ಆರ್​ಸಿಬಿಯಿಂದ ಓರ್ವನ ಆಯ್ಕೆ.. ABD ಪ್ರಕಾರ ಸೂಪರ್ ಸ್ಟಾರ್ ಯಾರು? ಸ್ನೇಹಿತ ಕೊಹ್ಲಿ ಅಲ್ಲ..!

author-image
Ganesh
Updated On
‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?
Advertisment
  • ABD ಪ್ರಕಾರ ಈ ವರ್ಷದ ಮೂವರು ಸೂಪರ್ ಸ್ಟಾರ್ ಯಾರು?
  • ಅಚ್ಚರಿ ಮೂಡಿಸಿದ ಎಬಿ ಡಿವಿಲಿಯರ್ಸ್​ನ ವಿಶೇಷ ಆಯ್ಕೆ
  • ನಾಳೆಯಿಂದ ಐಪಿಎಲ್ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ

IPL 2025 ಅಂತಿಮ ಹಂತ ತಲುಪಿದೆ. ನಾಳೆಯಿಂದ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ಸೆಣಸಾಟ ನಡೆಸಲಿವೆ. ಈ ನಡುವೆ ಅನುಭವಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಈ ಋತುವಿನಲ್ಲಿ ಹೆಚ್ಚು ಪ್ರಭಾವ ಬೀರಿದ 3 ಆಟಗಾರರ ಹೆಸರು ಹೇಳಿದ್ದಾರೆ.

ಅವರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ತಲಾ ಒಬ್ಬ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಅತ್ಯಂತ ಅಚ್ಚರಿಯ ವಿಷಯ ಏನೆಂದರೆ ಡಿವಿಲಿಯರ್ಸ್, ತಮ್ಮ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿಗೆ ಸ್ಥಾನ ನೀಡಿಲ್ಲ.

ಇದನ್ನೂ ಓದಿ: RCB ವಿರುದ್ಧ ಸೆಂಚುರಿ, ಆದರೂ ರಿಷಭ್​ ಪಂತ್​ಗೆ ಬಿಸಿಸಿಐ ಬಿಗ್ ಶಾಕ್​​.. ಲಕ್ನೋ ಪ್ಲೇಯರ್ಸ್​ ಏನ್ ಮಾಡಿದ್ರು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಬಿಡಿ ಮೂವರು ಯುವ ಆಟಗಾರರ ಹೆಸರು ರಿವೀಲ್ ಮಾಡಿದ್ದಾರೆ. ಅವರ ಪ್ರಕಾರ ಸಾಯಿ ಸುದರ್ಶನ್, ಡೆವಾಲ್ಡ್ ಬ್ರೆವಿಸ್ ಮತ್ತು ಜೋಶ್ ಹೇಜಲ್​ವುಡ್ ಹೆಸರು ಹೇಳಿದ್ದಾರೆ. ಐಪಿಎಲ್-2025ರಲ್ಲಿ ಅತ್ಯಂತ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ ಎಂದು ಎಬಿಡಿ ಬಣ್ಣಿಸಿದ್ದಾರೆ.

ಈ ಋತುವಿನಲ್ಲಿ ಅನೇಕ ಆಟಗಾರರು ನನಗೆ ಇಷ್ಟವಾದರು. ಸಾಯಿ ಸುದರ್ಶನ್ ಅವರಿಂದ ಪ್ರಭಾವಿತನಾಗಿದ್ದೇನೆ. ಅವರ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಶೈಲಿ ಇಷ್ಟವಾಗಿದೆ. ಕೆಲವು ಸೀಸನ್‌ಗಳ ಹಿಂದೆ ಅವರ ಬಗ್ಗೆ ಮಾತನಾಡಿದ್ದೆ. ಸಾಯಿ ಸುದರ್ಶನ್, ಮುಂದಿನ ದಿನಗಳಲ್ಲಿ ಉದಯೋನ್ಮುಖ ತಾರೆ ಆಗ್ತಾರೆ ಎಂದಿದ್ದೆ. ಈಗ ಅದನ್ನು ಮಾಡಿ ತೋರಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸುದರ್ಶನ್ 14 ಪಂದ್ಯಗಳನ್ನ ಆಡಿ 679 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ದಿಗ್ವೇಶ್ ರಾಠಿ ಮಂಗಾಟಕ್ಕೆ ಸೊಪ್ಪು ಹಾಕದ ಪಂತ್; ಆರ್​ಸಿಬಿ ಫ್ಯಾನ್ಸ್ ಹೃದಯ ಗೆದ್ದ LSG ನಾಯಕ..! VIDEO

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment