newsfirstkannada.com

ಎಬಿಡಿ ಮಾಡಿದ ಒಂದೇ ಒಂದು ಯಡವಟ್ಟಿಗೆ ಕೊಹ್ಲಿ ಕೋಪ.. ಆಪ್ತ ಮಿತ್ರರ ಮಧ್ಯೆ ‘ಸ್ನೇಹ’ ಬಿರುಕು..!

Share :

Published February 13, 2024 at 11:22am

  ಎಬಿಡಿ ಮೇಲೆ ಕೊಹ್ಲಿಗೆ ಕೋಪ, ಗೆಳೆತನದಲ್ಲಿ ಬಿರುಕು

  ಮುನಿಸಿಕೊಂಡ ವಿರಾಟ, ಕ್ಷಮೆ ಕೇಳಿದ ಎಬಿಡಿ.!

  2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದ ABD

ಇವರಿಬ್ಬರದ್ದು ದೇಶ, ಭಾಷೆ, ಗಡಿಯನ್ನೇ ಮೀರಿದ ಗೆಳೆತನ. ರನ್​​ಭೂಮಿಯಲ್ಲಿ ಇವರಿಬ್ರು ಜೊತೆಯಾಗಿ ನಿಂತ್ರೆ, ಎದುರಾಳಿ ಪಡೆ ಧೂಳಿಪಟವಾಗ್ತಿತ್ತು. ಕ್ರಿಕೆಟ್​ ಫೀಲ್ಡ್​ನಲ್ಲಿ ಶುರುವಾದ ಗೆಳೆತನ ಸಪ್ತ ಸಾಗರದಾಚೆಗೂ ಸದ್ದು ಮಾಡಿತ್ತು. ಎಲ್ಲರ ಕಣ್ಣುಕುಕ್ಕುವಂತಿದ್ದ ಆ ಜೀವದ ಗೆಳೆಯರ ಗೆಳೆತನದಲ್ಲಿ ಇದೀಗ ಬಿರುಕು ಮೂಡಿದ್ಯಂತೆ. ಈ ಸುದ್ದಿ ಕ್ರಿಕೆಟ್​ ವಲಯದಲ್ಲಿ ಇದೀಗ ಬಿರುಗಾಳಿ ಎಬ್ಬಿಸಿದೆ.

ಎಬಿ ಡಿವಿಲಿಯರ್ಸ್​​-ವಿರಾಟ್​ ಕೊಹ್ಲಿ. ಕ್ರಿಕೆಟ್​ ದುನಿಯಾದ ಬೆಸ್ಟ್​​ ಫ್ರೆಂಡ್ಸ್​. ಈ ಗ್ರೇಟ್​ ಬ್ಯಾಟರ್ಸ್, RCB ಪರ ಜೊತೆಯಾಗಿ ಅಬ್ಬರಿಸುತ್ತಿದ್ರೆ, ಮೈದಾನದಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿತಿದ್ರು. ಆನ್​ಫೀಲ್ಡ್​​ನಲ್ಲಿ ಅದ್ಭುತ ಜೊತೆಯಾಟದ ಮೂಲಕ ಮಿಂಚುತ್ತಿದ್ದ ಇವರಿಬ್ಬರು, ಆಫ್ ದ ಫೀಲ್ಡ್​ನಲ್ಲಿ ಸಖತ್​​ ಮಸ್ತಿ ಮಾಡ್ತಿದ್ತು. ಇಷ್ಟೇ ಅಲ್ಲ, ಒಬ್ಬರ ಆಟವನ್ನು ಮತ್ತೊಬ್ಬರು ಹೊಗಳೋದು, ತಪ್ಪಾದಾಗ ತಿದ್ದೋದು, ಗೆದ್ದಾಗ ಸಂಭ್ರಮಿಸೋದು, ಬಿದ್ದಾಗ ಬೆಂಬಲಕ್ಕೆ ನಿಲ್ಲೋದು ಇವರಿಬ್ಬರ ಗೆಳೆತನದಲ್ಲಿ ಕಾಮನ್​.

ಇವರಿಬ್ಬರ ಗೆಳೆತನ ಶುರುವಾಗಿದ್ದು, ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನಿಂದ. ಇದೀಗ ಎಲ್ಲಾ ಮಾದರಿಗೂ ಎಬಿ ಡಿವಿಲಿಯರ್ಸ್​ ನಿವೃತ್ತಿ ಹೇಳಿ ವರ್ಷಗಳೇ ಉರುಳಿವೆ. ಇವರಿಬ್ಬರ ಗೆಳೆತನ ಮಾತ್ರ ಹಾಗೇ ಉಳಿದಿತ್ತು. ಒಬ್ಬರ ಮೇಲೊಬ್ಬರ ಪ್ರೀತಿ, ಅಭಿಮಾನವನ್ನು ತಮ್ಮ ಮಾತಿನಿಂದಲೇ ಆಗಾಗ ವ್ಯಕ್ತಪಡಿಸ್ತಿದ್ರು. ಕೆಲ ದಿನಗಳ ಹಿಂದಿನವರೆಗೂ ಎಲ್ಲವೂ ಚನ್ನಾಗೇ ಇತ್ತು. ಆದರೆ ಈಗ ಹಾಗಿಲ್ಲ.

ಜೀವದ ಗೆಳೆಯರ ನಡುವೆ ಶುರುವಾಯ್ತಾ ಮನಸ್ತಾಪ?
ಕ್ರಿಕೆಟ್​ ಲೋಕದಲ್ಲಿ ಸದ್ಯ ಸದ್ದು ಮಾಡ್ತಿರೋ ವಿಚಾರವಿದು. ಇಷ್ಟು ದಿನ ಎಲ್ಲರ ಕಣ್ಣಿಗೂ ಇವರಿಬ್ಬರು ಗೆಳೆಯರಾಗೇ ಕಾಣಿಸಿಕೊಂಡಿದ್ರು. ಆದ್ರೀಗ ಇಬ್ಬರ ನಡುವೆ ಮನಸ್ತಾಪ ಶುರುವಾಗಿದ್ಯಂತೆ. ಇಷ್ಟೇ ಅಲ್ಲ.. ಕಿಂಗ್​ ಕೊಹ್ಲಿ, ಡಿವಿಲಿಯರ್ಸ್​ ಮೇಲೆ ಕೋಪಗೊಂಡಿದ್ದಾರಂತೆ.

ಎಬಿಡಿಯ ಆ ಒಂದು ಯಡವಟ್ಟು.. ಕಿಂಗ್​ ಕೊಹ್ಲಿಗೆ ಸಿಟ್ಟು.?
ಕೆಲ ದಿನಗಳ ಹಿಂದೆ ಎಬಿ ಡಿವಿಲಿಯರ್ಸ್​ ಹೇಳಿದ ಈ ಮಾತುಗಳು ನಿಮಗೆ ನೆನಪಿರಬಹುದು. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಎರಡು ಪಂದ್ಯಗಳಿಂದ ಕೊಹ್ಲಿ ಹೊರಗುಳಿದಿರೋದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ರು. ವಿರಾಟ್​ ಕೊಹ್ಲಿಯ ಜೊತೆ ಮಾತನಾಡಿದಂತೆ ಹೇಳಿದ್ದ ಎಬಿಡಿ, ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ರು.
ನಾನು ಹೇಗಿದ್ದಿಯಾ ಎಂದು ಕೇಳಿದೆ. ಅದಕ್ಕೆ ಅವರು ಹೇಳಿದ್ರು ನಾನು ಚನ್ನಾಗಿದ್ದೀನಿ ಅಂತಾ. ನೀವು ಹೇಗಿದ್ದೀಯಾ ಎಂದು ಕೇಳಿದ್ರು. ನಾನು ಈಗ ಕುಟುಂಬದ ಜೊತೆ ಇರಬೇಕಿದೆ. ಆ ಬಳಿಕ ನಾನೂ ಚನ್ನಾಗಿದ್ದೇನೆ ಎಂದೆ. ಹೌದು.. ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಇದು ಕುಟುಂಬದ ಸಮಯ. ಆದ್ಯತೆ ಕುಟುಂಬಕ್ಕೆ ನೀಡಬೇಕಿದೆ ಅದು ತುಂಬಾ ಮುಖ್ಯವಾದುದು ಎಂದು ಎಬಿಡಿ ಹೇಳಿದ್ದರು.

ಮುನಿಸಿಕೊಂಡ ವಿರಾಟ, ಕ್ಷಮೆ ಕೇಳಿದ ಎಬಿಡಿ
ವೈಯಕ್ತಿಕ ಜೀವನದ ವಿಚಾರದಲ್ಲಿ ಕೊಹ್ಲಿ ಹಿಂದಿನಿಂದಲೂ ಗೌಪ್ಯತೆ ಕಾಯ್ದುಕೊಂಡು ಬಂದಿದ್ದಾರೆ. ಆರಂಭದಲ್ಲಿ ಲವ್​, ಬಳಿಕ ವಿವಾಹ, ಇದೀಗ ಮಗಳು ವಮಿಕಾ ಎಲ್ಲಾ ವಿಚಾರದಲ್ಲೂ ಕೊಹ್ಲಿ ಸಾಧ್ಯವಾದಷ್ಟು ಗೌಪ್ಯತೆಯನ್ನ ಮೆಂಟೇನ್​ ಮಾಡಿದ್ದಾರೆ. ಇದೀಗ ಇಂಗ್ಲೆಂಡ್​​ ನಡುವಿನ ಸರಣಿಯಿಂದ ಹಿಂದೆ ಸರಿದ ವಿಚಾರದಲ್ಲೂ ಕೊಹ್ಲಿ ಇದೇ ನಡೆಯನ್ನ ಅನುಸರಿಸ್ತಾ ಇದ್ದಾರೆ. ಇದ್ರ ನಡುವೆ ಎಬಿಡಿ ಬಂದು 2ನೇ ಮಗುವಿನ ವಿಚಾರವನ್ನ ಹೇಳಿದ್ದು ಕೊಹ್ಲಿಗೆ ಕೋಪ ತರಿಸಿದೆ.

ಹೇಳಿಕೆ ನೀಡಿ ತಪ್ಪಾಯ್ತು ಎಂದಿದ್ದ ಮಿಸ್ಟರ್​ 360
ಎಬಿಡಿ, ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಕೊಟ್ಟು ಕೆಲವೇ ದಿನಗಳಾಗಿದ್ವು ಅಷ್ಟೇ.. ಅದ್ರ ಬೆನ್ನಲ್ಲೇ, ಡಿವಿಲಿಯರ್ಸ್​​​ ಕ್ಷಮೆಯಾಚಿಸಿ ಬಿಟ್ರು. ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಎಬಿಡಿ, ನಾನು ತುಂಬಾ ದೊಡ್ಡ ತಪ್ಪು ಮಾಡಿದೆ. ನಾನು ನೀಡಿದ ಮಾಹಿತಿ ತಪ್ಪು ಹಾಗೂ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ರು.. ಕೊಹ್ಲಿಯ ಕೋಪಗೊಂಡಿದ್ದಕ್ಕೆ ಎಬಿಡಿ ಕ್ಷಮೆ ಕೇಳಿದ್ರು ಅನ್ನೋದು ಸದ್ಯದ ಮಾಹಿತಿಯಾಗಿದೆ.

ಎಲ್ಲರಲ್ಲೂ ಬೇಡುತ್ತಿದ್ದೇನೆ.. ಅವರನ್ನ ಗೌರವಿಸಿ
ಎಬಿಡಿ ನಾನು ಸುಳ್ಳು ಹೇಳಿದೆ ಅಂತಾ ಒಪ್ಪಿಕೊಂಡರೂ ಹಲವರು ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದೇ ಬಲವಾಗಿ ನಂಬಿದ್ದಾರೆ. ಇದಕ್ಕಾಗಿ ಇದೀಗ ಮತ್ತೊಮ್ಮೆ, ಎಲ್ಲರನ್ನೂ ಬೇಡುತ್ತಿದ್ದೇನೆ. ದಯವಿಟ್ಟು ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರ ಪ್ರೈವಸಿಯನ್ನ ಗೌರವಿಸಿ ಎಂದು ಎಬಿಡಿ ಕೇಳಿಕೊಂಡಿದ್ದಾರೆ.

ಎಬಿಡಿ ಮಾಡಿದ ಒಂದು ಯಡವಟ್ಟು ಇದೀಗ ಕೊಹ್ಲಿಗೆ ಕೋಪ ತರಿಸಿದ್ಯಂತೆ. ಪದೇ ಪದೇ ಕ್ಷಮೆ ಕೇಳ್ತಾ ಡ್ಯಾಮೇಜ್​ ಕಂಟ್ರೋಲ್​ಗೆ ಎಬಿಡಿ ಮುಂದಾಗಿದ್ರೂ, ಕೊಹ್ಲಿ ಮಾತ್ರ ದೀರ್ಘ ಮೌನಕ್ಕೆ ಜಾರಿದ್ದಾರೆ. ಆದ್ರೂ, ಆ ಯಡವಟ್ಟು ಇವರಿಬ್ಬರ ಗೆಳೆತನಕ್ಕೆ ಯಾವುದೇ ಹಾನಿ ಮಾಡದಿರಲಿ. ಮುಂದೆಯೂ ಇಬ್ಬರ ಗೆಳೆತನ ಹಾಗೇ ಇರಲಿ ಅನ್ನೋದು ಕ್ರಿಕೆಟ್​ ಅಭಿಮಾನಿಗಳ ಆಶಯವಾಗಿದೆ.

ವಿಶೇಷ ವರದಿ: ವಸಂತ​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎಬಿಡಿ ಮಾಡಿದ ಒಂದೇ ಒಂದು ಯಡವಟ್ಟಿಗೆ ಕೊಹ್ಲಿ ಕೋಪ.. ಆಪ್ತ ಮಿತ್ರರ ಮಧ್ಯೆ ‘ಸ್ನೇಹ’ ಬಿರುಕು..!

https://newsfirstlive.com/wp-content/uploads/2024/02/KOHLI-ABD.jpg

Load More