newsfirstkannada.com

ವಿರಾಟ್ ಕೊಹ್ಲಿ, ಅವರ ಕುಟುಂಬಕ್ಕೆ ಕ್ಷಮೆ ಕೇಳ್ತೇನೆ ಎಂದು ಕೈಮುಗಿದ ಎಬಿಡಿ

Share :

Published February 11, 2024 at 8:29am

Update February 11, 2024 at 8:30am

    ಕೊಹ್ಲಿ-ಅನುಷ್ಕಾ ಕುರಿತ ಹೇಳಿಕೆಗೆ ಎಬಿಡಿ ಯೂಟರ್ನ್

    ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಗೈರು, ಭಾರೀ ಟೀಕೆ

    ‘ನನ್ನ ಸ್ನೇಹಿತ ವಿರಾಟ್ ಕೊಹ್ಲಿ..’ ಎನಂದ್ರು ಎಬಿಡಿ..?

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ.ಡೆವಿಲಿರ್ಸ್ ಅವರು ವಿರಾಟ್ ಕೊಹ್ಲಿ ಹಾಗೂ ಅವರ ಕುಟುಂಬಕ್ಕೆ ಕ್ಷಮೆ ಕೇಳಿದ್ದಾರೆ. ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ಪೋಷಕರಾಗುತ್ತಿದ್ದಾರೆ ಎಂದು ಎಬಿಡಿ ಯೂಟ್ಯೂಬ್​​ನಲ್ಲಿ ಹೇಳಿದ್ದರು.

ಎಬಿಡಿ ಅವರ ಈ ಸ್ಟೇಟ್​​​ಮೆಂಟ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದರು. ಆದರೆ ವಿರಾಟ್ ಕೊಹ್ಲಿ ಕೆಲವು ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಟೀಕೆಗಳನ್ನು ಎದುರಿಸಿದ್ದರು. ಭಾರತದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯಿಂದ ವಿರಾಟ್ ಗೈರಾಗಿದ್ದರು, ಇದೇ ಕಾರಣಕ್ಕೆ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯ ಆಡುತ್ತಿಲ್ಲ ಎಂದು ಟೀಕೆ ಎದುರಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮತ್ತೊಂದು ವಿಡಿಯೋ ಮಾಡಿ ಕ್ಷಮೆ ಕೇಳಿರುವ ಎಬಿಡಿ, ನನ್ನ ಸ್ನೇಹಿತ ವಿರಾಟ್ ಕೊಹ್ಲಿ ಇನ್ನೂ ಲಭ್ಯವಾಗಿಲ್ಲ. ಅವರಿಗೆ ಬೇಕಾಗಿರುವ ಖಾಸಗಿತನ ನೀಡುವಂತೆ ಎಲ್ಲರಲ್ಲೂ ಕೋರುತ್ತೇನೆ. ಫ್ಯಾಮಿಲಿ ಮುಖ್ಯ. ಅಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಅದೆಲ್ಲವನ್ನೂ ಗೌರವಿಸಬೇಕಾಗಿ ನಾನು ಕೇಳಿಕೊಳ್ಳುತ್ತೇನೆ. ಕಳೆದ ಬಾರಿ ನಾನು ದೊಡ್ಡ ತಪ್ಪು ಮಾಡಿದೆ. ನಾನು ವಿರಾಟ್ ಕೊಹ್ಲಿ ಹಾಗೂ ಅವರ ಕುಟುಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿ, ಅವರ ಕುಟುಂಬಕ್ಕೆ ಕ್ಷಮೆ ಕೇಳ್ತೇನೆ ಎಂದು ಕೈಮುಗಿದ ಎಬಿಡಿ

https://newsfirstlive.com/wp-content/uploads/2024/02/KOHLI-ABD.jpg

Load More