/newsfirstlive-kannada/media/post_attachments/wp-content/uploads/2025/05/jayam_ravi_WIFE.jpg)
ತಮಿಳು ಸಿನಿಮಾ ಸ್ಟಾರ್ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು ನ್ಯಾಯಾಲಯದಿಂದ ಶೀಘ್ರದಲ್ಲೇ ಡಿವೋರ್ಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಈಗಿರುವಾಗಲೇ ಆರತಿ ಅವರು ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶವನ್ನ ಜಯಂ ರವಿ ಅವರಿಂದ ಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಚೆನ್ನೈನಲ್ಲಿರುವ 3ನೇ ಹೆಚ್ಚುವರಿ ಕುಟುಂಬ ಕಲ್ಯಾಣ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಯಂ ರವಿ ಹಾಗೂ ಆರತಿ ಅವರ ವಿಚ್ಚೇಧನ ಅರ್ಜಿಯನ್ನು ನ್ಯಾಯಾಧೀಶೆ ಥೆನ್ಮೋಳಿ ಅವರು ವಿಚಾರಣೆ ಮಾಡಿದರು. ಕೋರ್ಟ್ನಲ್ಲಿ ಇಬ್ಬರು ರಾಜೀಯಾಗಲು ಒಪ್ಪಿಲ್ಲ. ಇಬ್ಬರ ನಡುವಿನ ಸಂಬಂಧ ಸರಿಪಡಿಸಿಕೊಂಡು ಸಂಸಾರದಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಡಿವೋರ್ಸ್ಗೆ ಪರಪಸ್ಪ ಇಬ್ಬರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಹತ್ವದ ಪಂದ್ಯಕ್ಕೆ ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್ ಕೈ ಕೊಟ್ಟಿದ್ದು ಯಾಕೆ.. ಕಾರಣ ಇಲ್ಲಿದೆ!
ವಿಚ್ಚೇಧನ ಅರ್ಜಿ ವಿಚಾರಣೆಯಲ್ಲಿ ಆರತಿ ಅವರು ತನ್ನ ಗಂಡನಿಂದ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳ ಜೀವನಾಂಶವನ್ನು ಕೇಳಿದ್ದಾರೆ. ಗಂಡನಿಂದ ಬೇರೆಯಾಗುತ್ತಿದ್ದರಿಂದ ಕುಟುಂಬ ನಿರ್ವಹಣೆಗಾಗಿ ಹಣ ಬೇಕಾಗುತ್ತದೆ. ಜೊತೆಗೆ ಮಕ್ಕಳು ಕೂಡ ಇದ್ದಾರೆ ಅಂತ ತಿಂಗಳಿಗೆ ಜೀವನಾಂಶ ಕೇಳಿದ್ದಾರೆ. ಪ್ರತಿ ತಿಂಗಳು 40 ಲಕ್ಷ ರೂಪಾಯಿ ಎಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿಗಳನ್ನು ಜಯಂ ರವಿ ಅವರು ನೀಡಬೇಕಾಗುತ್ತದೆ ಎನ್ನಲಾಗಿದೆ.
ಇನ್ನು ಮತ್ತೆ ಒಂದಾಗಿ ಬಾಳಲು ಒಮ್ಮತ ಸೂಚಿಸದ ಕಾರಣ ಇಬ್ಬರು ಕೂಡ ಲಿಖಿತ ರೂಪದಲ್ಲಿ ಪ್ರತಿಕ್ರಿಯೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನು ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜೂನ್ 12ಕ್ಕೆ ಮುಂದೂಡಿಕೆ ಮಾಡಿದೆ. ಇತ್ತೀಚೆಗಷ್ಟೇ ಇಬ್ಬರು ಇನ್ಸ್ಟಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು. ಜಯಂ ರವಿ ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಡೇಟಿಂಗ್ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ