/newsfirstlive-kannada/media/post_attachments/wp-content/uploads/2025/07/aase1.jpg)
ಜನಪ್ರಿಯ ಧಾರಾವಾಹಿ 'ಆಸೆ' ಜೋಡಿಗಳ ನಡುವೆ ಮುನಿಸು ಮೂಡಿದೆ. ಗಂಡ ಹೆಂಡ್ತಿರು ಅಂದ್ಮೇಲೆ ಹುಸಿ ಕೋಪ, ಮುದ್ದಾಟ-ಗುದ್ದಾಟ ಸಹಜ. ಆದ್ರೇ ಪಾಪ ಸೂರ್ಯ, ಮನೋಜ ಹಾಗೂ ರವಿ ಎಷ್ಟೇ ಪ್ರಯತ್ನ ಪಟ್ರು ಪತ್ನಿಯರು ಮಾತ್ರ ಕ್ಯಾರೆ ಅಂತಿಲ್ಲ.
ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್ ದಾಖಲು
ಮೀನಾ ಸಿಟ್ಟಿಗೆ ಕಾರಣ ಸೂರ್ಯ ಕುಡಿದು ಬಂದಿದ್ದು, ಶ್ರುತಿಗೆ ರವಿ ಸಿಡಿಸಿಡಿ ಅಂತಿರೋದು ಪಿತ್ತ ನೆತ್ತಿಗೆರೋಕೆ ಕಾರಣವಾಗಿದೆ. ಇನ್ನು, ರೋಹಿನಿ ಕಥೆ ನಿಮಗೆ ಗೊತ್ತೆಯಿದೆ. ಕದ್ದು ಮುಚ್ಚಿ ಬಾಡಿಗೆ ಕಟ್ಟುತ್ತಿರೋದು ಮನೋಜನಿಗೆ ಗೊತ್ತಾಗಿ ಗಲಾಟೆ ಶುರುವಾಗಿದೆ.
View this post on Instagram
ಈ ಎಲ್ಲಾ ಮುನಿಸಿಗೆ ಮುಷ್ಕರ ಹೂಡಿದ್ದಾರೆ ಹೆಣ್ಮಕ್ಕಳು. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಅನುಭವಿಸೋದು ಮಾತ್ರ ಗಂಡೈಕಳು ಅಲ್ವಾ? ಅದೇ ಆ್ಯಂಗಲ್ನಲ್ಲಿ ಸಾಂಗ್ವೊಂದನ್ನು ಕಂಪೋಸ್ ಮಾಡಲಾಗಿದೆ. ಮೀನ-ಸೂರ್ಯ ಹಾಗೂ ಮನೋಜ-ರೋಹಿನಿ ರೋಮ್ಯಾನ್ಸ್ ದೃಶ್ಯದ ಶೂಟಿಂಗ್ ಒಂದೇ ದಿನ ನಡೆದಿದೆ.
ಇನ್ನೂ ಶ್ರುತಿ-ರವಿ ಜೊತೆಗಿರೋ ಸೀನ್ಸ್ ಶೂಟ್ ಆಗಿದ್ದು, ಮತ್ತೊಂದು ದಿನ. ಈ ಮೂವರನ್ನ ಕಂಬೈನೈ ಮಾಡಿ, ಚಂದದ ದೃಶ್ಯವನ್ನ ಕಟ್ಟಿಕೊಟ್ಟಿದ್ದಾರೆ. ತೆರೆ ಮೇಲೆ ನೋಡಿದಷ್ಟು ಸುಲಭ ಶೂಟಿಂಗ್ ಇರೋದಿಲ್ಲ. ಕ್ಯಾಮರಾ.. ಕಟ್.. ಆ್ಯಕ್ಷನ್ ನಡುವೆ ಸಾಕಷ್ಟು ವಿಚಾರಗಳು ಅಡಗಿರುತ್ತೆ. ಈ ತೆರೆಮರೆ ಸ್ಟೋರಿ ವೀಕ್ಷಕರಿಗೂ ಸಖತ್ ಇಷ್ಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ