕೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 16ರಂದು ಅನ್ವಿ ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದರು. ಇಂದು ಬೆಳಿಗ್ಗೆ 10.30ರ ಸುಮಾರಿಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾರೆ.

publive-image

ಇದನ್ನೂ ಓದಿ:BBK11: ಬಿಗ್​ಬಾಸ್​ ಸೀಸನ್​ 11ಕ್ಕೆ ಬರೋ ಸ್ಪರ್ಧಿಗಳು ಇವರೇನಾ?

ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಅಧಿಕಾರಿಗಳು ಕೂಡಲೇ ರಕ್ಷಣಾ ತಂಡದೊಂದಗೆ ಸ್ಥಳಕ್ಕೆ ದೌಡಾಯಿಸಿದ್ದರು. ನಾವು ಸ್ಥಳಕ್ಕೆ ತಲುಪಿದ ತಕ್ಷಣ, ಹುಡುಗಿ ಸುಮಾರು 300-350 ಅಡಿಗಳಷ್ಟು ಬಿದ್ದಿದ್ದಾಳೆಂದು ನಮಗೆ ತಿಳಿಯಿತು. ಯುವತಿಯೂ ಕೆಳಗೆ ಬಿದ್ದ ಮೇಲೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಗ ಅದೇ ವೇಳೆ ಧಾರಾಕಾವಾಗಿ ಮಳೆಯಾಗುತ್ತಿದ್ದರಿಂದ ಅವಳನ್ನು ಮೇಲಕ್ಕೆತ್ತಲು ಕಷ್ಟವಾಯಿತು. ಬಳಿಕ ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಆಕೆಯನ್ನು ಮೇಲೆ ಕರೆದಕೊಂಡು ಬರಲಾಯಿತು. ಆದರೆ ಮೇಲಿಂದ ಬಿದ್ದ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಬಳಿಕ ಆಕೆಯನ್ನು ಮನಗಾಂವ ಉಪ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

publive-image

ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಹಾಗೂ ನಾಗರಿಕರಿಗೆ ಮನವಿ ಸಲ್ಲಿಸಿದರು. ಕುಂಭೆ ಜಲಪಾತದ ಸೌಂದರ್ಯವನ್ನು ಸೆರೆಹಿಡಿಯುವ ಪ್ರಯತ್ನದಲ್ಲಿದ್ದ ಪ್ರವಾಸೋದ್ಯಮದ ಉತ್ಸಾಹಕ್ಕೆ ಹೆಸರುವಾಸಿಯಾದ ಅನ್ವಿ ಮೃತಪಟ್ಟಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರವಾಸೋದ್ಯಮವನ್ನು ಆನಂದಿಸಬೇಕು ಮತ್ತು ಸಹ್ಯಾದ್ರಿ ಶ್ರೇಣಿಗಳ ರಮಣೀಯ ಸೌಂದರ್ಯವನ್ನು ಅನ್ವೇಷಿಸುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಜೀವಕ್ಕೆ ಅಪಾಯವನ್ನುಂಟು ಮಾಡುವ ಅಪಾಯಕಾರಿ ನಡುವಳಿಕೆಗಳನ್ನು ತಪ್ಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment