/newsfirstlive-kannada/media/post_attachments/wp-content/uploads/2024/02/Team-India-Test-Squad.jpg)
ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2 ಟೆಸ್ಟ್‌ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈಗ ಟೀಮ್​ ಇಂಡಿಯಾ ತವರಿನಲ್ಲಿ ಅಕ್ಟೋಬರ್ 16ನೇ ತಾರೀಕಿನಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಗೆ ಇನ್ನೇನು ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಬೇಕಿದೆ. ಇದರ ಮಧ್ಯೆ ಟೀಮ್​ ಇಂಡಿಯಾದ ಯುವ ಬ್ಯಾಟರ್​​ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಕದ ತಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/10/Abhimanyu-Eashwaran.jpg)
ಇರಾನಿ ಕಪ್​​ನಲ್ಲಿ ಅಭಿಮನ್ಯು ಈಶ್ವರನ್​ ಅಬ್ಬರ
ಟೀಮ್​ ಇಂಡಿಯಾದ ಯುವ ಬ್ಯಾಟರ್ ಅಭಿಮನ್ಯು ಈಶ್ವರನ್​ ಇರಾನಿ ಕಪ್​​ನಲ್ಲಿ ಅಮೋಘ ಶತಕ ಸಿಡಿಸಿದ್ರು. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ರೆಸ್ಟ್​ ಆಫ್​ ಇಂಡಿಯಾ ಪರ ಬ್ಯಾಟ್​ ಬೀಸಿದ ಅಭಿಮನ್ಯು ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದ್ರು. ರೆಸ್ಟ್ ಆಫ್ ಇಂಡಿಯಾ ತಂಡದ ಪರ ಓಪನರ್​ ಆಗಿ ಬಂದ ಅಭಿಮನ್ಯು ಈಶ್ವರನ್ ಅಮೋಘ ಬ್ಯಾಟಿಂಗ್​ ಮಾಡಿದ್ರು. ಇವರು ಎದುರಿಸಿದ 292 ಎಸೆತಗಳಲ್ಲಿ ಬರೋಬ್ಬರಿ 191 ರನ್​ ಚಚ್ಚಿದ್ರು. ಬ್ಯಾಕ್​ ಟು ಬ್ಯಾಕ್​ 16 ಫೋರ್​​, 1 ಸಿಕ್ಸರ್​ ಸಿಡಿಸಿದ್ರು.
ಬಿಸಿಸಿಐ ಕದ ತಟ್ಟಿದ ಯುವ ಬ್ಯಾಟರ್​​
ಇನ್ನು, ಅಭಿಮನ್ಯು ಈಶ್ವರನ್ ಟೀಮ್​ ಇಂಡಿಯಾದ ಪ್ರತಿಭಾವಂತ ಬ್ಯಾಟರ್​​. ಇವರು ಇರಾನಿ ಕಪ್​​ನಲ್ಲಿ ಅಮೋಘ ಶತಕ ಸಿಡಿಸೋ ಮೂಲಕ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಗಮನ ಸೆಳೆದರು. ಮುಂದಿನ ಟೆಸ್ಟ್​​ ಸೀರೀಸ್​ಗೆ ಟೀಮ್​ ಇಂಡಿಯಾಗೆ ಆಯ್ಕೆ ಮಾಡಿ ಎಂದು ಸೂಚನೆ ಕೊಟ್ರು.
ಬಾರ್ಡರ್​​ ಗವಾಸ್ಕರ್​ ಕಪ್​​
ನವೆಂಬರ್​ನಿಂದ ಜನವರಿ ತಿಂಗಳವರಗೆ ಟೀಮ್​​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​​ ಗವಾಸ್ಕರ್ ಟ್ರೋಫಿ ಆಡಲಿದೆ. ಇದು 5 ಪಂದ್ಯಗಳ ಟೆಸ್ಟ್ ಸರಣಿ ಆಗಿದೆ. ನವೆಂಬರ್ 22 ರಿಂದಲೇ ಪರ್ತ್​​ ಸ್ಟೇಡಿಯಮ್​ನಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಹಾಗಾಗಿ ಇದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಈ ಸೀರೀಸ್​ಗೆ ಆಯ್ಕೆ ಮಾಡಿ ಎಂದು ಅಭಿಮನ್ಯು ಪರೋಕ್ಷ ಸಂದೇಶ ಸಾರಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us