/newsfirstlive-kannada/media/post_attachments/wp-content/uploads/2024/11/30-YEARS-LATE.jpg)
ವಿಧಿಯ ತನ್ನ ಹಾದಿಯನ್ನು ಚಿತ್ರ ವಿಚಿತ್ರವಾಗಿ ಬರೆಯುತ್ತದೆ. ಅದರು ಎಂದಿಗೂ ಕೂಡ ಸರಳರೇಖೆಯಲ್ಲ. ವಕ್ರರೇಖೆಯಲ್ಲಿಯೇ ಅದರ ಹಾದಿಯಿರುತ್ತದೆ. ಅದಕ್ಕೆ ಸಾಕ್ಷಿಯಾಗಿ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ನೋಯ್ಡಾದಲ್ಲಿಯೂ ಕೂಡ ಅಂತಹುದೇ ಒಂದು ಘಟನೆ ನಡೆದಿದೆ. 1993ರಲ್ಲಿ ಕಳೆದು ಹೋಗಿದ್ದ ಮನೆಯ ಮಗನೊಬ್ಬ 30 ವರ್ಷಗಳ ಬಳಿಕ ತನ್ನ ಮನೆಯವರನ್ನು ಸೇರಿದ್ದಾನೆ
ಪವಾಡಗಳು ನಡೆಯುವುದಿಲ್ಲ ಎನ್ನುವುದು ಸುಳ್ಳು. ಅವು ನಡೆಯುತ್ತಲೇ ಇರುತ್ತವೆ. ಭೀಮ್ ಸಿಂಗ್ ಎಂಬ ಯುವಕನ ಬಾಳಲ್ಲಿಯೂ ಅದೇ ನಡೆದಿದೆ. ಇನ್ನೆಂದೂ ನಾವು ಮಗನನ್ನು ನೋಡಲಾರೆವು ಎಂದು ಮರೆತು ಹೋಗಿದ್ದ ತಂದೆ ತಾಯಿಗಳು ಮತ್ತೆ ತಮ್ಮ ಮಗನನ್ನು ಕಣ್ಣಾರೆ ಕಂಡು ಆನಂದ ಭಾಷ್ಪ ಸುರಿಸಿದ್ದಾರೆ. ಇಂತಹ ಪವಾಡಕ್ಕೆ ಒಂದು ಧನ್ಯವಾದಗಳನ್ನು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ: ಜರ್ಮನ್, ಇಟಲಿ, ಫ್ರಾನ್ಸ್ ರಷ್ಯಾದ ಗೋಲ್ಡ್ ರಿಸರ್ವ್ ಮೀರಿಸುತ್ತೆ! ಭಾರತೀಯ ಮಹಿಳೆಯರ ಬಳಿ ಇರುವ ಚಿನ್ನ ಎಷ್ಟು ಗೊತ್ತಾ?
1993ರಲ್ಲಿ ಭೀಮ್ನನ್ನು ಅಪರಹಣ ಮಾಡಿದ್ದವು ಬೆದರಿಕೆಯ ಕರೆ ಮಾಡಿ ಅವರ ಕುಟುಂಬವನ್ನು ಹೆದರಿಸಿದ್ದರು. ಸೆಪ್ಟಂಬರ್ 1993ರಲ್ಲಿ ಒಂದು ಕರೆ ಬಂದ ಬಳಿಕ ಯಾವುದೇ ಸುದ್ದಿಯೂ ಕೂಡ ಬರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಕೂಡ ಅವರು ಏರಿದ್ದರು. ದಿನಗಳ ಕಳೆದರು ಕೂಡ ಅವನ ಯಾವುದೇ ಸುಳಿವು ಸಿಗಲಿಲ್ಲ. ಅವರ ಜಗತ್ತಿನಲ್ಲಿ ಘಾಜಿಯಾಬಾದ್ನ ಆ ಒಂಬತ್ತು ವರ್ಷದ ಹುಡುಗ ಅಳಿಸಿ ಹೋಗಿದ್ದ.
ಭೀಮ್ನ ತಂದೆ ತುಲಾರಾಮ್ ತಮ್ಮ ಕೆಲಸದಿಂದ ನಿವೃತ್ತರಾದ ಮೇಲೆ ದಾದ್ರಿಗೆ ಶಿಫ್ಟ್ ಆದರು. ಅವರಿಗೆ ಮುಂದೊಂದು ದಿನ ತಮ್ಮ ಮಗನ್ನು ನೋಡುತ್ತೇವೆ ಎಂಬ ಭರವಸೆಯೇ ಕಳೆದು ಹೋಗಿತ್ತು. ಆದ್ರೆ ಕಳೆದ ಮಂಗಳವಾರದಂದು ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ತಂದೆ ಮಗ ಎದುರಾದ್ರೂ ಅವರ ಕಣ್ಣನ್ನೇ ಅವರು ನಂಬದಾಂತಾಗಿದ್ದರು ಭೀಮ್ ಮತ್ತು ಅವರ ತಂದೆ. ಇಡೀ ಕುಟುಂಬವೇ ಭೀಮ್ನನ್ನು 9 ವರ್ಷದವನಿದ್ದಾಗ ನೋಡಿದ್ದು ಅದಾದ ಬಳಿಕ ಅವನ ಮುಖವೂ ಕೂಡ ಅವರ ನೆನಪಿನಿಂದ ಅಳಿಸಿ ಹೋಗಿತ್ತು. ಅವನ ಎಡಗೈಯನ್ನು ಪರೀಕ್ಷಿಸಿ ನೋಡಿದಾಗ ಅಲ್ಲಿ ಹುಟ್ಟು ಮಚ್ಚೆ ಇತ್ತು. ಬಲಗಾಲಿನ ಮೇಲೆಯೂ ಕೂಡ ಒಂದು ಹುಟ್ಟು ಮಚ್ಚೆ ಇದ್ದಿದ್ದನ್ನು ಕಂಡು ಮನೆಯವರು ಇವನು ನಮ್ಮ ಭೀಮ್ ಎಂದು ಅಪ್ಪಿಕೊಂಡು ಅತ್ತರು.
ಇದನ್ನೂ ಓದಿ: ನಾನ್ ವೆಜ್ ಊಟ.. ಬಾಯ್ ಫ್ರೆಂಡ್ ಮಾತಿಗೆ ಜೀವ ಬಿಟ್ಟ ಏರ್ ಇಂಡಿಯಾ ಪೈಲಟ್; ಅಸಲಿಗೆ ಆಗಿದ್ದೇನು?
ಕಳೆದ ಶನಿವಾರ ಭೀಮ್ ಶಾಹಿಬಾಬದ್ನ ಪೊಲೀಸ್ ಠಾಣೆಗೆ ನೀಲಿ ಇಂಕ್ನಲ್ಲಿ ಬರೆದಿದ್ದ ಒಂದು ಪತ್ರವನ್ನು ಹಿಡಿದುಕೊಂಡು ಬಂದದ್ದ. ಇವನು ಕಿಡ್ನಾಪ್ ಆದಾಗ ದೆಹಲಿ ಮೂಲದ ಒಬ್ಬ ಉದ್ಯಮಿ ಇವನನ್ನು ಕಾಪಾಡಿದ್ದರು ಎಂದು ತಿಳಿದು ಬಂದಿದೆ. ಅವರ ಎದುರು ಅಂದು ತನಗೆ ನೆನಪಿದ್ದ ಎಲ್ಲಾ ವಿಷಯವನ್ನು ಹೇಳಿದ್ದ ಭೀಮ್. ಅದನ್ನೇ ನೀಲಿ ಇಂಕ್ನಲ್ಲಿ ಒಂದು ಪೇಪರ್ನಲ್ಲಿ ಬರೆದುಕೊಂಡಿದ್ದ. ಎಸಿಪಿ ರಜನೀಶ್ ಉಪಾಧ್ಯಾಯ್ ಅವರಿಗೆ ತನಗೆ ನೆನಪಿದ್ದ ಎಲ್ಲ ವಿಷಯವನ್ನು ಹೇಳಿದ್ದ. ತಾನು ನೋಯ್ಡಾದ ಒಂದು ಪ್ರದೇಶದಲ್ಲಿ ಇದ್ದೆ. ನನಗೆ ತಂದೆ ತಾಯಿ ಹಾಗೂ ನಾಲ್ವರು ಸಹೋದರಿಯರಿದ್ದಾರೆ. ನನ್ನ ತಂದೆಯ ಹೆಸರು ತುಲಾರಾಮ್ ಎಂದೆಲ್ಲಾ ಹೇಳಿದ್ದಾನೆ. 1993ರಲ್ಲಿ ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು ಎಂದು ಕೂಡ ಹೇಳಿದ್ದಾನೆ.
ಕೂಡಲೇ ಪೊಲೀಸರು ಹಳೆಯ ಎಫ್ಐಆರ್ಗಳನ್ನೆಲ್ಲಾ ಕೆದಕಿ ನೋಡಿದಾಗ ಸೆಪ್ಟಂಬರ್ 18 1993ರಲ್ಲಿ ಶಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದ ಕಂಡು ತುಲಾರಾಮ್ಗಾಗಿ ಹಡುಉಕಾಟ ನಡೆಸಿದ್ದಾರೆ. ಕೊನೆಗೆ ಎಲೆಕ್ಟ್ರೆಸಿಟಿ ಡಿಪಾರ್ಟ್ಮೆಂಟ್ನಲ್ಲಿ ತುಲಾರಾಮ್ ಎಂಬುವವರು ಕೆಲಸಮಾಡುತ್ತಿದ್ದರು. ಅವರ ಮಗ ಕಿಡ್ನಾಪ್ ಆಗಿದ್ದ. ಕಿಡ್ನಾಪ್ ಮಾಡಿದವರು 7.40 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಪತ್ರ ಬರೆದಿದ್ದರು, ಇವೆಲ್ಲ ಮಾಹಿತಿಗಳು ದಕ್ಕಿವೆ. ಕೊನೆಗೆ ತಮ್ಮ ತುಲಾರಾಮ್ ಈಗಿರುವುದು ಎಲ್ಲಿ ಎಂದು ಕಂಡು ಹಿಡಿದ ಪೊಲೀಸರು ತಂದೆ ಮತ್ತು ಮಗನನ್ನು ಒಂದು ಮಾಡಿದ್ದಾರೆ. ಮೂವತ್ತು ವರ್ಷದ ಹಳೆಯ ಕೇಸೊಂದು ಕೊನೆಗೂ ಸುಖಾಂತ್ಯ ಕಂಡಿದೆ.
1993ರಲ್ಲಿ ಭೀಮ್ನನ್ನು ಅಪಹರಣ ಮಾಡಿದ್ದ ವ್ಯಕ್ತಿಗಳು ಆತನನ್ನು ಪಶುಪಾಲಕರಿಗೆ ಮಾರಿದ್ದಾರೆ. ಕುರಿ ಮತ್ತು ಮೇಕೆಗಳ ನಡುವೆಯೇ ಬೆಳೆದ ಹುಡುಗು. ಕುರಿಗಳ ಶೆಡ್ನಲ್ಲಿಯೇ ಊಟ ನಿದ್ರೆಯನ್ನು ಕಂಡಿದ್ದಾನೆ ಹೊರಜಗತ್ತಿನ ಸಂಪರ್ಕವೇ ಭೀಮ್ನಿಂದ ಕಡಿದು ಹೋಗಿತ್ತು. ಒಂದಿಷ್ಟು ರೊಟ್ಟಿ ಒಂದಿಷ್ಟು ಕಪ್ ಚಹಾ ಬಿಟ್ಟರೇ ಬದುಕಲ್ಲಿ ಈತ ಏನನ್ನೂ ನೋಡಿರಲಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ