ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?

author-image
Gopal Kulkarni
Updated On
ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?
Advertisment
  • ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ಪುತ್ರಿ
  • ಆರಾಧ್ಯ ಕೋರ್ಟ್​ ಮೊರೆ ಹೋಗಲು ಕಾರಣವೇನು?
  • ಯಾರ ವಿರುದ್ಧ ಕ್ರಮಕ್ಕೆ ನ್ಯಾಯಾಲಯದಲ್ಲಿ ಮನವಿ?

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಆಗಾಗಾ ಸೋಷಿಯಲ್ ಮೀಡಿಯಾಗಳಲ್ಲಿ ಹೈಲೆಟ್ ಆಗುತ್ತಿರುತ್ತಾರೆ. ಸದಾ ತಾಯಿಗೆ ಅಂಟಿಕೊಂಡೆ ನಡೆಯುವ ಈ ಹುಡುಗಿ ಹಲವು ವಿಷಯಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಈ ಹಿಂದೆ ಕನ್ನಡದ ಹಿರಿಯ ನಟ ಡಾ.ಶಿವರಾಜ್​ಕುಮಾರ್ ಅವರ ಕಾಲಿಗೆ ನಮಸ್ಕಾರ ಮಾಡಿದ್ದು. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಆರಾಧ್ಯ ಬಚ್ಚನ್​​ಗಿರುವ ಸಂಸ್ಕಾರ ಮತ್ತು ಹಿರಿಯರ ಮೇಲಿನ ಗೌರವವನ್ನು ಕಂಡ ಜನರು ಕೊಂಡಾಡಿದ್ದರು. ಆದರೆ ಇತ್ತೀಚೆಗೆ ಬೇರೆಯದ್ದೇ ಆಗುತ್ತಿದೆ.

ಇದನ್ನೂ ಓದಿ:ಸಿಂಪಲ್​ ಸುನಿ ಕಾಂಬಿನೇಷನ್.. ಸ್ಟಾರ್ ಹೀರೋ ಆಗಿ ಮಿಂಚಲು ಸಜ್ಜಾದ ಬಿಗ್​ಬಾಸ್​ ವಿನ್ನರ್!

ಸಾಮಾಜಿಕ ಜಾಲತಾಣಗಳ ಕೇಲವು ವೇದಿಕೆಗಳಲ್ಲಿ ಆರಾಧ್ಯ ಬಚ್ಚನ್ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಲಾಗುತ್ತದೆ. ಇಲ್ಲಸಲ್ಲದ, ಊಹಾಪೋಹ ಕಥೆಗಳನ್ನು ಹೆಣೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತದೆ. ಇದರಿಂದ ಮನನೊಂದಿರುವ ಆರಾಧ್ಯ ಬಚ್ಚನ್ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.ಕೆಲ ವೆಬ್​ಸೈಟ್, ಯೂಟ್ಯೂಬ್​ ಚಾನೆಲ್ ಸೇರಿ ಹಲವು ಆನ್​ಲೈನ್ ಪ್ಲಾಟ್​ಫಾರ್ಮ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸೂಪರ್ ಸ್ಟಾರ್ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ ಚೌಧರಿ ದುರಂತ ಅಂತ್ಯ; ಅಸಲಿ ಕಾರಣ ಇಲ್ಲಿದೆ!

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ರೈ ಬಚ್ಚನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆರಾಧ್ಯ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್ ಕೆಲವರಿಗೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಮುಖ್ಯ ಕಾರಣ ತನ್ನ ವಿರುದ್ಧ ಗೂಗಲ್ ಸೇರಿದಂತೆ ಕೆಲ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಸೇರಿದಂತೆ ಆನ್‌ಲೈನ್

ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದನ್ನು ನಿರ್ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಆರಾಧ್ಯ ರೈ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಜಸ್ಟೀಸ್ ಮಿನಿ ಪುಷ್ಕರನ್ ಈ ಅರ್ಜಿ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಉತ್ತರ ನೀಡುವಂತೆ ಗೂಗಲ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಗೆ ನೋಟಿಸ್ ನೀಡಿದೆ. ಇದೇ ವೇಳೆ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment