/newsfirstlive-kannada/media/post_attachments/wp-content/uploads/2025/04/AAP-LEADER-DAUGHTER-DEAD.jpg)
ಇತ್ತೀಚಿಗೆ ಅಮೆರಿಕ ಮತ್ತು ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವುಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಮತ್ತೋರ್ವ ಭಾರತೀಯ ವಿದ್ಯಾರ್ಥಿನಿ ನಿಗೂಢ ಸಾವಿನ ಸುದ್ದಿ ಭಾರತಕ್ಕೆ ಆಘಾತ ತಂದಿದೆ. ಆಯಾ ದೇಶದಲ್ಲಿರೋ ಭಾರತೀಯ ರಾಯಭಾರ ಕಚೇರಿಗಳು ಏನ್ ಮಾಡ್ತಿದೆ ಅನ್ನೋ ಕೂಗು ಜೋರಾಗಿ ಕೇಳ ತೊಡಗಿದೆ.
ಇದನ್ನೂ ಓದಿ: 35 ಬಾಲ್ನಲ್ಲಿ 100 ರನ್.. ವೈಭವ್ ಸೂರ್ಯವಂಶಿಗೆ ಕೊಹ್ಲಿ ಕಿವಿ.. ಏನಂದ್ರು ಗೊತ್ತಾ..?
ಕೆನಡಾದ ರಾಜಧಾನಿ ಓಟ್ಟಾವಾದ ಬೀಚ್ನಲ್ಲಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ವಂಶಿಕಾ ನಿಗೂಢವಾಗಿ ಮೃತಪಟ್ಟಿದ್ದು, ಪೊಲೀಸರು ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಡಿಗೆ ಮನೆ ನೋಡಲು ಹೊರಗೆ ಹೋಗಿದ್ದ ವಂಶಿಕಾ, ನಾಲ್ಕು ದಿನಗಳ ಬಳಿಕ ಕಡಲ ತೀರದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ವಂಶಿಕಾ ಸಾವನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ದೃಢಪಡಿಸಿದೆ.
ವಂಶಿಕಾ ಸೈನಿ ತಂದೆ ದವೀಂದರ್ ಸೈನಿ ಪಂಜಾಬ್ ಮೂಲದ ಎಎಪಿ ಶಾಸಕ ಕುಲ್ಜಿತ್ ಸಿಂಗ್ ರಾಂಧವ್ ಆಪ್ತ. ಈಕೆ ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಅನೇಕ ಅನೇಕ ಅನುಮಾನಗಳು ಮೂಡಿ ಬಂದಿದೆ. ಕೆನಡಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವಂನ್ಶಿಕಾ ಸೈನಿ, ಏಪ್ರಿಲ್ 22ರಿಂದಲೂ ನಾಪತ್ತೆಯಾಗಿದ್ದಳು. ಅಂದು ಮನೆ ಬಿಟ್ಟು ಹೋದ ಹುಡುಗಿ ಮತ್ತೆ ವಾಪಸ್ ಬಂದಿರಲಿಲ್ಲ.
ಏನಾಯ್ತು ವಂಶಿಕಾ?
ವಂಶಿಕಾ ಸೈನಿ ತನ್ನ ಪಿಯುಸಿ ವ್ಯಾಸಂಗದ ನಂತರ ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿದ್ದಳು. ಏಪ್ರಿಲ್ 18ರಂದು ತನ್ನ ಅಂತಿಮ ಪರೀಕ್ಷೆಗಳನ್ನು ವಂಶಿಕಾ ಸೈನಿ ಮುಗಿಸಿದ್ದಳು. ಓದಿನ ಜೊತೆಗೆ ಕಾಲ್ ಸೆಂಟರೊಂದರಲ್ಲಿ ಪಾರ್ಟ್‌ಟೈಮ್ ಕೆಲಸವನ್ನೂ ಮಾಡುತ್ತಿದ್ದಳು. ಆಕೆಯ ತಂದೆ ದವೀಂದರ್ ಸೈನಿ ಚಂಡೀಗಢದ ಉಪನಗರವಾದ ಡೇರಾ ಬಸ್ಸಿಯಲ್ಲಿರೋ ಸೈನಿ ಮೊಹಲ್ಲಾದಲ್ಲಿ ವಾಸ ಮಾಡುತ್ತಿದ್ದಾರೆ. ಏಪ್ರಿಲ್ 22ರಿಂದ ಆಕೆಯ ಕುಟುಂಬದವರು ಹಾಗೂ ಪೋಷಕರಿಗೂ ಆಕೆ ಫೋನ್‌ನಲ್ಲಿ ಮಾತನಾಡುವುದಕ್ಕೂ ಸಿಕ್ಕಿಲ್ಲ, ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ.
ಏಪ್ರಿಲ್ 25ರಂದು ಆಕೆ IELTS ಪರೀಕ್ಷೆ ಬರೆಯಬೇಕಿತ್ತು. ಆದರೆ ಆಕೆ ಶವವಾಗಿ ಪತ್ತೆಯಾಗಿದ್ದರಿಂದ ಕಂಗಾಲಾಗಿರುವ ಕುಟುಂಬ ಆಕೆಯ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸದ್ಯ ಮಗಳನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ವಂಶಿಕಾ ಸಾವಿಗೆ ನ್ಯಾಯ ಬೇಕು ಅನ್ನೋದೇ ಪೋಷಕರ ಅಳಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ