newsfirstkannada.com

ಅನ್ನದಾತರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು ತಪ್ಪು- ಮೋದಿ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಜ್ರಿವಾಲ್

Share :

Published February 13, 2024 at 11:50am

    ಮೈದಾನಗಳನ್ನು ಜೈಲಾಗಿ ಪರಿವರ್ತಿಸಲು No ಎಂದ ಕೇಜ್ರಿವಾಲ್

    ಪ್ರತಿಭಟನೆ ವಾಸ್ತವ, ನಾಡಿನ ಅನ್ನದಾತರಿಗೆ ಪ್ರತಿಭಟಿಸುವ ಹಕ್ಕಿದೆ

    ದೇಶದ ಅನ್ನದಾತರು ದೆಹಲಿಯತ್ತ ದೌಡಾಯಿಸುತ್ತಿದ್ದಾರೆ

ಬೃಹತ್ ಪ್ರತಿಭಟನೆಗಾಗಿ ಸಾವಿರಾರು ರೈತರು ದೆಹಲಿಯತ್ತ ದಾವಿಸುತ್ತಿದ್ದಾರೆ. ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ಮಧ್ಯೆ ಫೈಟ್ ಶುರುವಾಗಿದೆ. ಪ್ರತಿಭಟನೆಗೆ ಬಂದಿರುವ ರೈತರನ್ನು ತಾತ್ಕಾಲಿಕವಾಗಿ ಬಂಧಿಸಿಡಲು, ನಗರದ ಮೈದಾನವನ್ನ ಜೈಲಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರ, ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು.

ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಆಮ್​ ಆದ್ಮಿ ಸರ್ಕಾರ ತಿರಸ್ಕರಿಸಿದೆ. ರೈತರ ನಡೆಸುತ್ತಿರುವ ಪ್ರತಿಭಟನೆಯು ನೈಜವಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ರೈತರ ಬೇಡಿಕೆ ಕೂಡ ಸ್ಪಷ್ಟವಾಗಿದ್ದು, ಅದು ಅವರಿಗೆ ಅಗತ್ಯ ಇದೆ. ಸಾಂವಿಧಾನಿಕವಾಗಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಹೀಗಾಗಿ ರೈತರನ್ನು ಬಂಧಿಸುವುದು ಸರಿ ಅಲ್ಲ ಎಂದು ದೆಹಲಿ ಸರ್ಕಾರದ ಗೃಹ ಸಚಿವ ಕೈಲಾಸ್ ಗೆಹ್ಲೋಟ್ ಹೇಳಿದ್ದಾರೆ.

ಬವಾನದಲ್ಲಿರುವ ರಾಜೀವ್ ಗಾಂಧಿ ಸ್ಟೇಡಿಯಂ ಅನ್ನು ಜೈಲಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿತ್ತು. ಅದರ ಬದಲಾಗಿ ಕೇಂದ್ರ ಸರ್ಕಾರ ರೈತರ ಜೊತೆ ಮಾತುಕತೆ ನಡೆಸಿ, ವಾಸ್ತವ ಅರಿತುಕೊಂಡು ಸಮಸ್ಯೆ ಬಗೆಹರಿಸಬೇಕು. ನಾಡಿನ ಅನ್ನದಾತರನ್ನು ಬಂಧಿಸುವ ನಿರ್ಧಾರ ಸರಿ ಅಲ್ಲ. ಒಂದು ವೇಳೆ ಹಾಗೆ ಮಾಡಿದರೆ ಗಾಯದ ಮೇಲೆ ಉಪ್ಪು ಸುರಿದಂತೆ ಆಗುತ್ತದೆ. ಬಂಧಿಸುವ ನಿರ್ಧಾರಕ್ಕೆ ನಮ್ಮ ಬೆಂಬಲ ಇಲ್ಲ. ಕೇಂದ್ರ ಸರ್ಕಾರದ ಇಂಥ ನಿರ್ಧಾರಕ್ಕೆ ನಮ್ಮ ಬೆಂಬಲ ಇಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನದಾತರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು ತಪ್ಪು- ಮೋದಿ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಜ್ರಿವಾಲ್

https://newsfirstlive.com/wp-content/uploads/2024/02/FARMER-4.jpg

Load More