ಬೃಹತ್ ಮೊತ್ತದ ರನ್ಗಳ ಬೆನ್ನು ಹತ್ತಿರುವ ಅಭಿಮನ್ಯು ಟೀಮ್
ನಾಯಕನ ಆಟಕ್ಕೆ ಎದುರಾಳಿ ಇಂಡಿಯಾ- ಸಿ ತಂಡ ಕಂಗಾಲು
ಆಂಧ್ರದ ಅನಂತಪುರದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ
ದುಲೀಪ್ ಟ್ರೋಫಿಯಲ್ಲಿ ಯಂಗ್ ಪ್ಲೇಯರ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಇಂಡಿಯಾ ಬಿ ತಂಡದ ಕ್ಯಾಪ್ಟನ್ ಅಭಿಮನ್ಯು ಈಶ್ವರನ್ ಭರ್ಜರಿ ಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆಂಧ್ರದ ಅನಂತಪುರದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ 4ನೇ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಇಂಡಿಯಾ ಸಿ ತಂಡ 525 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನತ್ತಿರುವ ಇಂಡಿಯಾ ಬಿ ಟೀಮ್ ಒಳ್ಳೆಯ ಬ್ಯಾಟಿಂಗ್ ಮಾಡುತ್ತಿದೆ. ಓಪನರ್ ಆಗಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ಈಶ್ವರನ್ ಹಾಗೂ ಎನ್ ಜಗದೀಶನ್ ಎದುರಾಳಿಗಳಿಗೆ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತರ ನೀಡಿದರು. ತಂಡಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಹೀಗಾಗಿ ತಂಡದ ಮೊತ್ತದ 129 ಇರುವಾಗ ಜಗದೀಶನ್ 70 ರನ್ಗೆ ಔಟ್ ಆದರೆ, ಅಭಿಮನ್ಯು ಈಶ್ವರನ್ ಶತಕ ಸಿಡಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಇದನ್ನೂ ಓದಿ: KL ರಾಹುಲ್ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?
ಕೇವಲ 107 ಎಸೆತಗಳನ್ನು ಎದುರಿಸಿರುವ ಅಭಿಮನ್ಯು ಈಶ್ವರನ್ 12 ಬೌಂಡರಿ, 1 ಸಿಕ್ಸರ್ ಸಮೇತ 121 ರನ್ಗಳನ್ನ ಗಳಿಸಿ ಕ್ರೀಸ್ನಲ್ಲಿ ಆಡುತ್ತಿದ್ದಾರೆ. ಓಪನಿಂಗ್ ಬಂದಿರುವ ಈಶ್ವರನ್ ದ್ವಿಶತಕದ ಹಾದಿಯಲ್ಲಿ ಸಾಗುತ್ತಿದ್ದಾರೆ. ಇನ್ನು ಪಂದ್ಯ ಆರಂಭವಾಗಿ ಇವತ್ತಿಗೆ 3 ದಿನಗಳು ಆಗಿದ್ದು ಇನ್ನೊಂದು ದಿನ ಬಾಕಿ ಉಳಿದಿದೆ. ಹೀಗಾಗಿ ಈಶ್ವರನ್ ದ್ವಿಶತಕ ಬಾರಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಇಂಡಿಯಾ ಬಿ ತಂಡ 6 ವಿಕೆಟ್ಗೆ 239 ರನ್ಗಳನ್ನು ಗಳಿಸಿದ್ದು ಬ್ಯಾಟಿಂಗ್ ಮಾಡುತ್ತಿದೆ. ಬಿ ಟೀಮ್ ಇನ್ನು 286 ರನ್ಗಳನ್ನು ಗಳಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ