/newsfirstlive-kannada/media/post_attachments/wp-content/uploads/2023/12/ABD-3.jpg)
ಐಪಿಎಲ್ ರಿಟೈನ್ಡ್​​ ಆಯ್ತು, ಮೆಗಾ ಹರಾಜು ಪ್ರಕ್ರಿಯೆ ಮುಗಿದದ್ದೂ ಆಗಿದೆ. ಅಭಿಮಾನಿಗಳಿಗೆ ಯಾವ ತಂಡದಲ್ಲಿ ಯಾರೆಲ್ಲ ಇದ್ದಾರೆ ಅನ್ನೋದು ಕೂಡ ಗೊತ್ತಾಗಿದೆ. ಹೀಗಿದ್ದೂ ಆರ್​ಸಿಬಿ ಕ್ಯಾಪ್ಟನ್ಸಿ ವಿಚಾರವನ್ನು ಸೀಕ್ರೆಟ್ ಆಗಿಯೇ ಇಟ್ಟಿದೆ.
ಹರಾಜು ಮುಗಿದ ಬೆನ್ನಲ್ಲೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಯಾರು ಆರ್​ಸಿಬಿ ನಾಯಕತ್ವವಹಿಸಿಕೊಳ್ತಾರೆ ಅನ್ನೋದು. ಇದೀಗ ಆರ್​ಸಿಬಿ ದಂತಕತೆ, ದಕ್ಷಿಣ ಆಫ್ರಿಕಾ ಕ್ರಿಕೆಟ್​ನ ಸೂಪರ್​ ಸ್ಟಾರ್​ ಎಬಿಡಿ ಅವರು, ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಆಗ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್​ನಲ್ಲಿ ಮಾತನಾಡಿರುವ ಅವರು.. ಆರ್​ಸಿಬಿ ಹೊಸ ನಾಯಕನನ್ನು ಎದುರು ನೋಡುತ್ತಿದೆ. ನನಗೆ ಇನ್ನೂ ದೃಢಪಟ್ಟಿಲ್ಲ.
ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗ್ತಾರೆ ಎಂದು ಭಾವಿಸುತ್ತೇನೆ. ಅವರೇ ಆರ್​ಸಿಬಿ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಕೊಹ್ಲಿಯೇ ಆರ್​ಸಿಬಿಗೆ ನಾಯಕ ಅನ್ನೋ ಅಭಿಮಾನಿಗಳ ವದಂತಿಗಳಿಗೆ ಎಬಿಡಿ ಹೇಳಿಕೆಯಿಂದ ಮತ್ತಷ್ಟು ರೆಕ್ಕಪುಕ್ಕ ಬಂದಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್​ಸಿಬಿ ಒಟ್ಟು 143 ಪಂದ್ಯಗಳನ್ನು ಆಡಿದೆ. ಅದರಲ್ಲಿ 66 ಪಂದ್ಯಗಳನ್ನು ಗೆದ್ದು, 70 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 2016ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ ಫೈನಲ್ ಪ್ರವೇಶ ಮಾಡಿತ್ತು. 2013ರಿಂದ 2021ರವರೆಗೆ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕತ್ವ ವಹಿಸಿಕೊಂಡು ತಂಡವನ್ನು ಮುನ್ನಡೆಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್