newsfirstkannada.com

ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿ; ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿದ ಎಬಿಡಿ ಹೇಳಿದ್ದೇನು?

Share :

Published April 22, 2024 at 4:26pm

    ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ನಡೆದ ರೋಚಕ ಪಂದ್ಯ

    ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

    ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಆರ್​​ಸಿಬಿ ಮಾಜಿ ಪ್ಲೇಯರ್​ ಎಬಿಡಿ ಕೆಂಡಾಮಂಡಲ

ಇತ್ತೀಚೆಗೆ ಕೋಲ್ಕತ್ತಾದ ಈಡನ್​ ಗಾರ್ಡೆನ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​​​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​​ಸಿಬಿ 1 ರನ್​ನಿಂದ ಸೋತಿದೆ.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಕೆಕೆಆರ್​ 20 ಓವರ್​ಗೆ 222 ರನ್‌ ಗಳಿಸಿ ಆರ್​​​ಸಿಬಿಗೆ ಸವಾಲಿನ ಮೊತ್ತ ಟಾರ್ಗೆಟ್​ ನೀಡಿತ್ತು. ಈ ಬೃಹತ್​ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ತಂಡ ನಿಗದಿತ 20 ಓವರ್​ಗೆ 10 ವಿಕೆಟ್ ನಷ್ಟಕ್ಕೆ 221 ರನ್​ ಗಳಿಸಿ 1 ರನ್​​ನಿಂದ ರೋಚಕ ಸೋಲು ಕಂಡಿದೆ.

ಇಷ್ಟಾದ್ರೂ ವಿರಾಟ್ ಕೊಹ್ಲಿ ಅವರದ್ದು ಔಟೋ ಇಲ್ಲವೋ? ಎಂಬ ಚರ್ಚೆ ನಡೆಯುತ್ತಿದೆ. ಕೊಹ್ಲಿ ಔಟ್​ ಆದ ರೀತಿ ವಿವಾದಕ್ಕೆ ಕಾರಣವಾಗಿದೆ. ಕೊಹ್ಲಿ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ರು. RCB ಇನಿಂಗ್ಸ್‌ 3ನೇ ಓವರ್​​ನ ಮೊದಲ ಬಾಲ್​ನಲ್ಲಿ ವೇಗಿ ಹರ್ಷಿತ್ ರಾಣಾಗೆ ಕ್ಯಾಚ್ ನೀಡಿದರು. ಇದು ನೋಬಾಲ್​ ಆಗಿತ್ತು. ಕೊಹ್ಲಿ ಅಪೀಲ್​ ಮಾಡಿದ್ರೂ ಬೇಕಂತಲೇ ಫೀಲ್ಡ್ ಅಂಪೈರ್ ಔಟ್​ ಕೊಟ್ಟರು. ಡಿಆರ್‌ಎಸ್ ಕೂಡ ಕೊಹ್ಲಿ ವಿರುದ್ಧ ಬಂದಿತ್ತು. ಈಗ ಕೊಹ್ಲಿ ವಿವಾದಾತ್ಮಕ ಔಟ್​​ ಬಗ್ಗೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಆಕ್ರೋಶ ಹೊರಹಾಕಿದ್ದಾರೆ.

ಆಟದಲ್ಲಿ ಕೆಲವು ನಿರ್ಧಾರಗಳು ಕೋಪ ಮತ್ತು ಗೊಂದಲಕ್ಕೆ ಅವಕಾಶ ಮಾಡಿಕೊಡುತ್ತವೆ. ಇದನ್ನು ಸರಿಪಡಿಸುವುದು ಕಠಿಣವಲ್ಲ. ಬ್ಯಾಟರ್‌ ನಿಲುವು ಪಡೆಯಬೇಕು, ಲೈನ್‌ ಎಳೆಯಬೇಕು, ಬಾಲ್ ಟ್ರ್ಯಾಕಿಂಗ್ ಬಳಸಿ ತೀರ್ಪು ನೀಡಬೇಕು. ನಮ್ಮಲ್ಲಿ ತಂತ್ರಜ್ಞಾನವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳೋಣ. ಸುಮ್ಮನೇ ಅನಗತ್ಯ ತೀರ್ಪು ನೀಡುವುದು ಸರಿಯಲ್ಲ ಎಂದಿದ್ದಾರೆ ಎಬಿಡಿ.

ಇದನ್ನೂ ಓದಿ: ವಿವಾದಾತ್ಮಕ ತೀರ್ಪು ವಿರುದ್ಧ ಕೊಹ್ಲಿ ಕಿತ್ತಾಟ; ತೆಂಡುಲ್ಕರ್​​ ಎಳೆದು ತಂದು ಕೊಹ್ಲಿಗೆ ಕೌಂಟರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿ; ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿದ ಎಬಿಡಿ ಹೇಳಿದ್ದೇನು?

https://newsfirstlive.com/wp-content/uploads/2024/04/Faf_Kohli_RCB1-2.jpg

Load More