Advertisment

ದೆಹಲಿ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ​ ಮೇಲೆ ದಾಳಿ.. ಶಾಕಿಂಗ್ ವಿಡಿಯೋ ರಿಲೀಸ್‌!

author-image
Gopal Kulkarni
Updated On
ದೆಹಲಿ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ​ ಮೇಲೆ ದಾಳಿ.. ಶಾಕಿಂಗ್ ವಿಡಿಯೋ ರಿಲೀಸ್‌!
Advertisment
  • ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರ್ ಮೇಲೆ ದಾಳಿ
  • ಇದು ಬಿಜೆಪಿ ನಮ್ಮ ಚುನಾವಣಾ ಪ್ರಚಾರವನ್ನು ಹತ್ತಿಕ್ಕುವ ಯತ್ನ ಎಂದ ಆಪ್​
  • ಕೇಜ್ರಿವಾಲ್ ಬೆಂಗಾವಲು ವಾಹನ ಇಬ್ಬರ ಮೇಲೆ ಹರಿದು ಹೋಗಿದೆ ಎಂದ ಬಿಜೆಪಿ

ಆಮ್ ಆದ್ಮಿ ಪಕ್ಷ ಶನಿವಾರದಂದು ಅರವಿಂದ್​ ಕೇಜ್ರಿವಾಲ್ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಾಗ ಅವರ ಕಾರ್ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದೆ. ಫೆಬ್ರವರಿ 5 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಸದ್ಯ ಪ್ರಚಾರದ ಅಖಾಡಕ್ಕೆ ಇಳಿದಿವೆ. ಅದೇ ರೀತಿ ಆಪ್ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕೂಡ ಇಂದು ಪ್ರಚಾರಕ್ಕೆ ಹೋಗಿದ್ದರು ಈ ವೇಳೆ ಅವರ ಕಾರಿನ ಮೇಲೆ ಕಲ್ಲೆಸೆದು ದಾಳಿ ನಡೆಸಲಾಗಿದ್ದು, ಬಿಜೆಪಿ ನಮ್ಮ ಮೇಲೆ ಕಲ್ಲು ಎಸೆಯುವ ಮೂಲಕ ನಮ್ಮ ಪ್ರಚಾರದ ಕಾರ್ಯಕ್ರಮವನ್ನು ಹಾಳುಗೆಡುವಲು ಹೊರಟಿದೆ ಎಂದು ಆಪ್ ಆರೋಪಿಸಿದೆ.

Advertisment

ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರ ಗುಂಡಾಗಳು ಕೇಜ್ರಿವಾಲ್ ಕಾರ್ ಮೇಲೆ ಕಲ್ಲೆಸೆದು ಅವರನ್ನು ಗಾಯಗೊಳಿಸಿ, ಪ್ರಚಾರದ ಕಣಕ್ಕೆ ಇಳಿಯದಂತೆ ಮಾಡಬೇಕು ಎಂದು ಷಡ್ಯಂತ್ರ ರಚಿಸಿದ್ದಾರೆ. ಈ ನಿಮ್ಮ ಹೇಡಿತನದ ದಾಳಿಗಳಿಗೆ ಕೇಜ್ರಿವಾಲ್ ಹೆದರವುದಿಲ್ಲ. ದೆಹಲಿಯ ಜನರು ಈ ಒಂದು ಕೃತ್ಯಕ್ಕೆ ನಿಮಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಆಪ್​ ತನ್ನ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ:ಸಂಜಯ್ ರಾಯ್ ರಾಕ್ಷಸ ಕೃತ್ಯ ಸಾಬೀತು.. ಕೊಲ್ಕತ್ತಾ RG Kar ವೈದ್ಯೆ ಪ್ರಕರಣಕ್ಕೆ ಮಹತ್ವದ ತೀರ್ಪು ಪ್ರಕಟ

ಇನ್ನು ವೈರಲ್ ಆದ ವಿಡಿಯೋದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕೇಜ್ರಿವಾಲ್ ಕಾರ್​​ಗೆ ಅಡ್ಡಿಪಡಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಇದನ್ನು ಆಪ್ ಬಿಜೆಪಿ ನಮ್ಮ ಪ್ರಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದು ಆರೋಪಿಸಿದೆ.

Advertisment

ಇದನ್ನೂ ಓದಿ:300 ಕೋಟಿ ಮೌಲ್ಯದ 142 ಸೈಟ್‌ಗಳು ಜಪ್ತಿ.. ಇದು ನ್ಯೂಸ್​ಫಸ್ಟ್​ ವರದಿಗೆ ಸಿಕ್ಕ ಬಿಗ್ ಇಂಪ್ಯಾಕ್ಟ್..!


">January 18, 2025

ಇದಾದ ಕೆಲವೇ ನಿಮಿಷಗಳಲ್ಲಿ ಪರ್ವೇಶ್ ವರ್ಮಾ ಒಂದು ವಿಡಿಯೋ ಶೇರ್ ಮಾಡಿದ್ದು. ಕೇಜ್ರಿವಾಲ್ ಬೆಂಗಾವಲು ಪಡೆಯ ವಾಹನ ಪ್ರಚಾರದ ವೇಳೆ ಇಬ್ಬರು ವ್ಯಕ್ತಿಗಳ ಮೇಲೆ ಹರಿದುಕೊಂಡು ಹೋಗಿದೆ. ಇಬ್ಬರು ಯುವಕರ ಮೇಲೆ ಹಾಯ್ದು ಹೋದ ವಾಹನದ ಬಗ್ಗೆ ಸಿಡಿದೆದ್ದ ಜನರು ಅದನ್ನು ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ಗಾಯಗೊಂಡ ಇಬ್ಬರನ್ನೂ ಲೇಡಿ ಹರ್ಡಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment