/newsfirstlive-kannada/media/post_attachments/wp-content/uploads/2025/07/Neha.jpg)
ಕಳೆದ 30 ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಪ್ರಜೆ (Bangladeshi man)ಯನ್ನು ಬಂಧಿಸಲಾಗಿದೆ. ಆಘಾತಕಾರಿ ಸಂಗತಿ ಏನೆಂದರೆ ಕಳೆದ 8 ವರ್ಷಗಳಿಂದ ನೇಹಾ ಕಿನ್ನರ್ (Neha Kinnar) ಎಂಬ ಹೆಸರಿನಲ್ಲಿ ಟ್ರಾನ್ಸ್ಸೆಂಡರ್ ಆಗಿ ಆಕೆ ವಾಸವಿರೋದು ತಿಳಿದುಬಂದಿದೆ.
ಭೋಪಲ್ ಪೊಲೀಸರಿಗೆ ಸಿಕ್ಕ ರಹಸ್ಯ ಮಾಹಿತಿ ಮತ್ತು ಗುಪ್ತಚರ ಕಾರ್ಯಾಚರಣೆಯ ಆಧಾರದ ಮೇಲೆ ಬಾಂಗ್ಲಾದೇಶದ ಪ್ರಜೆಯನ್ನ ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆತ ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಮತ್ತು ಪಾಸ್ಪೋರ್ಟ್ನಂಥ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಅಂತಾ ತಿಳಿದುಬಂದಿದೆ.
ಇದನ್ನೂ ಓದಿ: ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲಾನ್.. ಕನ್ನಡಿಗನ ಮೇಲೆ ಕಣ್ಣಿಟ್ಟ ಕೆಕೆಆರ್..!
ಬಂಧಿತ ಆರೋಪಿ ಹೆಸರು ಅಬ್ದುಲ್ ಕಲಾಂ (Abdul Kalam) ಎಂದು ಗುರುತಿಸಲಾಗಿದೆ. ಈತ 10 ವರ್ಷ ಇರುವಾಗ ಭಾರತಕ್ಕೆ ಅಕ್ರಮವಾಗಿ ಬಂದಿದ್ದಾನೆ. ಎರಡು ದಶಕಗಳ ಕಾಲ ಮುಂಬೈನಲ್ಲಿ ವಾಸಿಸಿದ ನಂತರ ಭೋಪಾಲ್ನ ಬುಧ್ವಾರಾ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದರು. ಅಲ್ಲಿ ಆತನ ನೇಹಾ ಕಿನ್ನರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ.
IB ಮತ್ತ ATS ನಿಂದಲೂ ತನಿಖೆ
ಪ್ರಕರಣದ ಗಂಭೀರತೆ ಪರಿಗಣಿಸಿರುವ ಅಧಿಕಾರಿಗಳು ಗುಪ್ತಚರ ಇಲಾಖೆ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯನ್ನು ನಡೆಸ್ತಿದೆ. ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸೈಬರ್ ತಜ್ಞರು ಕೂಡ ತನಿಖೆ ಆರಂಭಿಸಿದ್ದು, ಎಲ್ಲಾ ಆಯಾಮದಲ್ಲೂ ವಿಷಯ ಕೆದಕುತ್ತಿದ್ದಾರೆ.
ಲಿಂಗ ದೃಢೀಕರಣ ಪರೀಕ್ಷೆ
ಆರೋಪಿ ನಿಜವಾಗಿಯೂ ಟ್ರಾನ್ಸ್ಜೆಂಡರ್ ಆಗಿದ್ದಾನೋ ಅಥವಾ ನಕಲಿ ಗುರುತು ಮರೆ ಮಾಡಲು ಈ ಫಾರ್ಮ್ ಅಳವಡಿಸಿಕೊಂಡಿದ್ದಾನೋ ಅನ್ನೋದ್ರ ಬಗ್ಗೆಯೂ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇದಕ್ಕಾಗಿ ಆತನ ಲಿಂಗ ಪರಿಶೀಲನಾ ಪರೀಕ್ಷೆಯನ್ನೂ ಮಾಡಲಿದ್ದಾರೆ. ಹೆಚ್ಚಿನ ತನಿಖೆಗಾಗಿ 30 ದಿನಗಳ ಕಸ್ಟಡಿಗೆ ನಿಡಲಾಗಿದೆ. ನಂತರ ಗಡಿಪಾರಿಗೆ ಕಾನೂನು ಪ್ರಕ್ರಿಯೆಗಳು ಆರಂಭವಾಗಲಿವೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ನಮಗೆ ದೇಶ ಮುಖ್ಯ, ಪಾಕ್ ವಿರುದ್ಧ ಆಡಲ್ಲ ಎಂದ ಲೆಜೆಂಡ್ಸ್.. ಪಂದ್ಯ ರದ್ದು ಮಾಡಿ ಕ್ಷಮೆ ಕೇಳಿದ WCL!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ