newsfirstkannada.com

ಅಭಿಮನ್ಯು ಅಂಡ್ ಟೀಂನಿಂದ ರೋಚಕ ಕಾರ್ಯಾಚರಣೆ; 2 ದಿನದಲ್ಲಿ 2 ಪುಂಡಾನೆ ಸೆರೆ..!

Share :

Published January 17, 2024 at 7:19am

    ಚಿಕ್ಕೊಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳಿಂದ ಉಪಟಳ

    ಸುಗ್ರೀವ, ಧನಂಜಯ, ಪ್ರಶಾಂತ, ಹರ್ಷ, ಅಶ್ವತ್ಥಾಮ ಆನೆಗಳು ಭಾಗಿ

    ತಣ್ಣೀರ್ ಎಂಬ ಒಂಟಿ ಸಲಗವನ್ನ ಖೆಡ್ಡಾಗೆ ಬೀಳಿಸಿದ ಅಭಿಮನ್ಯು

ಮಲೆನಾಡು ಭಾಗದಲ್ಲಿ ಹೆಚ್ಚಾಗಿದ್ದ ಉಪಟಳಕ್ಕೆ ಇತೀಶ್ರೀ ಹಾಡುವ ಕಾರ್ಯವನ್ನು ಅರಣ್ಯಾಧಿಕಾರಿಗಳು ಮಾಡ್ತಿದ್ದಾರೆ. ಕಾಡಾನೆಗಳಿಗೆ ರೆಡಿಯೋ ಕಾಲರ್ ಅಳವಡಿಕೆೆ ಹಾಗೂ ಸೆರೆ ಹಿಡಿದು ಸ್ಥಳಾಂತರ ಮಾಡೋ ಕಾರ್ಯ ಮುಂದುವರೆದಿದೆ. 2ನೇ ದಿನದ ಕಾರ್ಯಾಚರಣೆ ವೇಳೆ 2ನೇ ಕಾಡಾನೆಯನ್ನು ಸಾಕಾನೆ ಅಭಿಮನ್ಯು ಅಂಡ್ ಟೀಂ ಖೆಡ್ಡಾಕ್ಕೆ ಬೀಳಿಸಿದೆ.

ಹಾಸನದ ಬೇಲೂರು ತಾಲೂಕಿನ ಚಿಕ್ಕೊಟಿ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದವು. ಈವೆರಗೂ ಮೂರು ಹೆಣ್ಣಾನೆಗಳಿಗೆ ರೆಡಿಯೋ ಕಾಲರ್ ಅಳವಡಿಸಿದ್ರು. ಈ ಮೂಲಕ ಕಾಡಾನೆಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ಕಣ್ಣಿಟ್ಟಿತ್ತು. ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಹರ್ಷ, ಅಶ್ವತ್ಥಾಮ ಮತ್ತು ಮಹೇಂದ್ರ ಆನೆಗಳು ಭಾಗಿಯಾಗಿದ್ದವು.

ಅಂದಾಗೆ ಬೇಲೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ತಣ್ಣೀರ್ ಎಂಬ ಒಂಟಿ ಸಲಗವನ್ನ ಅಭಿಮನ್ಯು ಅಂಡ್ ಟೀಂ ಮತ್ತು ವೈದ್ಯಾಧಿಕಾರಿಗಳು ಖೆಡ್ಡಾಕ್ಕೆ ಬೀಳಿಸಿದೆ.

ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ಆರಂಭ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ 6 ಸಾಕಾನೆಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಎಲ್ಲಂದರಲ್ಲಿ ಕಾಡಾನೆ ಓಡಾಡ್ತಿತ್ತು. ಪುಂಡಾನೆಗೆ ಅರವಳಿಕೆ ನೀಡಲು ವೈದ್ಯರು ಹರಸಾಹಸಪಟ್ಟಿದ್ದಾರೆ.

ಬಳಿಕ 10 ಗಂಟೆ ವೇಳೆಗೆ ಕೊನೆಗೂ ಸತತ ಪ್ರಯತ್ನದ ಫಲವಾಗಿ ತಣ್ಣೀರ್ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಇಲ್ಲೂ ಕೂಡ ಮೊದ್ಲು ಸಲಗ ಪ್ರಜ್ಞೆ ತಪ್ಪಲಿಲ್ಲ. ಅದಕ್ಕೆ ಸುಮಾರು ಒಂದು ಗಂಟೆ ಕಾಯಬೇಕಾಯ್ತು. ನಂತ್ರ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆಯನ್ನು ಸುತ್ತುವರಿದ ಕಾಡಾನೆಗಳು ಕ್ರೇನ್ ಮೂಲಕ ಲಾರಿ ಮೇಲೆ ಸ್ಥಳಾಂತರ ಮಾಡಲಾಯ್ತು.

ಈ ಕಾಡಾನೆಗಳ 2ನೇ ದಿನದ ಕಾರ್ಯಾಚರಣೆಯನ್ನು ನೋಡಲು ನೂರಾರು ಮಂದಿ ಸ್ಥಳೀಯರು ಸ್ಥಳದಲ್ಲಿ ಬೀಡುಬಿಟ್ಟಿದ್ದರು. ಕಾಡಾನೆಗಳ ಕಾರ್ಯಾಚರಣೆ ವೇಳೆ ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಎರಡು ಕಡೆ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸದ್ಯ ಎರಡು ಕಾಡಾನೆಗಳನ್ನ ಸೆರೆಹಿಡಿದು ಸ್ಥಳಾಂತರ ಮಾಡಲಾಗಿದೆ. ಆದ್ರೆ ಇನ್ನೂ ಈ ಭಾಗದಲ್ಲಿ ಮೂವತ್ತಕ್ಕೂ ಹೆಚ್ಚು ಕಾಡಾನೆಗಳಿದ್ದು, ಅವುಗಳ ಸ್ಥಳಾಂತರ ಯಾವಾಗ ಅನ್ನೋ ಚಿಂತೆ ಸ್ಥಳೀಯರನ್ನು ಕಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮನ್ಯು ಅಂಡ್ ಟೀಂನಿಂದ ರೋಚಕ ಕಾರ್ಯಾಚರಣೆ; 2 ದಿನದಲ್ಲಿ 2 ಪುಂಡಾನೆ ಸೆರೆ..!

https://newsfirstlive.com/wp-content/uploads/2024/01/Elephant-2-1.jpg

Load More