/newsfirstlive-kannada/media/post_attachments/wp-content/uploads/2024/11/RCB.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್​​ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್​​ಸಿಬಿ ಈ ಮೂಲಕ ಮುಂದಿನ ಸೀಸನ್​ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್​​ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ.
ಸದ್ಯ ಎಲ್ಲರ ಈ ಪ್ರಶ್ನೆಗೆ ಆರ್​​ಸಿಬಿ ತಂಡದಿಂದ ಕೇಳಿ ಬರುತ್ತಿರೋ ಏಕೈಕ ಉತ್ತರ ವಿರಾಟ್​ ಕೊಹ್ಲಿ. ಮುಂದಿನ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ವಿರಾಟ್​ ಕೊಹ್ಲಿಯೇ ಮುನ್ನಡೆಸುವುದು ಬಹುತೇಕ ಕನ್ಫರ್ಮ್​​ ಆಗಿದೆ. ಈ ಬಗ್ಗೆ ಆರ್​​ಸಿಬಿ ತಂಡದ ಮಾಜಿ ಸ್ಟಾರ್​ ಬ್ಯಾಟರ್​​​ ಎಬಿ ಡಿವಿಲಿಯರ್ಸ್​ ಮಾತಾಡಿದ್ದಾರೆ.
ಎಬಿಡಿ ಏನಂದ್ರು?
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತಾಡಿರೋ ಎಬಿಡಿ, ನನ್ನ ಪ್ರಕಾರ ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಒಬ್ಬರೇ ಆಯ್ಕೆ ಎನಿಸುತ್ತದೆ. ಸದ್ಯ ವಿರಾಟ್ ವೃತ್ತಿ ಜೀವನದ ಕೊನೆ ಹಂತದಲ್ಲಿದ್ದಾರೆ. ಇವರು ಬೇಗ ಫಾರ್ಮ್​​ಗೆ ಬಂದು ತಂಡವನ್ನು ಗೆಲ್ಲಿಸಬೇಕು. ಇದು ಕೊಹ್ಲಿ ವೃತ್ತಿಜೀವನಕ್ಕೆ ತುಂಬ ಮಹತ್ವದಾಗಿದೆ ಎಂದರು.
ಕೊಹ್ಲಿ ಐಪಿಎಲ್​ ಸಾಧನೆ
ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ಕ್ಯಾಪ್ಟನ್​ ಆಗೋದು ಗ್ಯಾರಂಟಿ ಆಗಿದೆ. ಇವರು ಈಗಾಗಲೇ ಆರ್‌ಸಿಬಿ ಪರ 143 ಪಂದ್ಯಗಳನ್ನು ಆಡಿದ್ದು, 66 ಪಂದ್ಯಗಳಲ್ಲಿ ಜಯ ದಾಖಲಿಸಿದ್ದಾರೆ. ಅಲ್ಲದೆ 70 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇವರ ಗೆಲುವಿನ ಶೇಕಡಾ 46.15 ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us