/newsfirstlive-kannada/media/post_attachments/wp-content/uploads/2025/05/vinutha.jpg)
ಆಸೆ ಧಾರಾವಾಹಿಗೆ ಅಭೂತಪೂರ್ವ ರೆಸ್ಪಾನ್ಸ್​ ಸಿಗುತ್ತಿದೆ. ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದ್ದು, ಕಲಾವಿದರ ಜನಪ್ರಿಯತೆ ಹೆಚ್ಚಿದೆ.
ಇದನ್ನೂ ಓದಿ: ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!
ವೀಕ್ಷಕರೆಲ್ಲಾ ಮೀನಾ ತಂಗಿ ಕನಕಾ ಪಾತ್ರನ ನೋಡಿರುತ್ತಾರೆ. ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದು ನಟಿ ವಿನುತಾ ಗೌಡ. ಸದ್ಯ ಇವರು ಸೀರಿಯಿಲ್​ನಿಂದ ಹೊರ ಬಂದಿದ್ದಾರೆ. ಕನಕಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/05/vinutha3.jpg)
ಅಷ್ಟಕ್ಕೂ ವಿನುತಾ ಯಾಕೆ ಸೀರಿಯಲ್​ ಬಿಟ್ರು ಅನ್ನೋದಕ್ಕೆ ಉತ್ತರ ಸಿಕ್ಕಿದೆ.
ಯೆಸ್,​ ನಾಯಕಿ ಆಗಿ ಲಾಂಚ್​ ಆಗ್ತಿದ್ದಾರೆ ನಟಿ. ಇಷ್ಟು ದಿನ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದ ವಿನುತಾ ಹೊಸ ಧಾರಾವಾಹಿಗೆ ನಾಯಕಿ ಆಗ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/05/vinutha2.jpg)
ಕನ್ನಡದಲ್ಲಿ ಅಲ್ಲ, ಪರಭಾಷೆಗೆ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ.
ಹೌದು, ತೆಲುಗು ಧಾರಾವಾಹಿಯೊಂದಕ್ಕೆ ವಿನುತಾ ಆಯ್ಕೆ ಆಗಿದ್ದಾರೆ. ಇನ್ಮುಂದೆ ತೆಲುಗು ಅಂಗಳದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ ನಟಿ.
/newsfirstlive-kannada/media/post_attachments/wp-content/uploads/2025/05/vinutha1.jpg)
ಇನ್ನು ಪ್ರೋಮೋ ರಿಲೀಸ್​ ಆಗಿಲ್ಲ. ಹೀಗಾಗಿ ತೆರೆ ಮೇಲೆ ಮಿಂಚೋದಕ್ಕೆ ಸಜ್ಜಾಗಿದ್ದಾರೆ ವಿನುತಾ ಗೌಡ. ಸೋಷಿಯಲ್​ ಮೀಡಿಯಾದಲ್ಲಿ ಌಕ್ಟೀವ್​ ಆಗಿರೋ ನಟಿ ವಿನುತಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us