ಕೇವಲ 16 ಎಸೆತದಲ್ಲಿ ಅರ್ಧ ಶತಕ, 28 ಎಸೆತದಲ್ಲಿ ಸೆಂಚುರಿ.. ಐಪಿಎಲ್​​ಗೆ ಎಬಿಡಿ ಮತ್ತೆ ಕಂಬ್ಯಾಕ್..?

author-image
Ganesh
Updated On
ಕೇವಲ 16 ಎಸೆತದಲ್ಲಿ ಅರ್ಧ ಶತಕ, 28 ಎಸೆತದಲ್ಲಿ ಸೆಂಚುರಿ.. ಐಪಿಎಲ್​​ಗೆ ಎಬಿಡಿ ಮತ್ತೆ ಕಂಬ್ಯಾಕ್..?
Advertisment
  • ನೋ ಬೌಂಡರಿ.. ಒನ್ಲಿ ಸಿಕ್ಸಸ್.. ಅಬ್ಬರಕ್ಕಿಲ್ಲ ಬ್ರೇಕ್
  • ಎಬಿಡಿ ಬ್ಯಾಟಿಂಗ್​​​​​​​​​​​​ನಲ್ಲಿ ಅದೇ ಖದರ್.. ಅದೇ ಪವರ್
  • 4 ವರ್ಷಗಳ ಬಳಿಕ ವಿಂಟೇಜ್ ಬ್ಯಾಟಿಂಗ್​ ದರ್ಶನ..!

3 ವರ್ಷ 11 ತಿಂಗಳು.. ಎಬಿಡಿ ಎಂಬ ವಿಧ್ವಂಸಕಾರಿ ಬ್ಯಾಟ್ಸ್​ಮನ್​ ಕ್ರಿಕೆಟ್​​ ಅಂಗಳದಿಂದ ಹೊರಗಿದ್ರು. ಆದರೆ ಬ್ಯಾಟಿಂಗ್​ ಖದರ್ ಮಾತ್ರ ಕಿಂಚಿತ್ತೂ ಮಾಸಿಲ್ಲ. ಬಹು ದಿನಗಳ ಬಳಿಕ ಪ್ಯಾಡ್​ ಕಟ್ಟಿರೋ ಮಿಸ್ಟರ್​ 360 ಬ್ಯಾಟರ್​ ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಆಟ ನೋಡಿದ ಮೇಲೆ ಎಬಿಡಿ ಮತ್ತೆ ಐಪಿಎಲ್​ಗೆ ಮರಳ್ತಾರಾ ಅನ್ನೋ ಪ್ರಶ್ನೆ ಹುಟ್ಟಿದೆ.

ಎಬಿಡಿ.. ಅಬ್ರಹಾಂ ಬೆಂಜಮಿನ್​​​ ಡಿವಿಲಿಯರ್ಸ್​. ಕ್ರಿಕೆಟ್ ಲೋಕ ಕಂಡ ಮೋಸ್ಟ್ ಡೇಂಜರಸ್​​ ಬ್ಯಾಟ್ಸ್​​ಮನ್​​. ಕ್ರಿಕೆಟ್​ನಿಂದ ಸುದೀರ್ಘ ಅಂತರ ಪಡೆದುಕೊಂಡಿದ್ದ ಮಿಸ್ಟರ್​ 360 ಮತ್ತೆ ಫೀಲ್ಡ್​ಗೆ ಮರಳಿದ್ದಾರೆ.

ಇದನ್ನೂ ಓದಿ: Jaffar Express ಹೈಜಾಕ್.. ಪಾಕ್​ನಿಂದ ಬಲೂಚ್ ಬಂಡುಕೋರರು ಬಯಸುತ್ತಿರೋದು ಏನೇನು?

publive-image

ಮೊದಲ 4 ಎಸೆತಗಳಲ್ಲೇ 4 ಸಿಕ್ಸರ್​..!

ಸೆಂಚೂರಿಯನ್​ನ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಚಾರಿಟಿ ಮ್ಯಾಚ್​​ನಲ್ಲಿ ಕಣಕ್ಕಿಳಿದಿದ್ದ ಎಬಿಡಿ, ಮೊದಲ ಎಸೆತದಿಂದಲೇ ಸಿಕ್ಸರ್ ಬೋರ್ಗೆರೆತ ಸೃಷ್ಟಿಸಿದ್ರು. ಆರಂಭಿಕ 4 ಎಸೆತಗಳಲ್ಲೇ ಸತತ ನಾಲ್ಕು ಸಿಕ್ಸರ್​ ಸಿಡಿಸಿ ಇನ್ನಿಂಗ್ಸ್​ ಆರಂಭಿಸಿದ್ರು. 41ನೇ ವರ್ಷದಲ್ಲೂ ಹಳೇ ಬ್ಯಾಟಿಂಗ್ ಖದರ್​​​​​​​​​​​​​​​​​​​​​​ ತೋರಿಸಿದ್ರು.

16 ಎಸೆತಗಳಲ್ಲೇ ಫಿಫ್ಟಿ.. 28 ಎಸೆತದಲ್ಲಿ ಶತಕ

ಆರಂಭದಿಂದಲೂ ಅಬ್ಬರಿಸ್ತಿದ್ದ ಎಬಿಡಿ 16 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ಪ್ರದರ್ಶಿಸಿದ ಡಿವಿಲಿಯರ್ಸ್​, 28ನೇ ಎಸೆತದಲ್ಲಿ ಸಿಕ್ಸರ್​ ಸಿಡಿಸುವುದರೊಂದಿಗೆ ಶತಕ ಪೂರೈಸಿದ್ರು. ಜಸ್ಟ್​ 28 ಎಸೆತಕ್ಕೆ ಸೆಂಚುರಿ ಸಿಡಿಸಿದ್ರು.

ನೋ ಬೌಂಡರಿ.. ಒನ್ಲಿ ಸಿಕ್ಸ್​

ಎಬಿ ಡಿಲಿವಿಯರ್ಸ್​ನ ವೀರಾವೇಶ ಹೇಗಿತ್ತು ಅಂದ್ರೆ ಫೀಲ್ಡರ್​​ಗಳೆಲ್ಲ ಪ್ರೇಕ್ಷಕರಾಗಿದ್ದರು. ಯಾಕಂದ್ರೆ ಎಬಿಡಿ ಬ್ಯಾಟ್​ನಿಂದ ಸಿಡಿಯುತ್ತಿದ್ದ ಒಂದೊಂದು ಬಾಲ್, ಪ್ರೇಕ್ಷಕರ ಗ್ಯಾಲರಿಯಲ್ಲಿ ಬೀಳ್ತಿತ್ತು. 28 ಎಸೆತದಲ್ಲಿ 15 ಸಿಕ್ಸರ್ ಬಂದಿದ್ವು.

ಇದನ್ನೂ ಓದಿ: KL ರಾಹುಲ್ ಐಪಿಎಲ್​ನ ಆರಂಭಿಕ ಪಂದ್ಯಗಳನ್ನ ಆಡೋದು ಡೌಟ್.. ಕಾರಣ ಏನು ಗೊತ್ತಾ?

publive-image

ಕ್ರಿಕೆಟ್​ಗೆ ಸಪ್ರೈಸ್ ಎಂಟ್ರಿ..?

ಸದ್ಯ ಎಬಿಡಿಯ ಬ್ಯಾಟಿಂಗ್ ನೋಡಿದ್ರೆ ಈ ಯೋಚನೆ ಬರದಿರದು. 3 ವರ್ಷ 11 ತಿಂಗಳ ಬಳಿಕ ಬ್ಯಾಟ್​ ಹಿಡಿದರೂ, ಬ್ಯಾಟಿಂಗ್ ಗತ್ತು, ಗೈರತ್ತು ಕಿಂಚಿತ್ತೂ ಮಾಸಿಲ್ಲ. ಅದೇ ವಿಂಟೇಜ್ ಬ್ಯಾಟಿಂಗ್ ಖದರ್, ಅದೇ ಇನೋವೇಟಿವ್ ಶಾಟ್ಸ್​. ತನ್ನದೇ ಆದ ಸ್ಟ್ರೈಲ್​​ನಲ್ಲಿ ಬ್ಯಾಟ್ ಬೀಸಿದ ಎಬಿಡಿ, 41ರ ವಯಸ್ಸಿನಲ್ಲೂ ಹಳೇ ಎಬಿಡಿಯ ದರ್ಶನವನ್ನೇ ಮಾಡಿದ್ರು. ಈ ಬ್ಯಾಟಿಂಗ್​ ವೈಭವ ನೋಡಿದ ಎಲ್ಲರಲ್ಲೂ ಕಾಂಪಿಟೇಟಿವ್​ ಕ್ರಿಕೆಟ್​ಗೆ ಎಬಿ ಡಿವಿಲಿಯನ್ಸ್​ ಮತ್ತೆ ಬರ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಸರಿ ಹೋಯ್ತಾ ದೃಷ್ಟಿ ದೋಷ..?

ಎಬಿಡಿ ಕ್ರಿಕೆಟ್​ನಿಂದ ದೂರ ಸರಿಯಲು ಕಾರಣವೇ ದೃಷ್ಟಿದೋಷವಾಗಿತ್ತು. 2019ರಲ್ಲಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದ ಡೆಡ್ಲಿ ಬ್ಯಾಟರ್​​ಗೆ ಒಂದು ಕಾಣ್ತಿರಲಿಲ್ಲ. ಹೀಗಾದ್ರೂ ಎರಡು ವರ್ಷ ಒಂದೇ ಕಣ್ಣಲ್ಲಿ ಆಡಿ ಎಲ್ಲರನ್ನ ಖುಷಿಪಡಿಸಿದ್ದ ಎಬಿಡಿ, 2021ರಲ್ಲಿ ಫ್ರಾಂಚೈಸಿ ಲೀಗ್​ನಿಂದಲೂ ದೂರ ಉಳಿದರು. ಆ ಬಳಿಕ ಸರ್ಜರಿಗೆ ಒಳಗಾಗಿದ್ರು. ಇದೀಗ ಎಬಿಡಿಯ ಬ್ಯಾಟಿಂಗ್ ಅಬ್ಬರ ನೋಡ್ತಿದ್ರೆ, ಡಿವಿಲಿಯರ್ಸ್​ ದೃಷ್ಟಿ ದೋಷಾ ಸರಿಯಾದಂತೆ ಕಾಣ್ತಿದೆ. ಹೀಗಾಗಿ ಎಬಿಡಿಯನ್ನು ಫ್ರಾಂಚೈಸಿ ಲೀಗ್​ಗಳು ಅಪ್ರೋಚ್ ಮಾಡಿದರು ಅಚ್ಚರಿ ಇಲ್ಲ.

ಇದನ್ನೂ ಓದಿ: 10 ತಿಂಗಳ ಬಳಿಕ ಶೂಟಿಂಗ್‌ನಲ್ಲಿ ಭಾಗಿಯಾದ ನಟ ದರ್ಶನ್; ಟಾಪ್ 10 ಫೋಟೋ ಇಲ್ಲಿವೆ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment