newsfirstkannada.com

ಕೊಹ್ಲಿ ರಕ್ತದ ಕಣ ಕಣದಲ್ಲೂ ಕ್ರಿಕೆಟ್​ ಇದೆ.. ಅಫ್ಘಾನ್​​ ತಂಡಕ್ಕೆ ವಾರ್ನಿಂಗ್​ ಕೊಟ್ಟ ಎಬಿಡಿ!

Share :

Published January 17, 2024 at 6:30pm

    ಇಂದು ಟೀಂ ಇಂಡಿಯಾ, ಅಫ್ಘಾನ್​ ಮಧ್ಯೆ ಟಿ20

    ಅಫ್ಘಾನ್​​​​ ತಂಡಕ್ಕೆ ಎಬಿಡಿ ಫುಲ್​ ವಾರ್ನಿಂಗ್​​​!

    ವಿರಾಟ್​​ ಬಗ್ಗೆ ಡಿವಿಲಿಯರ್ಸ್​ ಹೇಳಿದ್ದೇನು ಗೊತ್ತಾ?

ಇಂದು ಟೀಂ ಇಂಡಿಯಾ, ಅಫ್ಘಾನಿಸ್ತಾನದ ಮಧ್ಯೆ ಕೊನೇ ಟಿ20 ಪಂದ್ಯ. ಅದು ಬೆಂಗಳೂರು ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿದೆ. ಬಹಳ ದಿನಗಳ ಬಳಿಕ ವಿರಾಟ್​ ಕೊಹ್ಲಿ ತನ್ನ ತವರು ಚಿನ್ನಸ್ವಾಮಿ ಸ್ಟೇಡಿಯಮ್​​ನಲ್ಲಿ ಮ್ಯಾಚ್​​ ಆಡುತ್ತಿದ್ದಾರೆ. ಈ ಮಧ್ಯೆ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್‌ ಅಫ್ಘಾನ್​ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಎಬಿಡಿ ಪಿಟಿಐಗೆ ಸಂದರ್ಶನ ನೀಡಿದ್ದರು. ಈ ವೇಳೆ ವಿರಾಟ್‌ ಟಿ20 ಕ್ರಿಕೆಟ್‌ಗೆ ಮರಳಿದ್ದು ಅಚ್ಚರಿ ಏನಲ್ಲ ಎಂದಿದ್ದಾರೆ. ವಿರಾಟ್, ರೋಹಿತ್ ಟಿ20 ಕ್ರಿಕೆಟ್‌ ಆಡುತ್ತಿರುವುದು ತುಂಬಾ ಸಂತೋಷ ತಂದಿದೆ. ಟಿ20 ವಿಶ್ವಕಪ್​​ನಲ್ಲಿ ಭಾರತ ಗೆಲ್ಲಬೇಕು ಅಂದರೆ ರೋಹಿತ್​​, ಕೊಹ್ಲಿ ಬೇಕೇ ಬೇಕು ಎಂದರು.

ಕೊಹ್ಲಿ ನರ ನಾಡಿಯಲ್ಲೂ ಕ್ರಿಕೆಟ್​​ ಇದೆ, ರಕ್ತ ನಾಳಗಳಲ್ಲೂ ಕ್ರಿಕೆಟ್ ಇದೆ. ಇದು ಅವರ ಸ್ಫೂರ್ತಿ. ನಾನು ಕ್ರಿಕೆಟ್​​ ಬಹಳ ಉತ್ಸಾಹದಿಂದಲೇ ಆಡುತ್ತೇನೆ. ಒಳಗಿನ ಬೆಂಕಿ ತಣ್ಣಗಾಗಲಿದೆ ಎಂದು ಅನಿಸಿದ ಕೂಡಲೇ ನಿವೃತ್ತಿ ಹೊಂದಿದ್ದೇನೆ. ಕೊಹ್ಲಿ ಜೀವನದಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಂಡಿದ್ದಾರೆ. ಆತನ ರಕ್ತದ ಕಣ ಕಣದಲ್ಲೂ ಕ್ರಿಕೆಟ್​ ಎಂದರು ಎಬಿಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ರಕ್ತದ ಕಣ ಕಣದಲ್ಲೂ ಕ್ರಿಕೆಟ್​ ಇದೆ.. ಅಫ್ಘಾನ್​​ ತಂಡಕ್ಕೆ ವಾರ್ನಿಂಗ್​ ಕೊಟ್ಟ ಎಬಿಡಿ!

https://newsfirstlive.com/wp-content/uploads/2024/01/Kohli_ABD_1.jpg

Load More